ನವೆಂಬರ್ ಮಾಸದಲ್ಲಿ ಸ್ಪೋಟವಾಗುತ್ತೆ ಕೊರೊನಾ ಸೋಂಕು : ಐಸಿಎಂಆರ್ ಸಂಶೋಧನಾ ಸಮೀಕ್ಷೆಯಿಂದ ಬಯಲಾಯ್ತು ವರದಿ

0

ನವದೆಹಲಿ : ದಿನ ಕಳೆಯುತ್ತಿದ್ದಂತೆಯೇ ಡೆಡ್ಲಿ ಕೊರೊನಾ ವೈರಸ್ ಆರ್ಭಟ ಹೆಚ್ಚುತ್ತಿದೆ. ಒಂದು ಕಡೆ ಸೋಂಕಿತ ಸಂಖ್ಯೆ ಹೆಚ್ಚುತ್ತಿದ್ರೆ, ಇನ್ನೊಂದೆಡೆ ಮಹಾಮಾರಿ ಬಲಿ ಪಡೆಯುತ್ತಿದೆ. ಈ ನಡುವಲ್ಲೇ ಕೊರೊನಾ ಸೋಂಕು ನವೆಂಬರ್ ತಿಂಗಳಲ್ಲಿ ಸ್ಪೋಟವಾಗುತ್ತೆ ಅನ್ನುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಜಾಗತಿಕ ಪಿಡುಗು, ಮಹಾಮಾರಿ, ಕ್ರೂರಿ ಕೊರೋನಾ ತಂದೊಡ್ಡಿರುವ ಕಡುಕಷ್ಟ ಸದ್ಯಕ್ಕೆ ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಕೊರೊನಾ ವೈರಸ್ ಸೋಂಕಿನ ಕುರಿತು ಸಾಕಷ್ಟು ಪ್ರಯೋಗಳು, ಸಮೀಕ್ಷೆಗಳು ನಡೆಯುತ್ತಿವೆ. ಈ ನಡುವಲ್ಲೇ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ನವೆಂಬರ್ ಮಧ್ಯ ಭಾಗದಲ್ಲಿ ಕೊರೋನಾ ಸಮಸ್ಯೆ ತಾರರಕ್ಕೇರಲಿದೆ ಅನ್ನುವ ಕುರಿತು ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಭವಿಷ್ಯ ನುಡಿದಿದೆ.

ಕೊರೊನಾ ಸಮಸ್ಯೆ ಯಾವಾಗ ಮುಕ್ತಾಯವಾಗಲಿದೆ ಅನ್ನುವ ಕುರಿತು ಈಗಾಗಲೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರಚಿಸಿದ್ದ ಕಾರ್ಯಾಚರಣೆ ಸಂಶೋಧನಾ ಗುಂಪು ಸಂಶೋಧನೆ ನಡೆಸಿದೆ. ಈ ವರದಿಯ ಪ್ರಕಾರ ಭಾರತದಲ್ಲಿ ಕೊರೋನಾ ಸಂಕಷ್ಟ ಸದ್ಯಕ್ಕೆ ಮುಗಿಯುವುದಿಲ್ಲ ಎಂದಿದೆ. ದೇಶದಾದ್ಯಂತ ಲಾಕ್ ಡೌನ್ ಜಾರಿಯಿಂದ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ.

ಲಾಕ್ ಡೌನ್ ಜಾರಿಯಾಗದೇ ಇದ್ದಿದ್ರೆ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ 69-97% ರಷ್ಟಾಗುತ್ತಿತ್ತು ಅಂತಾ ವರದಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆಯೇ ಭಾರತದಲ್ಲಿ ಸಪ್ಟೆಂಬರ್ ವರೆಗೂ ವೈರಸ್ ಸೋಂಕಿ ತೀವ್ರತೆಯಿರುತ್ತೆ ಅಂತಾ ಹೇಳಿದೆ. ಈ ನಡುವಲ್ಲೆ ಐಸಿಎಂಆರ್ ನವೆಂಬರ್ ನಲ್ಲಿ ಸೋಂಕಿನ ತೀವ್ರತೆ ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ.

Leave A Reply

Your email address will not be published.