Raveena Tandon :ಆರ್ಯನ್ ಬಂಧನ ‘ನಾಚಿಕೆಗೇಡಿನ ರಾಜಕೀಯʼ ಎಂದ ನಟಿ ರವೀನಾ ಟಂಡನ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್‌ಖಾನ್‌ ಡ್ರಗ್ಸ್ ಪ್ರಕರಣ ಸಂಬಂಧ ಎನ್‌ಸಿಬಿ ವಶದಲ್ಲಿದ್ದಾರೆ. ಆದರೆ ಈ ವಿಚಾರ ಇದೀಗ ಬಾಲಿವುಡ್‌ ಅಂಗಳದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ನಟ, ನಟಿಯರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪ್ರಕರಣದ ಕುರಿತು ಬಾಲಿವುಡ್‌ ನಟಿ ರವೀನಾ ಟಂಡನ್ ಆಕ್ರೋಶವನ್ನು ಹೊರಹಾಕಿದ್ದಾರೆ.

ಸಲ್ಮಾನ್ ಖಾನ್, ಹೃತಿಕ್ ರೋಷನ್, ಸುನೀಲ್ ಶೆಟ್ಟಿ, ಸುಜೇನ್ ಖಾನ್ ಸೇರಿದಂತೆ ಸಾಲು ಸಾಲು ನಟ, ನಟಿಯರು ಆರ್ಯನ್‌ ವಿಚಾರದಲ್ಲಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದಾರೆ. ನಟಿ. ರವೀನಾ ಟಂಡನ್‌ ಇದು ನಾಚಿಕೆಗೇಡಿನ ರಾಜಕೀಯ ಎಂದು ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರವೀನಾ, “ನಾಚಿಕೆಗೇಡಿನ ರಾಜಕೀಯ ಮಾಡಲಾಗುತ್ತಿದೆ. ಒಬ್ಬ ಯುವಕನ ಜೀವನ ಮತ್ತು ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಎಂದೆಲ್ಲಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Aryan Khan : ಆರ್ಯನ್‌ ಖಾನ್‌ಗೆ ಇಲ್ಲ ಬಿಡುಗಡೆ ಭಾಗ್ಯ : ಅ.9 ರ ವರೆಗೆ ಎನ್‌ಸಿಬಿ ಕಸ್ಟಡಿ

ಇದೊಂದು ಹೃದಯವಿದ್ರಾವಕ ಎಂದಿರುವ ರವೀನಾ ಟಂಡನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ ನಲ್ಲಿ ರವೀನಾ ಆರ್ಯನ್ ಅಥವಾ ಶಾರುಖ್ ಹೆಸರನ್ನು ಎಲ್ಲಿಯೂ ಬಳಸಿಲ್ಲ. ಆದರೆ ಈ ಟ್ವೀಟ್ ಆರ್ಯನ್ ಖಾನ್ ಪುತ್ರನ ಬಗ್ಗೆ ಮಾಡಿರುವುದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ತೆರೆ ಮೇಲೆ ಬರಲು ಡೇಟ್‌ ಫೀಕ್ಸ್‌

(Actress Raveena Tandon says Aryan detention is a ‘shameful politics’)

Comments are closed.