ಮುಂಬೈ : ಬಾಲಿವುಡ್ ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ನಮ್ಮೊಂದಿಗಿಲ್ಲ. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಬಾಲಿವುಡ್ ನಲ್ಲಿ ಬಹುಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಸುಶಾಂತ್ ಸಿಂಗ್ ಅಷ್ಟೇ ಬೇಗನೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಆದರೆ ಕೇವಲ ಐದೇ ಐದು ತಿಂಗಳಲ್ಲಿ ಸುಶಾಂತ್ ಸಿಂಗ್ ಹಸೆಮಣೆ ಏರುವವರಿದ್ರು ಅನ್ನುವ ಮಾಹಿತಿ ಬಯಲಾಗಿದೆ.

ಪ್ರೇಮ ವೈಫಲ್ಯ, ಖಿನ್ನತೆ, ವೈಯಕ್ತಿಕ ಸಂಬಂಧಗಳ ಗೊಂದಲದಿಂದ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಮಾಜಿ ಪ್ರೇಯಸಿಯರಿಗೂ ಸಂಬಂಧವಿದೆಯಾ ಅನ್ನುವ ಕುರಿತು ತನಿಖೆ ಶುರುವಾಗಿದೆ.

ಕಿಸ್ ದೇಶ್ ಮೆ ಹೈ ಮೇರಾ ದಿಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ ಸುಶಾಂತ್ ಸಿಂಗ್ ರಜಪೂತ್ ಪವಿತ್ರ ರಿಷ್ತಾ ಧಾರವಾಹಿಯ ಮೂಲಕ ಬಹುಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ರು. ಮಾತ್ರವಲ್ಲ ಬಾಲಿವುಡ್ ನಲ್ಲಿ ಸಿನಿಮಾಕ್ಕೂ ಅವಕಾಶ ಪಡೆದುಕೊಂಡಿದ್ರು. ಅಂಖಿತ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಜೋಡಿ ಧಾರವಾಹಿಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹತ್ತಿರವಾಗಿದ್ರು.

ಆದರೆ ಇದರ ನಡುವಲ್ಲೇ ಸುಶಾಂತ್ ಸಿಂಗ್ ರಜಪೂತ್ ಹಾಗೂ ಅಂಕಿತಾ ಲೋಖಂಡೆ ನಡುವೆ ಮನಸ್ತಾಪವಾಗಿತ್ತು. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕಳೆದ ಎಪ್ರಿಲ್ ತಿಂಗಳಿನಲ್ಲಿ ಬೇರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ತದನಂತರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಹೆಸರು, ರಿಯಾ ಚಕ್ರೊಬರ್ತಿ ಜೊತೆಗೆ ಕೇಳಿಬಂದಿತ್ತು. ಅಲ್ಲದೇ ಇಬ್ಬರೂ ಮದುವೆಯಾಗುತ್ತಾರೆ ಅನ್ನುವ ಸುದ್ದಿಯೂ ಹರಿದಾಡಿತ್ತು.

ಇದೀಗ ಸುಶಾಂತ್ ಸಿಂಗ್ ಆತ್ಮಹತ್ಯೆಯ ಬೆನ್ನಲ್ಲೇ ರಿಯಾ ಚಕ್ರೋಬರ್ತಿ ಹಾಗೂ ಸುಶಾಂತ್ ಸಿಂಗ್ ನಡುವೆ ಏನಾದರೂ ಮನಸ್ತಾಪ ನಡೆದಿದೆಯಾ ಅನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದೆಲ್ಲರ ನಡುವಲ್ಲೇ ಸುಶಾಂತ್ ಸಿಂಗ್ ರಜಪೂತ್ ಕುಟುಂಬಸ್ಥರು ಮದುವೆ ಮಾಡಿಸುವುದಕ್ಕೆ ಸಿದ್ದತೆಯನ್ನು ನಡೆಸಿದ್ದಾರಂತೆ. ಮುಂದಿನ ನವೆಂಬರ್ ತಿಂಗಳಿನಲ್ಲಿ ಸುಶಾಂತ್ ಮದುವೆಗೆ ನಿರ್ಧರಿಸಿದ್ದರು ಅನ್ನುವ ಮಾಹಿತಿ ಇದೀಗ ಬಹಿರಂಗವಾಗಿದೆ.