Bigg boss Kannada OTT : ರಾಕೇಶ್​ ಅಡಿಗನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಸ್ಫೂರ್ತಿ ಗೌಡ

Bigg boss Kannada : ಬಿಗ್​ಬಾಸ್​ ಶೋ ಅಂದರೆ ಅಲ್ಲೊಂದು ಲವ್​ ಸ್ಟೋರಿ ಆರಂಭವಾಗೋದು ಹೊಸದೇನಲ್ಲ. ಎಲ್ಲಾ ಸೀಸನ್​ನಲ್ಲಿಯೂ ಇಂತಹದ್ದೊಂದು ಕತೆ ಇದ್ದೇ ಇರುತ್ತೆ. ಇದಕ್ಕೆ ಬಿಗ್​ಬಾಸ್​ ಒಟಿಟಿ ಕೂಡ ಹೊಸದಾಗಿಲ್ಲ. ಬಿಗ್​ಬಾಸ್​ ಒಟಿಟಿ ಸ್ಪರ್ಧಿಗಳಾದ ರಾಕೇಶ್​ ಅಡಿಗ ಹಾಗೂ ಸ್ಪೂರ್ತಿ ಗೌಡ ನಡುವೆ ಸಮ್​ಥಿಂಗ್​ ಸಮ್​ಥಿಂಗ್​ ನಡೀತಾ ಇದೆ ಅನ್ನೋದು ಎಲ್ಲಾ ಕಡೆ ಚರ್ಚೆ ಆಗ್ತಾ ಇದೆ. ಈ ಬಗ್ಗೆ ವೀಕೆಂಡ್​ ಎಪಿಸೋಡ್​ನಲ್ಲಿಯೂ ಚರ್ಚೆಯಾಗಿದ್ದು ಆ ಬಳಿಕ ಸ್ಪೂರ್ತಿ ಗೌಡ ರಾಕೇಶ್​ರಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸೋನುಗೌಡನಿಗೆ ರಾಕೇಶ್​ ಅಡಿಗ ಅಂದರೆ ಇಷ್ಟ. ಸೋನು ಗೌಡನಿಗೆ ಉರಿಸಬೇಕೆಂದು ಸ್ಫೂರ್ತಿ ಗೌಡ ರಾಕೇಶ್​ ಅಡಿಗನಿಗೆ ಹತ್ತಿರವಾಗಿದ್ದಾರೆ. ರಾಕೇಶ್​ ಅಡಿಗ ಹಾಗೂ ಸ್ಪೂರ್ತಿ ಗೌಡ ನಡುವಿನ ಸ್ನೇಹಕ್ಕೆ ದೊಡ್ಮನೆ ಸದಸ್ಯರು ಬೇರೆಯದ್ದೇ ಬಣ್ಣ ಹಚ್ಚುತ್ತಿದ್ದಾರೆ. ವೀಕೆಂಡ್​ನಲ್ಲಿ ಸುದೀಪ್​ ಜೊತೆ ಈ ವಿಚಾರವಾಗಿ ಮಾತನಾಡಿದ್ದ ಜಯಶ್ರೀ ಸ್ಪೂರ್ತಿ ಯಾವಾಗಲೂ ರಾಕೇಶ್​ ಜೊತೆಯೇ ಇರ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ : Bigg Boss : ಸೋನುಗೌಡಗೆ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ

ಜಯಶ್ರೀಯ ಈ ಹೇಳಿಕೆ ಸ್ಪೂರ್ತಿ ಮನಸ್ಸಿಗೆ ಘಾಸಿಯುಂಟು ಮಾಡಿದೆ. ರಾತ್ರಿ ಈ ಸಂಬಂಧ ಜಯಶ್ರೀ ಜೊತೆ ಮಾತನಾಡಿದ ಸ್ಪೂರ್ತಿ ಈ ಬಗ್ಗೆ ಸ್ಪಷ್ಟನೆ ಕೂಡ ಕೇಳಿದ್ದಾರೆ. ಇದಕ್ಕೆ ಜಯಶ್ರೀ ನನಗೆ ಅನಿಸಿದ್ದನ್ನು ಹೇಳಿದ್ದೇನೆಂದು ಉತ್ತರ ನೀಡಿದ್ದಾರೆ. ರಾಕೇಶ್​ ಜೊತೆಗಿನ ಸ್ನೇಹ ತಮ್ಮ ಆಟಕ್ಕೆ ಮುಳುವಾಗುತ್ತಿದೆ ಎಂದು ಅರಿತಿರುವ ಸ್ಫೂರ್ತಿ ಗೌಡ ರಾಕೇಶ್​ರಿಂದ ಅಂತರ ಕಾಯ್ದುಕೊಳ್ತಿದ್ದಾರೆ. ಅಲ್ಲದೇ ರಾಕೇಶ್​ಗೆ ಅಣ್ಣ ಎಂದೂ ಕರೆಯಲು ನಿರ್ಧರಿಸಿದ್ದಾರೆ. ರಾಕೇಶ್​ರಿಂದ ಸ್ಪೂರ್ತಿ ದೂರವಾಗಿರೋದ್ರಿಂದ ಇದರ ಲಾಭವನ್ನು ಸೋನು ಗೌಡ ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದನ್ನು ಓದಿ : Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ ಗಿಮಿಕ್ ಎಂದ ಜನ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Tuesday astrology : ಹೇಗಿದೆ ಮಂಗಳವಾರದ ದಿನಭವಿಷ್ಯ

Rakesh Adiga Is my Brother Says Spoorthi Gowda In Bigg boss Kannada

Comments are closed.