Shamitha shetty: ಆತ ನನ್ನೊಂದಿಗೆ ಮಿತಿ ಮೀರಿ ವರ್ತಿಸಿದ್ದ…! ಶಮಿತಾ ಶೆಟ್ಟಿ ಬೊಟ್ಟು ಮಾಡಿದ್ಯಾರತ್ತ ಗೊತ್ತಾ..?!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬದುಕು ಬೀದಿಗೆ ಬಂದಿದೆ. ಒಂದೆಡೆ ಜೈಲು ಸೇರಿರುವ ಪತಿ, ಇನ್ನೊಂದೆಡೆ ಸ್ವತಃ ಶಿಲ್ಪಾ ಮೇಲೆ ದಾಖಲಾಗಿರುವ ವಂಚನೆ ಪ್ರಕರಣ. ಆದರೆ ಇದೆಲ್ಲದರ ಮಧ್ಯೆ ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ಮನೆ ಸೇರಿದ್ದು, ಅಲ್ಲಿ ಶಮಿತಾ ತಮ್ಮೊಂದಿಗೆ ಮಿತಿ ಮೀರಿ ವರ್ತಿಸಿದವನ ಅಸಲಿಯತ್ತು ಬಿಚ್ಚಿಟ್ಟಿದ್ದಾರೆ.

ಓಟಿಟಿಯಲ್ಲಿ ಆರಂಭವಾಗಿರುವ ಬಿಗ್ ಬಾಸ್ ಮನೆಗೆ ನಟಿ ಶಮಿತಾ ಶೆಟ್ಟಿ ಎಂಟ್ರಿಕೊಟ್ಟಿದ್ದಾರೆ. ಆರಂಭವಾಗುತ್ತಿದ್ದಂತೆ ಸಾಕಷ್ಟು ವಿವಾದ ಸೃಷ್ಟಿಸಿರುವ ಈ ಬಿಗ್ ಬಾಸ್ ನಲ್ಲಿ ಶಮಿತಾ ಕೂಡ ತಮಗಾದ ಕರಾಳ ಅನುಭವ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿ ಡ್ಯಾನ್ಸ ಕೊರಿಯೋಗ್ರಾಫರ್ ನಿಶಾಂತ್ ಭಟ್ ರಿಂದ ಶಮಿತಾ ಶೆಟ್ಟಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ಶಮಿತಾ ಹೇಳಿಕೊಂಡಿದ್ದಾರೆ.

ಶೋವೊಂದರಲ್ಲಿ ನಾನು ನಿಶಾಂತ್ ಭಟ್ ಜೊತೆ ಕೆಲಸ ಮಾಡಿದ್ದೆ. ಈ ವೇಳೆ ನಿಶಾಂತ್ ಭಟ್ ನನ್ನೊಂದಿಗೆ ಹದ್ದುಮೀರಿ ವರ್ತಿಸಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ. ಆ ಘಟನೆ ಬಳಿಕ ನಾನು ನಿಶಾಂತ್ ರನ್ನು ಅವಾಯ್ಡ್ ಮಾಡಿದ್ದು ಅಂತರ ಕಾಯ್ದುಕೊಳ್ಳುತ್ತಿದ್ದೇನೆ ಎಂದು ಶಮಿತಾ ದಿವ್ಯಾ ಅರ್ಗವಾಲ್ ಬಳಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Biggboss: ನೈತಿಕತೆ ಚೌಕಟ್ಟು ಮೀರಿ ಸಾಗಿದ ಬಿಗ್ ಬಾಸ್….! ನಟಿಮಣಿ ತುಟಿಗೆ ತುಟಿ ಬೆಸೆದ ಸಿಂಗರ್….!!

ಆದರೆ ಘಟನೆಯ ವಿವರವನ್ನು ಬಿಟ್ಟುಕೊಡುವುದಕ್ಕೆ ಶಮಿತಾ ನಿರಾಕರಿಸಿದ್ದಾರೆ. ಶಮಿತಾ ಶೆಟ್ಟಿ ನಿಶಾಂತ್ ಮೇಲೆ ಮಾಡಿರುವ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಈ ವಿಚಾರಕ್ಕೆ ನಿಶಾಂತ್ ಭಟ್ ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದುನೋಡಬೇಕಿದೆ.

ಇದನ್ನೂ ಓದಿ : ಮೇಘನಾರನ್ನು ಚಿರು ಏನಂತ ಕರೆಯುತ್ತಿದ್ದರು…?! ಚಿರು ಮೇಘನಾ ಪ್ರೀತಿಯ ವಿಡಿಯೋ ವೈರಲ್…!!

https://kannada.newsnext.live/bollywood-actress-kanganaranuth-hot-photos-viral-instagram/

Comments are closed.