Instagram Reels: ನಿಮ್ಮ ಪ್ರತಿಭೆಯನ್ನು ವಿಶ್ವಕ್ಕೇ ತೋರಿಸಿ : ಇನ್ಸ್ಟಾಗ್ರಾಂ ರೀಲ್ಸ್ ಮಾಡುವ ವಿಧಾನ ಇಲ್ಲಿದೆ

ಇನ್ಸ್ಟಾಗ್ರಾಮ್ ರೀಲ್ಸ್ (Instagram Reels ) ಅನ್ನು ಆಗಸ್ಟ್, 2020 ರಲ್ಲಿ ಪರಿಚಯಿಸಲಾಯಿತು. ಇದು ಸಖತ್ ಜನಪ್ರಿಯ ಆಗಿದೆ. ಇದನ್ನು ಬಳಸಿದ ಹೆಚ್ಚಿನ ಜನರು ಈ ವೈಶಿಷ್ಟ್ಯವನ್ನು ಇಷ್ಟಪಡುತ್ತಿದ್ದಾರೆ. ರೀಲ್‌ಗಳನ್ನು ಬಳಸುವ ಮೂಲಕ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸಣ್ಣ, ಮನರಂಜನೆಯ ವೀಡಿಯೊಗಳನ್ನು ಕ್ರಿಯೇಟ್ ಮಾಡಬಹುದು ಮತ್ತು ಸರ್ಚ್ ಮಾಡಬಹುದು.

ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಒದಗಿಸಿದ ಮಾಹಿತಿಯ ಪ್ರಕಾರ, ಇನ್ಸ್ಟಾಗ್ರಾಮ್ ಕ್ಯಾಮರಾದಲ್ಲಿ 60 ಸೆಕೆಂಡುಗಳವರೆಗೆ ಸಣ್ಣ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಮತ್ತು ಸಂಪಾದಿಸಲು ರೀಲ್ಸ್ ನಿಮಗೆ ಅನುಮತಿಸುತ್ತದೆ. ನಿಮ್ಮ ರೀಲ್‌ಗೆ ನೀವು ಫಿಲ್ಟರ್ಸ್ ಮತ್ತು ಬ್ಯಾಕ್ ಗ್ರೌಂಡ್ ಸೇರಿಸಬಹುದು ಅಥವಾ ನಿಮ್ಮ ಸ್ವಂತ ಒರಿಜಿನಲ್ ಆಡಿಯೊವನ್ನು ಬಳಸಬಹುದು. ಆದಾಗ್ಯೂ, ರೀಲ್ಸ್ ಪ್ರಸ್ತುತ ಎಲ್ಲರಿಗೂ ಲಭ್ಯವಿಲ್ಲ ಎಂದು ಗಮನಿಸಬೇಕಾಗಿದೆ. ಕೆಲವು ಖಾತೆಗಳು ರೀಲ್‌ಗಳನ್ನು ನೋಡಲು ಸಾಧ್ಯವಾಗಬಹುದು, ಆದರೆ ಅವುಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ನೀವು ಫೀಡ್‌ನಲ್ಲಿ ನಿಮ್ಮ ಫಾಲೋವರ್ಸ್ ಜೊತೆ ರೀಲ್‌ಗಳನ್ನು ಹಂಚಿಕೊಳ್ಳಬಹುದು ಮತ್ತು ನೀವು ಸಾರ್ವಜನಿಕ ಖಾತೆಯನ್ನು ಹೊಂದಿದ್ದರೆ, ಎಕ್ಸ್‌ಪ್ಲೋರ್‌ನಲ್ಲಿ ಅವುಗಳನ್ನು ವಿಶಾಲವಾದ ಇನ್ಸ್ಟಾಗ್ರಾಮ್ ಸಮುದಾಯಕ್ಕೆ ಲಭ್ಯವಾಗುವಂತೆ ಮಾಡುತ್ತದೆ. “ರೀಲ್ಸ್ ಇನ್ ಎಕ್ಸ್‌ಪ್ಲೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಸೃಷ್ಟಿಕರ್ತರಾಗಲು ಮತ್ತು ಜಾಗತಿಕ ವೇದಿಕೆಯಲ್ಲಿ ಹೊಸ ಪ್ರೇಕ್ಷಕರನ್ನು ತಲುಪಲು ಯಾರಿಗಾದರೂ ಅವಕಾಶವನ್ನು ನೀಡುತ್ತದೆ” ಎಂದು ಇನ್ಸ್ಟಾಗ್ರಾಮ್ ಹೇಳಿದೆ. ಆದಾಗ್ಯೂ, ನೀವು ಇನ್ಸ್ಟಾಗ್ರಾಮ್ ಗೆ ಹೊಸಬರಾಗಿದ್ದರೆ ಅಥವಾ ರೀಲ್‌ಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಹೆಚ್ಚು ತಿಳಿದಿಲ್ಲದಿದ್ದರೆ, ನೀವು ಅದನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ.

ರೀಲ್ಸ್ ಹೇಗೆ ಕ್ರಿಯೇಟ್ ಮಾಡಬಹುದು?

  1. ಇನ್ಸ್ಟಾಗ್ರಾಮ್ ಓಪನ್ ಮಾಡಿ, ಅಲ್ಲೇ ಮೇಲೆ ಕಾಣುವ “+” ಚಿಹ್ನೆ ಒತ್ತಿ.
  2. ಅಲ್ಲಿ ಕಾಣುವ ಆಪ್ಶನ್ಗಳಲ್ಲಿ ರೀಲ್ಸ್ ಸೆಲೆಕ್ಟ್ ಮಾಡಿ.
  3. ಇನ್ನು ಕ್ಯಾಮೆರಾ ಚಿಹ್ನೆ ಕ್ಲಿಕ್ ಮಾಡಿ ರೆಕಾರ್ಡಿಂಗ್ ಸ್ಟಾರ್ಟ್ ಮಾಡಿ. ಇಲ್ಲವೇ ಕ್ಯಾಮೆರಾ ರೋಲ್ ಹೋಗಿ ಪ್ರಿವಿಯಸ್ ರೆಕಾರ್ಡಿಂಗ್ ಪೋಸ್ಟ್ ಮಾಡಬಹುದು.(60 ಸೆಕೆಂಡ್)
  4. ಟಾಪ್ ಮಾಡಿ ಟ್ರಿಮ್, ಎಡಿಟ್ ಮಾಡಿ. ಕೊನೆಗೆ ಡನ್ ಎಂದು ಕ್ಲಿಕ್ ಮಾಡಿ.
  5. ನೆಕ್ಸ್ಟ್ ಎಂದು ಕ್ಲಿಕ್ ಮಾಡಿ ಸ್ಟಿಕರ್, ಫಾಂಟ್, ಟೆಕ್ಸ್ಟ್ ಆಡ್ ಮಾಡಿ ಡೌನ್ಲೋಡ್ ಮಾಡಲು ಸಾಧ್ಯ.
  6. ಇನ್ನು ಶೇರ್ ಆಪ್ಶನ್ ಕ್ಲಿಕ್ ಮಾಡಿ, ಕವರ್ ಫೋಟೋ ಕ್ಯಾಪ್ಷನ್ ಅಡ್ ಮಾಡಿ. ಬೇಕಿದ್ದರೆ ಸ್ಟೋರಿಗೂ ಆಡ್ ಮಾಡಬಹುದು.
  7. ನೆಕ್ಸ್ಟ್ ಟಾಪ್ ಮಾಡಿ ಶೇರ್ ಆಪ್ಶನ್ ಕ್ಲಿಕ್ ಮಾಡಿ.

    ರೀಲ್ಸ್ ಡಿಲೀಟ್ ಮಾಡುವುದು ಹೇಗೆ
    1. ರೈಟ್ ಕಾರ್ನರ್‌ನಲ್ಲಿ ಕಾಣುವ ನಿಮ್ಮ ಪ್ರೊಫೈಲ್ ಕ್ಲಿಕ್ ಮಾಡಿ,ನಿಮ್ಮ ಪ್ರೊಫೈಲ್ ಹೋಗಿ
    2.ಅಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ.
    3.ಬೇಕಾದ ರೀಲ್ಸ್ ಕ್ಲಿಕ್ ಮಾಡಿ ಮೋರ್ ಆಪ್ಶನ್ ಕ್ಲಿಕ್ ಮಾಡಿ. ನಂತರ ಡಿಲೀಟ್ ಮಾಡಿ

ಇದನ್ನೂ ಓದಿ : WhatsApp voice message : ವಾಟ್ಸಾಪಲ್ಲಿ ವಾಯ್ಸ್ ಮೆಸೇಜ್ ಕಳಿಸುವ ಮುನ್ನ ನಿಮ್ಮ ಮೆಸೇಜನ್ನ ನೀವೇ ಕೇಳುವುದು ಹೇಗೆ?

ಇದನ್ನೂ ಓದಿ : Google search Engine : ಗೂಗಲ್ ಇಲ್ಲದಿರುವ ದೇಶಗಳೂ ಇವೆ !

ಇದನ್ನೂ ಓದಿ : Android Phone Security: ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ ಬಳಸಿ ಮೊಬೈಲನ್ನು ಸುರಕ್ಷಿತವಾಗಿಡುವುದು ಹೇಗೆ?

(How to create Instagram Reels and delete Step by step guide)

Comments are closed.