ಬಾಲಿವುಡ್‌ನಲ್ಲಿ ಆಗಾಗ ನಟ-ನಟಿಯರ ಬಗ್ಗೆ ವದಂತಿಗಳು ಹರಿದಾಡುತ್ತಾ ಇರುತ್ತದೆ. ಈಗ ಇಂತಹದ್ದೇ ಒಂದು ವದಂತಿ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಅದು ಬೇರೆ ಯಾರದೂ ಅಲ್ಲ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ (Sidharth Malhotra-Kiara Advani) ಮದುವೆ ಸುದ್ದಿ ಆಗಿದೆ. ಬಾಲಿವುಡ್ ಹ್ಯಾಂಡ್ಸಮ್ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಡೇಟಿಂಗ್ ನಡೆಸುತ್ತಿರೋ ಬಗ್ಗೆ ಸುದ್ದಿಯಾಗಿತ್ತು. ಇದರ ಹಿಂದೆಯೇ ಕಳೆದ ಹಲವು ತಿಂಗಳುಗಳಿಂದ ಇಬ್ಬರು ಮದುವೆ ಆಗುತ್ತಾರೆ ಎನ್ನುವ ವಿಷಯ ಹರಿದಾಡುತ್ತಲೇ ಇತ್ತು. ಈಗ ಇವರಿಬ್ಬರ ಮದುವೆ ಡೇಟ್ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮೊದಲಿನಿಂದಲೂ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರ ಮದುವೆ ವಿಷಯ ಚರ್ಚೆಯಾಗುತ್ತಾ ಬಂದಿದೆ. ಆದರೆ ಈ ಬಗ್ಗೆ ಈ ಜೋಡಿ ಇದುವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ. ಈಗ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವ ಸಮಯ ಬಂದೇ ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ ಅನ್ನೋ ಗುಸು ಗುಸು ಬಾಲಿವುಡ್‌ನಲ್ಲಿ ಹರಡಿದೆ.
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರ ಮದುವೆ ಖಾಸಗಿಯಾಗಿ ನಡೆಯಲಿದೆ. ರಾಜಸ್ತಾನದಲ್ಲಿ ಕೆಲವೇ ಕೆಲವು ಸಂಬಂಧಿಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಕೇವಲ 100 ಜನರು ಮಾತ್ರ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಬಾಲಿವುಡ್ ವರದಿ ಮಾಡಿದೆ. ಅಲ್ಲದೆ ಈಗಾಗಲೇ ಇಬ್ಬರೂ ತಮ್ಮ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿದ್ದಾರೆ ಎನ್ನಲಾಗಿದೆ.
ಇಬ್ಬರ ಮದುವೆ ವಿಚಾರ ಸರ್ಪ್ರೈಸ್ ಅಲ್ಲದೇ ಹೋದರೂ, ಅಚ್ಚರಿ ವಿಷಯವಾಗಿದೆ. ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರ ಮದುವೆಯಲ್ಲಿ ಬಾಲಿವುಡ್ ಮಂದಿಗೆ ಆಹ್ವಾನ ನೀಡುವುದಿಲ್ಲ ಎನ್ನುವ ಸುದ್ದಿ ಇದೆ. ಬಾಲಿವುಡ್ ಸೆಲೆಬ್ರೆಟಿಗಳಿಗೆ ತೀರ ಹತ್ತಿರದ ಆಗಿರೋ ಈ ಜೋಡಿ, ಅವರಿಗೆ ಯಾಕೆ ಆಹ್ವಾನ ನೀಡುತ್ತಿಲ್ಲ ಅನ್ನೋದು ಇನ್ನೂ ಗೌಪ್ಯವಾಗಿಯೇ ಇದೆ. ಆದರೂ, ನಿರ್ಮಾಪಕ ಕರಣ್ ಜೋಹರ್ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಕವಿಯಾದ ‘ನಟ ರಾಕ್ಷಸ’ ಡಾಲಿ ಧನಂಜಯ್ : ಹತ್ತು ಸಾಲುಗಳ ಕವಿತೆಯ ಹಿಂದಿನ ಮರ್ಮವೇನು?
ಕಿಯಾರಾ ಅಡ್ವಾನಿ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೇ ‘ಸತ್ಯ ಪ್ರೇಮ್ ಕಿ ಕಥಾ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ‘ಮಿಷನ್ ಮಜ್ನು’ ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಹಾಗೇ ‘ಯೋಧ’ ಸೆಟ್ಟೇರಿದ್ದು, ಇನ್ನೂ ಕೆಲ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
Bollywood is gearing up for another wedding: Siddharth Malhotra-Kiara Advani seems to be getting married soon..!