Sakshi-Dhoni Romantic : ಅದ್ಧೂರಿ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಧೋನಿ ದಂಪತಿ..! ಫೋಟೋ ವೈರಲ್​

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ತಮ್ಮ ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝೀವಾ ಧೋನಿ ಜೊತೆಯಲ್ಲಿ ಜೈಪುರದಲ್ಲಿ ಕಾಂಗ್ರೆಸ್​ ನಾಯಕ ಪ್ರಫುಲ್​ ಪಟೇಲ್​ ವಿವಾಹದಲ್ಲಿ ಕಾಣಿಸಿಕೊಂಡರು. ಈ ಅದ್ಧೂರಿ ವಿವಾಹದಲ್ಲಿ ಮಹೇಂದ್ರ ಸಿಂಗ್​ ಧೋನಿ ಸಖತ್​ ರೊಮ್ಯಾಂಟಿಕ್​​ ಮೂಡನಲ್ಲಿ ಕಾಣಿಸಿಕೊಂಡಿದ್ದು ಮುದ್ದಾದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.(sakshi-Dhoni Romantic)

ಜನರಿಂದ ತುಂಬಿ ತುಳುಕುತ್ತಿದ್ದ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್​ ಧೋನಿ ತಮ್ಮ ಪತ್ನಿ ಸಾಕ್ಷಿಯ ಜೊತೆಯಲ್ಲಿ ಸಖತ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡರು. ಪತಿ – ಪತ್ನಿ ಒಬ್ಬರನ್ನೊಬ್ಬರು ನೋಡುತ್ತಾ ಕುಳಿತಿರುವ ಮುದ್ದಾದ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಹಾಟ್ ಕೇಕ್​ನಂತೆ ಸೇಲ್​ ಆಗ್ತಿದೆ. ಫೋಟೋದಲ್ಲಿ ಸಾಕ್ಷಿ ಹಾಗೂ ಧೋನಿ ನಡುವಿನ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.


ಕೇವಲ ಈ ಮುದ್ದಾದ ಫೋಟೋ ಮಾತ್ರವಲ್ಲದೇ ಮಹೇಂದ್ರ ಸಿಂಗ್​ ಧೋನಿ ಈ ಮದುವೆ ಕಾರ್ಯಕ್ರಮದಲ್ಲಿ ಪತ್ನಿ ಸಾಕ್ಷಿ ಜೊತೆಯಲ್ಲಿ ಹೆಜ್ಜೆ ಕೂಡ ಹಾಕಿದ್ದಾರೆ. ಅದ್ಧೂರಿ ಮದುವೆಯನ್ನು ಧೋನಿ ದಂಪತಿ ತಮ್ಮದೇ ಶೈಲಿಯಲ್ಲಿ ಎಂಜಾಯ್​ ಮಾಡಿದ್ದಾರೆ . ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಈ ರೀತಿಯಾಗಿ ಮಹೇಂದ್ರ ಸಿಂಗ್​ ಧೋನಿ ಹಾಗೂ ಸಾಕ್ಷಿ ಧೋನಿಯನ್ನು ನೋಡಿರದ ಅಭಿಮಾನಿಗಳಂತೂ ಫುಲ್​ ಖುಶ್​ ಆಗಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಹಾಗೂ ಸಾಕ್ಷಿ ದಂಪತಿ ಸಾಕಷ್ಟು ಬಾರಿ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ ನಂತರ ಸಾಕಷ್ಟು ಬಿಡುವು ಮಾಡಿಕೊಂಡಿರುವ ಧೋನಿ ಪತ್ನಿಯೊಂದಿಗೆ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮಹೇಂದ್ರ ಸಿಂಗ್‌ ಧೋನಿ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದ್ದು, ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿದೆ. ಐಪಿಎಲ್‌ ಆರಂಭದಿಂದಲೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದಲ್ಲಿ ಈ ಬಾರಿ ಐಪಿಎಲ್‌ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಇದನ್ನು ಓದಿ :Ragini Dwivedi Injured : ರಾಗಿಣಿ ಅಭಿಮಾನಿಗಳಿಗೆ ಶಾಕ್: ತುಪ್ಪದ ಬೆಡಗಿ ಕೊಟ್ರು ಸ್ಯಾಡ್ ನ್ಯೂಸ್

ಇದನ್ನೂ ಓದಿ : Vijay Hazare Trophy 2021 : ಪಾಂಡೆ, ಸಿದ್ದಾರ್ಥ್‌, ಸಮರ್ಥ ಆರ್ಭಟ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

mahendra singh dhoni goes romantic with wife sakshi dhoni at congress leader praful patel so wedding Sakshi-Dhoni Romantic

Comments are closed.