TTD, Shirdi, Ramakrishna Mission : ಟಿಟಿಡಿ, ರಾಮಕೃಷ್ಣ ಮಿಷನ್, ಶಿರಡಿ ಸಂಸ್ಥಾನಗಳು FCRA ನೋಂದಣಿ ನವೀಕರಣಗೊಳಿಸಿಲ್ಲ

ನವದೆಹಲಿ: ಹಣಕಾಸು ಅಕ್ರಮ ತಡೆಯಲು ವಿದೇಶಿ ದೇಣಿಗೆಗಳ (Foreign Contributions) ಮೇಲೆ ಹದ್ದಿನಕಣ್ಣು ಇಟ್ಟಿರುವ ಕೇಂದ್ರ ಸರ್ಕಾರ, ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ಎಫ್‌ಸಿಆರ್‌ಎಯನ್ನು(FCRA) ರೂಪಿಸಿದೆ. ಇದರ ಅನ್ವಯ ಧಾರ್ಮಿಕ ಸಂಸ್ಥೆಗಳು, ಸಮಾಜ ಸೇವೆಯಲ್ಲಿ ನಿರತವಾಗಿರುವ ಸ್ವಯಂ ಸೇವಾ ಸಂಸ್ಥೆಗಳು (NGO) ಪ್ರತಿ ವರ್ಷ ನೋಂದಣಿ ನವೀಕರಿಸಿಕೊಳ್ಳುವುದು ಕಡ್ಡಾಯ ಇದಕ್ಕಾಗಿ ಡಿ. 31 ಕಡೆಯ ದಿನವಾಗಿತ್ತು.(ಈಗ ಇದನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ).

ಆದರೆ, ಸುಮಾರು ಆರು ಸಾವಿರ ಎನ್‌ಜಿಒ(NGO)ಗಳ ಎಫ್‌ಸಿಆರ್‌ಎ(FCRA)ನೋಂದಣಿ ನವೀಕರಣ ಆಗಿಲ್ಲ. ಈ ಪೈಕಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ), ರಾಮಕೃಷ್ಣ ಮಿಷನ್, ಶಿರಡಿ ಶ್ರೀಸಾಯಿಬಾಬಾ ಸಂಸ್ಥಾನ್ ಟ್ರಸ್ಟ್ (ಎಸ್ಎಸ್ಎಸ್ಟಿ), ಮದರ್ ತೇರಸಾ ಅವರ ಮಿಷನರೀಸ್ ಆಫ್ ಚಾರಿಟಿ ಸೇರಿವೆ. ಈ ಧಾರ್ಮಿಕ ಸಂಸ್ಥೆಗಳು ನೋಂದಣಿ ನವೀಕರಣಕ್ಕೆ ಅರ್ಜಿ ಸಲ್ಲಿಕೆ ಮಾಡಿಲ್ಲವೆ ಅಥವಾ ಕೇಂದ್ರ ಗೃಹ ಸಚಿವಾಲಯವೇ ನೋಂದಣಿ ನವೀಕರಿಸಲು ನಿರಾಕರಣೆ ಮಾಡಿದೆಯೆ ಎಂಬುದು ಖಚಿತವಾಗಿಲ್ಲ.

ಟಿಟಿಡಿ ಡಿಸೆಂಬರ್ 22ರಂದು ಸಲ್ಲಿಸಿರುವ ವಾರ್ಷಿಕ ವರದಿಯಲ್ಲಿ ಪ್ರಸಕ್ತ ವರ್ಷದಲ್ಲಿ 13.40 ಕೋಟಿ ರೂಪಾಯಿ ವಿದೇಶಿ ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿಸಿದೆ. ಎಸ್ಎಸ್ಎಸ್ಟಿಗೆ 5 ಕೋಟಿ ರೂಪಾಯಿ ದೇಣಿಗೆ ದೊರಕಿದೆ. 179 ಎನ್‌ಜಿಒ(NGO) ಗಳ ಎಫ್‌ಸಿಆರ್‌ಎ(FCRA) ನವೀಕರಣದ ಅಜಿರ್ಯನ್ನು ಕೇಂದ್ರ ಗೃಹ ಸಚಿವಾಲಯ ತಳ್ಳಿಹಾಕಲಾಗಿದ್ದು, 5,789 ಎನ್‌ಜಿಒ(NGO)ಗಳು ಅಜಿರ್ಯನ್ನೇ ಸಲ್ಲಿಸಿಲ್ಲ.

ನವೀಕರಣ ಆಗದ ಸಂಸ್ಥೆಗಳ ಪೈಕಿ ಭಾರತೀಯ ವೈದ್ಯಕೀಯ ಸಂಘ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ,ದೆಹಲಿ ಐಐಟಿ, ಇಂಡಿಯಾ ಹೆಬಿಟೇಟ್ ಸೆಂಟರ್, ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ, ಮಹಿಳೆಯರ ಲೇಡಿ ಶ್ರೀರಾಮ್ ಕಾಲೇಜು, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ, ಆ್ಯಕ್ಸ್ಫಾಮ್ ಇಂಡಿಯಾ, ಲಾಲ್ ಬಹಾದ್ದೂರ್, ಶಾಸ್ತ್ರಿ ಸ್ಮಾರಕ ಪ್ರತಿಷ್ಠಾನಗಳು ಸೇರಿವೆ. ಮಿಷನರೀಸ್ ಆಫ್ ಚಾರಿಟಿ ನವೀಕರಣ ಆಗದಿದ್ದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಇನ್ನಿತರ ವಿರೋಧ ಪಕ್ಷಗಳು ಆಪಾದಿಸಿದ್ದವು.

ಇದನ್ನೂ ಓದಿ: How fast is Earth Moving around the sun?: ಭೂಮಿ ಎಷ್ಟು ವೇಗವಾಗಿ ಸೂರ್ಯನ ಸುತ್ತ ಸುತ್ತುತ್ತದೆ?

(TTD Shirdi Sansthan Ramakrishna Mission FCRA Registration Not Renewed)

Comments are closed.