ಕವಿಯಾದ ‘ನಟ ರಾಕ್ಷಸ’ ಡಾಲಿ ಧನಂಜಯ್ : ಹತ್ತು ಸಾಲುಗಳ ಕವಿತೆಯ ಹಿಂದಿನ ಮರ್ಮವೇನು?

ಕನ್ನಡ ಸಿನಿರಂಗದಲ್ಲಿ ಮಲ್ಟಿ ಟ್ಯಾಲೆಂಟೆಡ್‌ ಆಕ್ಟರ್‌ ಡಾಲಿ ಧನಂಜಯ್‌ (Actor Daali Dhananjay) ಎಂದರೆ ತಪ್ಪಿಲ್ಲ. ಯಾವುದೇ ಪಾತ್ರ ಸಿಕ್ಕಿದ್ರೂ ಸೈ ಎನಿಸಿಕೊಳ್ಳುವಂತೆ ನಟಿಸುತ್ತಾರೆ. ಅದು ಫ್ಯಾಮಿಲಿ ಪಾತ್ರವಾಗಲಿ, ಇಲ್ಲವೇ ಲಾಂಗ್‌ ಹಿಡಿದು ಹೊಡೆದಾಡುವುದಕ್ಕೂ ಸೈ ಎನಿಸಿಕೊಂಡ ನಟರಾಗಿದ್ದಾರೆ. ಅಷ್ಟೇ ಅಲ್ಲದೇ ಇದೀಗ ಪೆನ್ನು ಹಿಡಿದು ಅಕ್ಷರ ಗೀಚುವುದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೀಗೆ ಯಾಕೆ ಹೇಳುತ್ತಿದ್ದಾರೆ ಎಂದುಕೊಂಡ್ರಾ, ನಟ ಧನಂಜಯ್‌ ಹತ್ತು ಸಾಲಿನ ಕವಿತೆಯನ್ನು ಬರೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಧನಂಜಯ್‌ ಬರೆದು ಹಂಚಿಕೊಂಡ ಸಾಲುಗಳು ಸಖತ್‌ ವೈರಲ್‌ ಆಗಿದೆ.

ಅಷ್ಟೇ ಅಲ್ಲದೇ ಧನಂಜಯ್‌ ಬರೆದ ಹತ್ತು ಸಾಲುಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಇವರು ಬರೆದು ಕವಿತೆ ಸಾಲುಗಳನ್ನು ಹಾಡಿ ಹೊಗಳಿದ್ದರೆ, ಇನ್ನೂ ಕೆಲವರು ಇವರು ಯಾಕೆ ಹೀಗೆ ಬರೆದಿರಬಹುದು ? ಎಂದು ಲೆಕ್ಕಚಾರ ಹಾಕುತ್ತಿದ್ದಾರೆ. ಡಾಲಿ ಧನಂಜಯ್‌ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹೀಗೆ ಬರೆದು ಹಂಚಿಕೊಂಡಿದ್ದಾರೆ.

ಸುಟ್ಟು ಸುಟ್ಟು ಸುಟ್ಟಾರು ನನ್ನ
ಸುಟ್ಟು ಬೆಳಕಾಗಿ ಉರಿವೆ..
ಮುಚ್ಚಾರು ಮಣ್ಣಲ್ಲೇ ನನ್ನ
ಮರವಾಗಿ ಬೆಳೆವೆ..
ಹಾರಾಡೋ ಹಕ್ಕಿಗೆ ಇಲ್ಲಿ
ಯಾವುದೇ ಗಡಿಯ ಹಂಗು..
ಹಸಿದಂತ ಮಂದಿಗೆ ಇಲ್ಲಿ
ಗೆಲ್ಲೋದೊಂದೇ ಗುಂಗು..
ಧಮ್ ಇದ್ರೆ ಹೊಡಿ ನನ್ನ
ದಿಲ್ ಇದ್ರೆ ತಡಿ ನಿನ್ನ’

ಡಾಲಿ ಕವಿತೆಯನ್ನು ಓದಿದ ಕೆಲವರು ಸಾಕಷ್ಟು ಚರ್ಚೆಗಳನ್ನು ಮಾಡಲು ಶುರು ಮಾಡಿದ್ದರು. ಅದರಲ್ಲಿ ಕೆಲವರು ಡಾಲಿ ನೋವಿನಿಂದ ಈ ಕವಿತೆ ಬರೆದಿದ್ದಾರಾ ? ಯಾವುದಾದರೂ ಸಿನಿಮಾಗೆ ಅಂತಾ ಬರೆದ ಸಾಲುಗಳ ಆಗಿರಬಹುದಾ ? ಅಥವಾ ಸಿನಿರಂಗದಲ್ಲಿ ಡಾಲಿಯನ್ನು ಯಾರಾದರೂ ತುಳಿಯುವ ಪ್ರಯತ್ನ ಮಾಡುತ್ತಿದ್ದಾರಾ ? ಇಂತಹದ್ದೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.

ಇದನ್ನೂ ಓದಿ : Actor Yash Birthday : ನಟ‌‌ ಯಶ್ ಬರ್ತ್ ಡೇ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ: ಆದ್ರೆ ಪತ್ರದ ಮೂಲಕ ರಾಕಿಂಗ್ ಸ್ಟಾರ್ ಕೊಟ್ಟ ಸಿಹಿ ಸುದ್ದಿ ಏನು..?

ಇದನ್ನೂ ಓದಿ : Producer Umesh Banaker: ಅಪ್ಪು ಸಾವಿನ ಹೊತ್ತಲ್ಲಿ ಕ್ರಾಂತಿ ಶೂಟಿಂಗ್ ನಿಲ್ಲಿಸಿದ್ದ ನಟ ದರ್ಶನ್‌ : ನಿರ್ಮಾಪಕ ಉಮೇಶ್ ಬಣಕರ್‌ ಬಿಚ್ಚಿಟ್ಟ ಸತ್ಯ

ಇದನ್ನೂ ಓದಿ : ಪರಂವಃ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಸಿದ್ದವಾಯ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’: ಪೋಸ್ಟರ್‌ ಬಿಡುಗಡೆಗೊಳಿಸಿದ ರಕ್ಷಿತ್‌ ಶೆಟ್ಟಿ

ಸದ್ಯ ನಟ ಡಾಲಿ ಧನಂಜಯ್‌ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕಳೆದ ಜಮಾಲಿಗುಡ್ಡ ಸಿನಿಮಾ ರಿಲೀಸ್‌ ಆಗಿದೆ. ಇವರು ನಟಿಸಲಿರುವ “ಉತ್ತರಕಾಂಡ” ಸಿನಿಮಾದಲ್ಲಿ ನಟಿ ರಮ್ಯಾ ಜೊತೆ ಆಗಲಿದ್ದಾರೆ. ಹಾಗೆಯೇ ಹೊಯ್ಸಳ ಹಾಗೂ ಪ್ಯಾನ್‌ ಇಂಡಿಯಾ ಸಿನಿಮಾವಾದ ಪುಷ್ಪದಲ್ಲಿ ಕೂಡ ನಟಿಸಲಿದ್ದಾರೆ. ಇನ್ನೂ ಟಗರು ಪಲ್ಯ ಸಿನಿಮಾವನ್ನು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ.

Actor Daali Dhananjay : Poet ‘Nata Rakshasa’ Daali Dhananjay : What is the secret behind the poem of ten lines?

Comments are closed.