ಸೋಮವಾರ, ಏಪ್ರಿಲ್ 28, 2025
HomeCinemaYash Special Gift : ರಾಕಿಂಗ್ ಸ್ಟಾರ್ ಯಶ್ ಗೆ ಬರ್ತಡೇ ಸಂಭ್ರಮ : ಮಕ್ಕಳಿಂದ...

Yash Special Gift : ರಾಕಿಂಗ್ ಸ್ಟಾರ್ ಯಶ್ ಗೆ ಬರ್ತಡೇ ಸಂಭ್ರಮ : ಮಕ್ಕಳಿಂದ ಸಿಕ್ತು ಕ್ಯೂಟ್ ಗಿಫ್ಟ್

- Advertisement -

ರಾಕಿಂಗ್ ಸ್ಟಾರ್, ಯೂತ್ ಐಕಾನ್, ಫ್ಯಾನ್ ಇಂಡಿಯಾ ಸ್ಟಾರ್ ಯಶ್ (Yash Special Gift) ​ಬರ್ತಡೇ ಸಂಭ್ರಮದಲ್ಲಿದ್ದಾರೆ. 36 ನೇ ವರ್ಷದ ಹುಟ್ಟುಹಬ್ಬಕ್ಕೆ ಯಶ್ ಗೆ ಕೊರೋನಾ ಮತ್ತೊಮ್ಮೆ ಅಡ್ಡಿಯಾಗಿದ್ದರೂ ಸುಂದರವಾದ ಹಾಗೂ ಮನಸ್ಸಿಗೆ ಹತ್ತಿರವಾದಂತಹ ಗಿಫ್ಟ್ ಸಿಕ್ಕಿದೆ. ಅದೇನೂ ಅಂದ್ರಾ ಈ ಸ್ಟೋರಿ ಓದಿ. ಎಲ್ಲ ಅಂದು ಕೊಂಡಂತೆ ಆಗಿದ್ದರೇ, ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ಕೊರೋನಾ ಹಾಗೂ ಓಮೈಕ್ರಾನ್ ಭೀತಿ ಯಶ್ ಹುಟ್ಟುಹಬ್ಬದ ಸಂಭ್ರಮ ಕಿತ್ತುಕೊಂಡಿದೆ.

ಹುಟ್ಟುಹಬ್ಬ ಕ್ಕೂ ಮುನ್ನವೇ ಮಾತನಾಡಿದ ಯಶ್ ಈ ವರ್ಷವೂ ಅದ್ದೂರಿ ಆಚರಣೆ ಬೇಡ. ನೀವು ಇದ್ದಲ್ಲಿಂದಲೇ ಹಾರೈಸಿ ಎಂದು ಮನವಿ ಮಾಡಿದ್ದರು. ರಾಜ್ಯದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಭೀತಿಯಿಂದ ಜಾರಿಯಾಗಿರುವ ವೀಕೆಂಡ್ ಕರ್ಪ್ಯೂ ಕೂಡ ಈ ಸಂಭ್ರಮಕ್ಕೆ ಅಡಚಣೆಯಾಗಿದೆ. ಆದರೆ ಈ ಯಶ್ ಬರ್ತಡೇ ಮನೆಯಲ್ಲೇ ಅದ್ದೂರಿಯಾಗಿ ಆಚರಿಸಲ್ಪಟ್ಟಿದೆ. ಮಧ್ಯರಾತ್ರಿ ಸುಂದರವಾದ ಕೇಕ್ ಕತ್ತರಿಸಿ ಕುಟುಂಬದ ಸದಸ್ಯರ ಜೊತೆ ಯಶ್ ಬರ್ತಡೇ ಸೆಲಿಬ್ರೇಟ್ ಮಾಡಿದ್ದಾರೆ.

ಕೆಜಿಎಫ್-೨ ಯಶ್ ಅವತಾರವನ್ನು ನೆನಪಿಸುವ ಗನ್ ಹಿಡಿದ ಯಶ್ ಪ್ರತಿಮೆಯನ್ನು ಕೇಕ್‌ನಲ್ಲೇ ನಿರ್ಮಿಸಲಾಗಿದ್ದು, ಸಲಾಂ ರಾಖಿ ಬಾಯ್ ಎಂಬ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವ ವೀಡಿಯೋವನ್ನು ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಯಶ್ ಗೆ ಒಂದು ಹೃದಯ ಸ್ಪರ್ಶಿ ಗಿಫ್ಟ್ ಮನೆಯಿಂದ ಸಿಕ್ಕಿದೆ. ಹೌದು ಒಂದು ಬಿಳಿಯ ಹಾಳೆಯಲ್ಲಿ ಹೃದಯದ ಚಿತ್ರವನ್ನು ಬಿಡಿಸಿ ಅದರೊಳಗೆ ಯಶ್ ಇಬ್ಬರು ಮಕ್ಕಳ ಅಂಗೈಯನ್ನು ಬಣ್ಣದಲ್ಲಿ ಅದ್ದಿದ ಚಿತ್ರವನ್ನು ಸಿದ್ಧಪಡಿಸಲಾಗಿದೆ.

ಹ್ಯಾಪಿ ಬರ್ತಡೇ ಡಾಡಾ ಎಂಬ ಬರಹದ ಜೊತೆಗೆ ಈ ಗಿಫ್ಟ್ ನ್ನು ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಯಶ್ ಗೆ ನೀಡಿದ್ದು ಈ ವಿಡಿಯೋವನ್ನು ರಾಧಿಕಾ ಪಂಡಿತ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಕೇವಲ ಮಕ್ಕಳು ಮಾತ್ರವಲ್ಲ ಕೆಜಿಎಫ್-೨ ನಿರ್ದೇಶಕ ಪ್ರಶಾಂತ್ ನೀಲ್, ಬಾಲಿವುಡ್ ನಟಿ ರವೀನಾ ಟಂಡನ್ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಯಶ್ ಗೆ ಶುಭಹಾರೈಸಿದ್ದಾರೆ. ಇನ್ನೇನು ಎರಡು ಮೂರು ತಿಂಗಳಲ್ಲೇ ಕೆಜಿಎಫ್-2 ತೆರೆಗೆ ಬರೋದರಿಂದ ಚಿತ್ರತಂಡ ಹೊಸ ಟ್ರೇಲರ್ ಅಥವಾ ಟೀಸರ್ ರಿಲೀಸ್ ಮಾಡದೇ ಕುತೂಹಲ ಕಾಯ್ದುಕೊಂಡಿದೆ.

ಇದನ್ನೂ ಓದಿ : ವಿಕ್ರಾಂತ್ ರೋಣ ಓಟಿಟಿ ರಿಲೀಸ್ ಗೆ 100 ಕೋಟಿ ಆಫರ್ : ನಿರ್ಮಾಪಕ ಜಾಕ್ ಮಂಜು ಹೇಳಿದ್ದೇನು ಗೊತ್ತಾ

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಬರ್ತಡೇಗೆ ಫ್ಯಾನ್ಸ್ ಗಿಫ್ಟ್ : ಬಿಡುಗಡೆಯಾಯ್ತು ಕಾಮನ್ ಡಿಪಿ

(Birthday Celebration for Rocking Star Yash, special gift form son and daughter)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular