ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ದ ಸುದ್ದಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಬಾಲಿವುಡ್ ನಲ್ಲೂ ನೆಪೊಟಿಸಮ್ ಹಾಗೂ ಡ್ರಗ್ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಕಂಗನಾ ಕೂಡಾ ಮಾಹಾರಾಷ್ಟ್ರ ಸರ್ಕಾರದ ಜೊತೆ ಕದನಕ್ಕೆ ಇಳಿದಿದ್ದಾರೆ. ಅದು ನಿರ್ಣಾಯಕ ಹಂತಕ್ಕೆ ಬರೋ ಮೊದಲೇ ಇದೀಗ ಬಾಲಿವುಡ್ ಬಿಗ್ ಫ್ಯಾಮಿಲಿ ವಿರುದ್ಧ ಕಂಗನಾ ಟ್ವಿಟ್ಟರ್ ವಾರ್ ನಡೆಸಿದ್ದಾರೆ.

ಈಗಾಗಲೇ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ವಿಚಾರದಿಂದ ಬಾನಿವುಡ್ ನಲ್ಲಿ ನೆಪೊಟಿಸಮ್ ಹಾಗು ಡ್ರಗ್ ಮಾಫಿಯಾ ಬಗ್ಗೆ ಪರ ವಿರೋದದ ಚರ್ಚೆಗಳು ನಡೀತಿದೆ. ಇದೀಗ ಸಂಸತ್ ನಲ್ಲೂ ಇದರ ಕುರಿತು ಚರ್ಚೆ ಆರಂಭವಾಗಿದೆ. ನಿನ್ನೆ ರವಿ ಕಿಶನ್ ಈ ಕುರಿತಂತೆ ಪ್ರಸ್ತಾಪ ಮಾಡಿದ್ರು. ಇದಕ್ಕೆ ಇಂದು ಟಾಂಗ್ ನೀಡಿರುವ ಬಾಲಿವುಡ್ ನ ಬಿಗ್ ಫ್ಯಾಮಿಲಿ ಮೆಂಬರ್ ಜಯಾ ಬಚ್ಚನ್ ಯಾರೋ ತಪ್ಪು ಮಾಡಿದರೆ ಚಿತ್ರರಗವನ್ನೇ ದೂಷಿಸೋದು ಸರಿಯಲ್ಲ ಎಂದ್ರು.
ಇನ್ನು ಕಂಗನಾ ಹೇಳಿದ “ಗಟರ್” ಹೇಳಿಕೆಗೆ ಕಿಡಿ ಕಾರಿರುವ ಜಯಾ ಅನ್ನ ತಿನ್ನುವ ಸಂಸ್ಥೆಯ ಕೆಟ್ಟದಾಗಿ ಮಾತಾಡೋದು ಸರಿನಾ ಅಂತ ಪ್ರಶ್ನಿಸಿದ್ದಾರೆ . ಜಯ ಬಚ್ಚನ್ ಈ ಹೇಳಿಕೆ ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಂತು ಜಯ ವಿರುದ್ಧ ವಿರೋಧವ್ಯಕ್ತವಾಗ್ತಿದೆ. ಅಮಿತಾಬ್ ನಿಮ್ಮ ಪತ್ನಿಗೆ ಬುದ್ದಿ ಹೇಳಿ. ಅವರನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ ಅಂತ ಹಲವರು ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡ್ತಿದ್ದಾರೆ.
ಇನ್ನು ಜಯಾ ಬಚ್ಚನ್ ಹೇಳಿಕೆಗೆ ಪ್ರತಿಕ್ರಿಯಿಸಿರೋ ಕಂಗನಾ ಸ್ಟ್ರಾಂಗ್ ಆಗಿಯೇ ತಿರುಗೇಟು ಕೊಟ್ಟಿದ್ದಾರೆ. ನಿಮ್ಮ ಮಗ ಅಭಿಷೇಕ್ ಇದೇ ಸ್ಥಿತಿಯಲ್ಲಿದ್ದು ಆತ್ಮಹತ್ಯೆ ಮಾಡುವ ಪರಿಸ್ಥಿತಿ ಬಂದಿದ್ರರೆ. ಅಥವಾ ಶ್ವೇತಾ ಬಚ್ಚನ್ ಗೂ ನನ್ನಂತ ಪರಿಸ್ಥಿತಿ ಬಂದರೆ ಸುಮ್ಮನೇ ಇರುತ್ತಿದ್ರಾ ಅಂತ ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದೀಗ ಕಂಗನಾ ಈ ಟ್ವೀಟ್ ಬಾಲಿವುಡ್ ನಲ್ಲಿ ಬಾರಿ ಸದ್ದು ಮಾಡ್ತಿದೆ.
ಒಟ್ಟಾರೆ ನೆಪೊಟಿಸಮ್ ಹಾಗೂ ಡ್ರಗ್ ಮಾಫಿಯಾ ವಿರುದ್ಧ ಸಮರ ಸಾರಿರೋ ಕಂಗನಾ ಕೆಂಗಣ್ಣಿಗೆ ಇದೀಗ ಬಾಲಿವುಡ್ ನ ಬಿಗ್ ಫ್ಯಾಮಿಲಿ ಗುರಿಯಾಗಿದೆ.