ಸೋಮವಾರ, ಏಪ್ರಿಲ್ 28, 2025
HomeCinemaRashmika Mandanna: ಅವರು ನನ್ನ ಲೈಫ್ ಕೋಚ್: ರಶ್ಮಿಕಾ ಹೀಗಂದಿದ್ದು ಯಾರಿಗೆ ಗೊತ್ತಾ?

Rashmika Mandanna: ಅವರು ನನ್ನ ಲೈಫ್ ಕೋಚ್: ರಶ್ಮಿಕಾ ಹೀಗಂದಿದ್ದು ಯಾರಿಗೆ ಗೊತ್ತಾ?

- Advertisement -

ಸ್ಯಾಂಡಲ್ ವುಡ್ ನಿಂದ ಕಾಲಿವುಡ್, ಟಾಲಿವುಡ್ ದಾಟಿ ಬಾಲಿವುಡ್ ಅಂಗಳದಲ್ಲಿ ಮೋಡಿ ಮಾಡ್ತಿರೋ ನ್ಯಾಶನಲ್ ಕ್ರಶ್ ರಶ್ಮಿಕಾ ಇತ್ತಿಚಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ವೈಯಕ್ತಿಕ ಬದುಕಿಗ ಬಗ್ಗೆ ಲೇಟೆಸ್ಟ್ ಅಪ್ಡೇಟ್ ನೀಡಿರೋ ರಶ್ಮಿಕಾ ನಟರೊಬ್ಬರು ತಮ್ಮ ಲೈಫ್ ಕೋಚ್ ಎಂದಿದ್ದಾರೆ.

ಸದ್ಯ ಬಾಲಿವುಡ್ ನ ತಮ್ಮ ಚೊಚ್ಚಲ ಚಿತ್ರ ಮಿಶನ್ ಮಜ್ನು ಚಿತ್ರೀಕರಣ ಮುಗಿಸಿರುವ ರಶ್ಮಿಕಾ, ಮೊದಲನೇ ಚಿತ್ರಕ್ಕೂ ಮುನ್ನವೇ ಬಾಲಿವುಡ್ ನ ಎರಡನೇ ಚಿತ್ರ ಗುಡ್ ಬೈ ಶೂಟಿಂಗ್ ಮುಗಿಸಿದ್ದರು. ಸದ್ಯ ರಶ್ಮಿಕಾ ಅಭಿನಯದ ಬಾಲಿವುಡ್ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ಸಿದ್ಧವಿದೆ.

ಸಿದ್ಧಾರ್ಥ್ ಮಲ್ಹೋತ್ರಾ, ಬಿಗ್ ಬೀ ಅಮಿತಾಬ್ ಬಚ್ಚನ್, ವಿಜಯ್ ದೇವರಕೊಂಡ,ಮಹೇಶ ಬಾಬು, ಕಾರ್ತಿ ಅಲ್ಲು ಅರ್ಜುನ್, ಕನ್ನಡದಲ್ಲಿ ದರ್ಶನ್, ಪುನೀತ್ ಹೀಗೆ ಎಲ್ಲ ಖ್ಯಾತನಾಮರ ಜೊತೆ ನಟಿಸಿರೋ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಲೈಫ್ ಕೋಚ್ ಪಟ್ಟಕ್ಕೆ ನಾಯಕರೊಬ್ಬರ ಹೆಸರನ್ನು ಹೇಳಿದ್ದಾರೆ.

ಐಕಾನ್ ಸ್ಟಾರ್ ಅಲ್ಲೂ ಅರ್ಜುನ್ ತಮ್ಮ ಫೆವರಿಟ್ ಎಂದಿರುವ ರಶ್ಮಿಕಾ, ನನ್ನ ವೃತ್ತಿ ಜೀವನದಲ್ಲಿ ನಾನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಅಲ್ಲು ಅರ್ಜುನ್ ಮಾರ್ಗದರ್ಶನ ಇರಲಿದೆ. ಅವರು ನನ್ನ ಜೀವನಕ್ಕೆ ತರಬೇತುದಾರ. ನನ್ನ ಕೋಚ್ ಇದ್ದಂತೆ ಎಂದಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ನಟನೆಯ ರಕ್ತಚಂದನ ಕಳ್ಳಸಾಗಾಣಿಕೆ ಕತೆಯುಳ್ಳ ಪುಷ್ಪ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಗ್ರಾಮೀಣ ತೆಲುಗು ಭಾಷೆ ಮಾತನಾಡುವ ಹಳ್ಳಿಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ವರ್ಷಾಂತ್ಯಕ್ಕೆ ಪುಷ್ಪ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

Actor allu arjhun my life coach said actress rashmika mandanna

RELATED ARTICLES

Most Popular