ಭಾರೀ ಕುತೂಹಲ ಸೃಷ್ಟಿಸಿದ್ದ ತೆಲುಗು ಆವೃತ್ತಿಯ ಬಿಗ್ ಬಾಸ್ (Bigg Boss) ಸೀಸನ್ 5 ಫಿನಾಲೆ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ. ದೊಡ್ಮನೆ ಆಟದಲ್ಲಿ ಸನ್ನಿ ವಿಜೇತರಾಗಿ ಹೊರಹೊಮ್ಮಿದರೆ ಷಣ್ಮುಖ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಶ್ರೀರಾಮ ಚಂದ್ರ ಎರಡನೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 5 ವಿನ್ನರ್ ಟ್ರೋಫಿ ಎತ್ತಿ ಹಿಡಿದ ಸನ್ನಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣ, ಬೈಕ್ ಹಾಗೂ 25 ಲಕ್ಷ ರೂಪಾಯಿ ಮೌಲ್ಯದ ಪ್ಲೋಟ್ನ್ನು ಬಹುಮಾನದ ರೂಪದಲ್ಲಿ ಪಡೆದಿದ್ದಾರೆ.
ಟಿವಿ ಶೋಗಳಲ್ಲಿ ನಿರೂಪಕನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸನ್ನಿ ಲೈಫ್ಸ್ಟೈಲ್ ಚಾನೆಲ್ಗಳಲ್ಲಿ ಕೆಲಸ ಮಾಡಿ ಬಳಿಕ ವಿಜೆ ಆಗಿದ್ದರು. ಕೊನೆಗೆ ಕಲ್ಯಾಣ ವೈಭೋಗಂ ಮೂಲಕ ನಟನೆಯನ್ನೂ ಆರಂಭಿಸಿದ್ದರು.
ಬಿಗ್ಬಾಸ್ ಸೀಸನ್ 5 ಕಾರ್ಯಕ್ರಮವನ್ನು ನಟ ನಾರ್ಗಾಜುನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್.ಎಸ್ ರಾಜಮೌಳಿ, ಆಲಿಯಾಭಟ್, ರಣಬೀರ್ ಕಪೂರ್, ನಾಣಿ, ನಾಗ ಚೈತನ್ಯ, ಶ್ರೀಯಾ ಶರಣ್ ಹಾಗೂ ಅಯಾನ್ ಮುಖರ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸೆಪ್ಟೆಂಬರ್ 5ರಂದು ಆರಂಭವಾಗಿದ್ದ ಬಿಗ್ ಬಾಸ್ ತೆಲುಗು ಸೀಸನ್ 5 ಬರೋಬ್ಬರಿ 106 ದಿನಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ. ಬಿಗ್ಬಾಸ್ ತೆಲುಗು ಸೀಸನ್ 5ನಲ್ಲಿ ಸರಯು, ಉಮಾದೇವಿ, ಲಹರಿ, ನಟರಾಜ್, ಹಮಿದಾ, ಶ್ವೇತಾ ವರ್ಮಾ, ಪ್ರಿಯಾ, ಲೊಬೋ, ವಿಶ್ವ, ಜಸ್ವಂತ್, ಅನಿ, ರವಿ, ಪ್ರಿಯಾಂಕ ಸಿಂಗ್ , ಕಾಜಲ್. ಸನ್ನಿ, ಶ್ರೀರಾಮ ಚಂದ್ರ, ಸಿರಿ ಹನ್ಮಂತ್, ಷಣ್ಮುಖ್ ಜಸ್ವಂತ್ ಹಾಗೂ ಸನ್ನಿ 19 ಮಂದಿ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ನೀಡಿದ್ದರು. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಬಿಗ್ಬಾಸ್ ಮನೆಯಲ್ಲಿ ಈ ಸೆಲೆಬ್ರಿಟಿಗಳು ವಾಸ್ತವ್ಯ ಹೂಡಿದ್ದರು.
19 ಮಂದಿ ಸ್ಪರ್ಧಿಗಳಲ್ಲಿ 13 ಮಂದಿ ವಾರದ ಕೊನೆಯಲ್ಲಿ ವೀಕ್ಷಕರಿಂದ ಕಡಿಮೆ ಮತ ಪಡೆದುಕೊಂಡ ಕಾರಣಕ್ಕೆ ಎಲಿಮಿನೇಟ್ ಆಗಿದ್ದರು, ಈ ಸೀಸನ್ನಲ್ಲಿ ಸರಯು ಮೊಟ್ಟ ಮೊದಲು ಎಲಿಮಿನೇಟ್ ಆದ ಮನೆಯ ಸದಸ್ಯೆ ಆಗಿದ್ದಾರೆ. ಕೊನೆಯ ಬಾರಿಗೆ ಜನರಿಂದ ಕಡಿಮೆ ಮತ ಪಡೆದು 98ನೇ ದಿನಕ್ಕೆ ಕಾಜಲ್ ಮನೆಯಿಂದ ಹೊರಬಂದಿದ್ದರು . ಜಸ್ವಂತ್ ಅನಾರೋಗ್ಯದಿಂದಾಗಿ ಶೋನಿಂದ ಹೊರನಡೆದಿದ್ದರು.
Bigg Boss Telugu season 5 winner Sunny wins Rs 50 lakh, a bike and plot worth Rs 25 lakh, Shanmukh and Sreerama Chandra are runners-up
ಇದನ್ನು ಓದಿ : Shocking Video :ಮೊಬೈಲ್ ಆಸೆಗಾಗಿ ಮಹಿಳೆ ಮೇಲೆ ದೌರ್ಜನ್ಯ..! ನಡುರಸ್ತೆಯಲ್ಲಿ ಮಹಿಳೆಯನ್ನು ಎಳೆದಾಡಿದ ಪಾಪಿಗಳು..!
ಇದನ್ನೂ ಓದಿ : Ragini Dwivedi Injured : ರಾಗಿಣಿ ಅಭಿಮಾನಿಗಳಿಗೆ ಶಾಕ್: ತುಪ್ಪದ ಬೆಡಗಿ ಕೊಟ್ರು ಸ್ಯಾಡ್ ನ್ಯೂಸ್