Karnataka weekend curfew : ವೀಕೆಂಡ್ ಕರ್ಫ್ಯೂಗೆ ಡೋಂಟ್​ಕೇರ್​: ಮಾಸ್ಕ್ ಧರಿಸದೇ ಜನರ ಓಡಾಟ

Karnataka weekend curfew : ಕೊರೊನಾ ಎರಡನೆ ಅಲೆಯಲ್ಲಿ ಉಂಟಾದ ಯಾವುದೇ ಅನಾಹುತಗಳು ಮೂರನೇ ಅಲೆಯಲ್ಲಿ ಸಂಭವಿಸಬಾರದು. ಹೀಗಾಗಿ ಕೊರೊನಾ ಸಂಭಾವ್ಯ ಮೂರನೇ ಅಲೆಯ ಆರಂಭದಲ್ಲಿಯೇ ರಾಜ್ಯ ಸರ್ಕಾರವು ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂನಂತಹ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ನಿನ್ನೆ ರಾತ್ರಿ 10 ಗಂಟೆಯಿಂದ ವೀಕೆಂಡ್​ ಕರ್ಫ್ಯೂ ಆರಂಭವಾಗಿದೆ. ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು ಕರ್ಫ್ಯೂ ನಿಯಮಾವಳಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಗಳ ಎಚ್ಚರಿಕೆ ನೀಡಲಾಗಿದೆ.


ಸರ್ಕಾರದ ಕಟ್ಟು ನಿಟ್ಟಿನ ಆದೇಶದ ಬಳಿಕವೂ ಜನತೆ ಎಚ್ಚೆತ್ತಂತೆ ಕಂಡುಬರಲಿಲ್ಲ. ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿದ ಬೆಂಗಳೂರು ಪಶ್ಚಿಮ ವಿಭಾಗದ ಜನರು ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ತಿರುಗಾಡಿದ ದೃಶ್ಯಗಳು ಕಂಡುಬಂದಿವೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 10ಕ್ಕೂ ಹೆಚ್ಚು ವಾಹನಗಳನ್ನು ಸೀಝ್​ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿಯೂ ವೀಕೆಂಡ್​ ಕರ್ಫ್ಯೂ ಕೆಲಸ ಮಾಡಿದಂತೆ ಕಂಡು ಬರಲಿಲ್ಲ. ಎಂದಿನಂತೆ ಹೋಟೆಲ್​ ಹಾಗೂ ಟೀ ಸ್ಟಾಲ್​ಗಳ ಬಳಿ ತೆರಳಿದ ಜನತೆ ವೀಕೆಂಡ್​ ಕರ್ಫ್ಯೂ ನಿಯಮಗಳನ್ನು ಗಾಳಿಗೆ ತೂರಿದ್ದು ಸ್ಪಷ್ಟವಾಗಿ ಕಂಡು ಬಂದಿದೆ. ಇತ್ತ ಮೈಸೂರಿನ ಪರಿಸ್ಥಿತಿಯೂ ಇದೇ ರೀತಿ ಇದ್ದು ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಧರಿಸದೇ ಮಾರ್ಕೆಟ್​ಗಳಲ್ಲಿ, ಹೋಟೆಲ್​, ರೆಸ್ಟಾರೆಂಟ್​ಗಳಲ್ಲಿ ಬೇಕಾಬಿಟ್ಟಿ ಓಡಾಡಿದ್ದಾರೆ.
ಬೆಳಗಾವಿಯಲ್ಲಿಯೂ ಪರಿಸ್ಥಿತಿ ಇದೇ ರೀತಿ ಇದ್ದು ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದ ಜನತೆ ದೈನಂದಿನ ಕಾರ್ಯಗಳಲ್ಲಿ ನಿರತರಾಗಿದ್ದು ಕಂಡುಬಂತು. ಬಳ್ಳಾರಿ, ಚಿಕ್ಕಬಳ್ಳಾಪುರ, ಕೊಪ್ಪಳ, ಬೀದರ್, ದಾವಣಗರೆಯಲ್ಲಿಯೂ ಸಹ ವೀಕೆಂಡ್ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಲಾಗಿದೆ.


ಆದರೆ ರಾಯಚೂರು ಹಾಗೂ ಬಾಗಲಕೋಟೆ ಭಾಗಗಳಲ್ಲಿ ಮಾತ್ರ ಮೊದಲ ದಿನದ ವೀಕೆಂಡ್​ ಕರ್ಫ್ಯೂ ಯಶಸ್ವಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ರಾಯಚೂರಿನಲ್ಲಿ ತರಕಾರಿ ಮಾರ್ಕೆಟ್​ಗಳು, ಬಸ್​ ನಿಲ್ದಾಣಗಳು ಬಿಕೋ ಎಂದಿದ್ದರೆ ಇತ್ತ ಬಾಗಲಕೋಟೆಯಲ್ಲಿಯೂ ಪಾರ್ಸೆಲ್​ ನೀಡಲು ಅವಕಾಶ ಇದ್ದರೂ ಸಹ ಹೋಟೆಲ್ ಮಾಲೀಕರು ಸ್ವಯಂಪ್ರೇರಿತರಾಗಿ ಹೋಟೆಲ್​ಗೆ ಬೀಗ ಜಡಿದಿದ್ದಾರೆ.

people violating karnataka weekend curfew rules and regulations

ಇದನ್ನು ಓದಿ : namma metro : ಕೊರೋನಾ ನಿಯಮಕ್ಕೆ ಡೋಂಟ್ ಕೇರ್ : ಒಂದು ವರ್ಷದಲ್ಲಿ 1 ಕೋಟಿ ದಂಡ ಸಂಗ್ರಹಿಸಿದ ನಮ್ಮ‌ಮೆಟ್ರೋ

ಇದನ್ನೂ ಓದಿ : Weekend curfew rules : ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ: ಇಲ್ಲಿದೆ ಮಾಹಿತಿ

Comments are closed.