ಬಿಗ್‌ಬಾಸ್‌ ಮನೆಗೆ ಸರ್ಪ್ರೈಸ್‌ ಎಂಟ್ರಿ ಕೊಟ್ಟ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌

ಬಿಗ್‌ ಬಾಸ್‌ ಕನ್ನಡ 10 ನೇ ಆವೃತ್ತಿ (Bigg Boss Season 10 Kannada ) ಆರಂಭಗೊಂಡಿದೆ. ಬಿಗ್‌ಬಾಸ್‌ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ (Chikkaballapur Congress MLA Pradeep Eshwar  ) ಸಪ್ರೈಸ್‌ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ 10 ನೇ ಆವೃತ್ತಿ (Bigg Boss Season 10 Kannada ) ಆರಂಭಗೊಂಡಿದೆ. ಕಲರ್ಸ್‌ ಕನ್ನಡ ವಾಹಿನಿ (Colours Kannada) ಜೊತೆಗೆ ಜಿಯೋ ಸಿನಿಮಾ ಒಟಿಟಿಯಲ್ಲಿ (Jio Cinema OTT)  ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಇದೀಗ ಬಿಗ್‌ಬಾಸ್‌ಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ (Chikkaballapur Congress MLA Pradeep Eshwar  ) ಸಪ್ರೈಸ್‌ ಎಂಟ್ರಿ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಈಗಾಗಲೇ ಬಿಗ್‌ಬಾಸ್‌ ಮನೆ ಸೇರಿಕೊಂಡಿದ್ದಾರೆ. ಪ್ರದೀಪ್‌ ಈಶ್ವರ್‌ ಅವರನ್ನು ನೋಡುತ್ತಿದ್ದಂತೆಯೇ ಬಿಗ್‌ ಬಾಸ್‌ ಸ್ಪರ್ಧಿಗಳು ಸಖತ್‌ ಥ್ರಿಲ್‌ ಆಗಿದ್ದಾರೆ. ಶಾಸಕರ ಜೊತೆಗೆ ಸ್ಪರ್ಧೆ ಮಾಡಬೇಕು ಅಂತಾನೂ ಮಾತನಾಡಿಕೊಳ್ಳುತ್ತಿದ್ದಾರೆ.

bigg boss season 10 kannada bigg boss house Entry Chikkaballapur Congress MLA Pradeep Eshwar
Image Credit : Colours Kannada

ಪ್ರದೀಪ್‌ ಈಶ್ವರ್‌ ಸದ್ಯ ಅತಿಥಿಯಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟಿದ್ದಾರೆ ಎನ್ನುತ್ತಿವೆ. ಆದರೆ ಪ್ರದೀಪ್‌ ಈಶ್ವರ್‌ ಬಿಗ್‌ಬಾಸ್‌ ಸೀಸನ್‌ ೧೦ರಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಆದರೆ ಪ್ರದೀಪ್‌ ಈಶ್ವರ್‌ ಎಷ್ಟು ದಿನಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : ಮತ್ತೊಂದು ದಾಖಲೆಗೆ ಸಜ್ಜಾದ ಪ್ರಶಾಂತ್ ನೀಲ್: ಪ್ರಭಾಸ್ ಸಲಾರ್ ರಿಲೀಸ್ ಗೆ ಡೇಟ್ ಫಿಕ್ಸ್

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಶಾಸಕ ಡಾ.ಸುಧಾಕರ್‌ ಅವರಿಗೆ ಸೋಲಿನ ರುಚಿ ತೋರಿಸಿದ್ದ ಪ್ರದೀಪ್‌ ಈಶ್ವರ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಶಾಸಕರಾದ ನಂತರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದರು. ಶಾಸಕರಾಗಿ ಮಾತ್ರವಲ್ಲದೇ ಪರಿಶ್ರಮ ನೀಟ್‌ ಅಕಾಡೆಮಿಯ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.

bigg boss season 10 kannada bigg boss house Entry Chikkaballapur Congress MLA Pradeep Eshwar
Image Credit : Colours Kannada

ಇನ್ನು ಈ ಬಾರಿಯ ಬಿಗ್‌ಬಾಸ್‌ ಸೀಸನ್‌ ಹಲವು ರೀತಿಯಲ್ಲಿ ಗಮನ ಸೆಳೆದಿದೆ. ಡ್ರೋನ್‌ ಪ್ರತಾಪ್‌, ನಾಗಿಣಿ ನಮ್ರತಾ ಗೌಡ, ಆಂಕರ್‌ ಗೌರೀಶ್‌ ಅಕ್ಕಿ ಸೇರಿದಂತೆ ಒಟ್ಟು 17 ಮಂದಿ ಸ್ಪರ್ಧಿಗಳು ಈಗಾಗಲೇ ಬಿಗ್‌ಬಾಸ್‌ ಮನೆಯನ್ನು ಸೇರಿಕೊಂಡಿದ್ದಾರೆ. ಈ ಪೈಕಿ ಬುಲೆಟ್‌ ಪ್ರಕಾಶ್‌ ಮಗ ರಕ್ಷತ್‌, ಡ್ರೋನ್‌ ಪ್ರತಾಪ್‌ ಸೇರಿದಂತೆ ಹಲವರು ಆರಂಭದಲ್ಲೇ ಡೇಜಂರ್‌ ಝೋನ್‌ ಸೇರಿದ್ದಾರೆ.

ಇದನ್ನೂ ಓದಿ : ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ

ಪುಟ್ಟಗೌರಿ ಮದುವೆ, ನಾಗಿಣಿ 2 ಧಾರಾವಾಹಿಯ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ನಮ್ರತಾ ಗೌಡ, ನಮ್ಮನೆ ಯುವರಾಣಿ ಖ್ಯಾತಿಯ ಸ್ನೇಹಿತ್‌ ಗೌಡ, ರಾಪರ್ ಈಶಾನಿ, ಹರಹರ ಮಹದೇವ್‌ ಧಾರಾವಾಹಿಯ ಶಿವನ ಪಾತ್ರಧಾರಿ ವಿನಯ್‌ ಗೌಡ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.

bigg boss season 10 kannada bigg boss house Entry Chikkaballapur Congress MLA Pradeep Eshwar
Image Credit : Colours Kannada

ಇನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತು, ಬ್ಯೂಟಿ ಪಾರ್ಲರ್‌ ಹಾಗೂ ಹೋಟೆಲ್‌ ಉದ್ಯಮಿ ನೀತು ವನಜಾಕ್ಷಿ, ರಂಗೋಲಿ ಧಾರಾವಾಹಿ ಖ್ಯಾತಿಯ ಸಿರಿ, ಮೈಸೂರಿನ ಖ್ಯಾತ ಸ್ನೇಕ್‌ ಶ್ಯಾಮ್‌ ಈಗಾಗಲೇ ಬಿಗ್‌ಬಾಸ್‌ ಮನೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಜೂನಿಯರ್‌ ಚಿರು ರಾಯನ್ ರಾಜ್ ಸರ್ಜಾ‌ ? ಏನಂದ್ರು ಗೊತ್ತಾ ತಾಯಿ ನಟಿ ಮೇಘನಾ ರಾಜ್‌ 

ಲಕ್ಷಣ ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿರುವ ಭಾಗ್ಯಶ್ರೀ, ಖ್ಯಾತ ಆಂಕರ್‌ ಗೌರೀಶ್‌ ಅಕ್ಕಿ, ಖ್ಯಾತ ಕೇಶ ವಿನ್ಯಾಸಕಾರ ಮೈಕಲ್‌ ತಾಯಿ, ಯುವ ವಿಜ್ಞಾನಿ ಡ್ರೋನ್‌ ಪ್ರತಾಪ್‌, ಚಾರ್ಲಿ 777  ಖ್ಯಾತಿಯ ಸಂಗೀತ ಶೃಂಗೇರಿ, ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ದೊಡ್ಮನೆ ಸೇರಿಕೊಂಡಿದ್ದಾರೆ.

ಇನ್ನು ರೈತ ವರ್ತೂರು ಸಂತೋಷ್‌, ಮಂಗಳಗೌರಿ ಧಾವಾಹಿ ಖ್ಯಾತಿಯ ತನಿಷಾ ಕುಪ್ಪಂಡ, ಡೊಳ್ಳು ಸಿನಿಮಾದ ನಟ ಕಾರ್ತಿಕ್‌ ಕೂಡ ಬಿಗ್ ಬಾಸ್‌ ಮನೆ ಸೇರಿದ್ದು, ಡೇಜಂರ್‌ ಝೋನ್‌ನಲ್ಲಿ ಇದ್ದಾರೆ.

bigg boss season 10 kannada bigg boss house Entry Chikkaballapur Congress MLA Pradeep Eshwar

Comments are closed.