Bigg Boss Season 9:ಬಿಗ್‌ ಬಾಸ್‌ ಎರಡನೇ ವಾರದ ಎಲಿಮಿನೆಷನ್ : ಯಾರು ಆಗ್ತಾರೆ ಔಟ್

Bigg Boss Season 9 elimination : ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ ಎರಡನೇ ವಾರಕ್ಕೆ ಮುನ್ನಡೆದಿದೆ. ಕಳೆದ ವಾರ ಒಂಬತ್ತು ಮಂದಿ ಎಲಿಮಿನೇಟ್ ಆಗಿದ್ದರು. ಆದರೆ ಈ ಬಾರಿಯೂ ಮತ್ತೆ ಒಂಬತ್ತು ಮಂದಿ ಎಲಿಮಿನೇಟ್ ಆಗಿದ್ದು, ಎಷ್ಟು ಮಂದಿಗೆ ಬಿಗ್ ಬಾಸ್ ಮನೆಯಿಂದ ಗೇಟ್ ಪಾಸ್ ದೊರೆಯಲಿದೆ ಅನ್ನೋ ಕುತೂಲ ಮೂಡಿಸಿದೆ. ಎರಡನೇ ವಾರದ ಬಿಗ್ ಬಾಸ್ ಮನೆಯಿಂದ ಔಟ್ ಆಗುವವರು ಯಾರೂ ಅನ್ನೋದು ಇಂದು ಗೊತ್ತಾಗಲಿದೆ.

ಈ ವಾರ(Bigg Boss Season 9) ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಎಲ್ಲಾ ಟಾಸ್ಕ್ ಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ. ಮನೆಯಲ್ಲಿ ನಡೆದ ಪ್ರಾಂಕ್‌ ವಿಚಾರವಾಗಿ ಮನೆಯವರೆಲ್ಲರೂ ರಾಕೇಶ್‌ ಮೇಲೆ ಅಸಮದಾನವನ್ನು ತೊರಿಸಿದರು.ಇದೇ ಕಾರಣಕ್ಕಾಗಿ ಅವರಿಗೆ ಕಳಪೆ ಪಟ್ಟವನ್ನು ಕೊಟ್ಟು ಜೈಲಿಗೆ ಕಳುಹಿಸಿದ್ದರು.ನಿನ್ನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಇದರ ಬಗ್ಗೆ ಚರ್ಚೆ ಕೂಡ ನಡೆಯಿತು. ಪ್ರತಿ ಬಾರಿಯು ಪ್ರಾಂಕ್‌ ಮಾಡುತ್ತಾ ಹೋದ್ರೆ ತೋಳ ಬಂತು ತೋಳದ ಕತೆಯಂತೆ ಆಗುತ್ತದೆ. ನೀವು ಸತ್ಯ ಹೇಳಿದರು ನಿಮ್ಮನ್ನು ಯಾರು ನಂಬುವುದಿಲ್ಲ.ಮಾತನಾಡುವಾಗ ಎಚ್ಚರವಿರಲಿ ಎಂಬ ಸೂಚನೆಯನ್ನು ಕೊಟ್ಟರು. ನೀವು ಯಾವುದೇ ಪ್ಲ್ಯಾನ್ ಮಾಡಿದರು ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.

ಇದನ್ನೂ ಓದಿ:Eye Care:ಕಣ್ಣಿನ ಸಮಸ್ಯೆಗೆ ಮನೆಯಲ್ಲೇ ಆರೈಕೆ

ಇದನ್ನೂ ಓದಿ:Bigg Boss 9:ದುಡ್ಡು ಇಸ್ಕೊಂಡು ನಗುವುದಕ್ಕೆ ಬರಲ್ಲ; ಆರ್ಯವರ್ಧನ್‌ ಗುರೂಜಿ ಮಾತಿಗೆ ಕಿಚ್ಚ ಸುದೀಪ್‌ ಕ್ಲಾಸ್

ಇದನ್ನೂ ಓದಿ:Gandhadagudi Trailer Release : ಅಪ್ಪು ಅಭಿನಯದ ‘ಗಂಧದಗುಡಿ’ ಟ್ರೇಲರ್ ಗ್ರ್ಯಾಂಡ್‌ ರೀಲಿಸ್‌

ಮಯೂರಿ, ನವಾಜ್‌, ದರ್ಶ್‌ ಚಂದ್ರಪ್ಪ, ಅಮೂಲ್ಯ ಗೌಡ, ನೇಹಾ ಗೌಡ, ರೂಪೇಶ್‌ ರಾಜಣ್ಣ, ಆರ್ಯವರ್ಧನ್‌ ಗುರೂಜಿ , ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌ ಸೇರಿದಂತೆ ಒಟ್ಟು ಒಂಬತ್ತು ಮಂದಿ ಎಲಿಮನೆಟ್‌ ಆಗಿದ್ದಾರೆ. ಇನ್ನು ನಿನ್ನೆಯ ಸಂಚಿಕೆಯಲ್ಲಿ ಸುದೀಪ್‌ ಅವರು ಆರ್ಯವರ್ಧನ್‌ ಗುರೂಜಿ ಮತ್ತು ದೀಪಿಕಾ ದಾಸ್‌ ಸೆಪ್‌ ಆಗಿದ್ದಾರೆ ಎಂದು ತಿಳಿಸಿದ್ದಾರೆ.ಇನ್ನು ಏಳು ಮಂದಿ ಬಾಕಿ ಉಳಿದಿದ್ಧಾರೆ. ಇವರಲ್ಲಿ ಇವತ್ತಿನ ಬಿಗ್ಬಾಸ್‌ ಸಂಚಿಕೆಯಿಂದ ಯಾರಿಗೆ ಗೆಟ್‌ ಪಾಸ್‌ ಎಂದು ತಿಳಿಯಬೇಕಿದೆ ಅಷ್ಟೇ.

Bigg Boss Season 9 2nd week elimination: Who will be out ?

Comments are closed.