ರೋಹಿತ್‌ ಬದಲು ರಾಹುಲ್‌ಗೆ ಜವಾಬ್ದಾರಿ ಕೊಡಿ ಅಂದಿದ್ರಂತೆ ವಿರಾಟ್‌ ಕೊಯ್ಲಿ

ಮುಂಬೈ : ಟೀಂ ಇಂಡಿಯಾ ಟಿ20 ನಾಯಕತ್ವದಿಂದ ವಿರಾಟ್‌ ಕೊಯ್ಲಿ ಕೆಳಗಿಳಿಯುವುದು ಬಹುತೇಕ ಖಚಿತ. ಹೀಗಾಗಿ ಮುಂದಿನ ನಾಯಕ ಯಾರೂ ಅನ್ನೋ ಚರ್ಚೆ ನಡೆಯುತ್ತಿದ್ದು, ರೋಹಿತ್‌ ಶರ್ಮಾ ಹೆಸರು ಕೇಳಿಬರುತ್ತಿದೆ. ಆದ್ರೆ ನಾಯಕ ವಿರಾಟ ಕೊಯ್ಲಿ ಮಾತ್ರ ರೋಹಿತ್‌ ಶರ್ಮಾ ಬದಲು ಕನ್ನಡಿಗನಿಗೆ ಪಟ್ಟ ಕಟ್ಟಿ ಎಂದಿದ್ದಾರಂತೆ.

ವಿರಾಟ್‌ ಕೊಯ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಾರೆ ಅನ್ನೋ ಸುದ್ದಿ ಕೇಳುಬರುತ್ತಲೇ ಟೀಂ ಇಂಡಿಯಾ ನಾಯಕನ ಸ್ಥಾನಕ್ಕೆ ಕೇಳಿಬಂದ ಹೆಸರು ರೋಹಿತ್‌ ಶರ್ಮಾ. ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾಗಿ ಐದು ಬಾರಿ ಟ್ರೋಫಿ ಗೆದ್ದಿದ್ರೆ, ಟೀಂ ಇಂಡಿಯಾದ ಉಪನಾಯಕವಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇದೇ ಕಾರಣಕ್ಕೆ ರೋಹಿತ್‌ ಶರ್ಮಾ ನಾಯಕನಾಗಲಿ ಅಂತಾ ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಕೊಯ್ಲಿ ಕೂಡ ರೋಹಿತ್‌ ಹೆಸರನ್ನೇ ಸೂಚಿಸಿದ್ದಾರೆ ಅಂತಾ ಹೇಳಲಾಗುತ್ತಿತ್ತು.

ಆದ್ರೀಗ ವಿರಾಟ್‌ ಕೊಯ್ಲಿ ಏಕದಿನ ತಂಡದ ನಾಯಕ ಸ್ಥಾನದಿಂದ ರೋಹಿತ್‌ ಶರ್ಮಾ ಅವರನ್ನು ಕೆಳಗೆ ಇಳಿಸುವಂತೆ ಆಯ್ಕೆ ಸಮಿತಿಯವರ ಬಳಿಯಲ್ಲಿ ವಿನಂತಿ ಮಾಡಿದ್ದಾರಂತೆ. ಅಲ್ಲದೇ ಕನ್ನಡಿಗ ರಾಹುಲ್‌ಗೆ ಜವಾಬ್ದಾರಿಯನ್ನು ನೀಡುವಂತೆಯೂ ವಿನಂತಿ ಮಾಡಿಕೊಂಡಿದ್ದಾರೆ ಅನ್ನುವ ಸುದ್ದಿ ಇದೀಗ ಎಲ್ಲೆಡೆಯಲ್ಲಿಯೂ ಹರಿದಾಡುತ್ತಿದೆ.

ಟಿ20 ವಿಶ್ವಕಪ್‌ ಬೆನ್ನಲ್ಲೇ ವಿರಾಟ್‌ ಕೊಯ್ಲಿ ನಾಯಕ ಸ್ಥಾನದಿಂದ ಕೆಳಗೆ ಇಳಿಯುವುದು ಬಹುತೇಕ ಖಚಿತ. ಒಂದೊಮ್ಮೆ ವಿರಾಟ್‌ ನಾಯಕತ್ವ ತ್ಯೆಜಿಸಿದ್ರೆ ಯಾರು ಟೀಂ ಇಂಡಿಯಾ ನಾಯಕನಾಗುತ್ತಾರೆ ಅನ್ನೋ ಕುತೂಹಲ ವ್ಯಕ್ತವಾಗುತ್ತಿದೆ. ರೋಹಿತ್‌ ಶರ್ಮಾ ಮಾತ್ರವಲ್ಲದೇ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ಕನ್ನಡಿಗ ಕೆ.ಎಲ್.ರಾಹುಲ್‌, ವಿಕೇಟ್‌ ಕೀಪರ್‌ ರಿಷಬ್‌ ಪಂತ್‌, ಶ್ರೇಯಸ್‌ ಅಯ್ಯರ್‌ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕುತ್ತೆ ಅನ್ನೋದೇ ಸದ್ಯದ ಕುತೂಹಲ.

ಇದನ್ನೂ ಓದಿ : ಐಪಿಎಲ್‌ ಹೀರೋ ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಟೀಂ ಇಂಡಿಯಾದ ನಾಯಕ !

ಇದನ್ನೂ ಓದಿ : T20 ನಾಯಕತ್ವಕ್ಕೆ ರಾಜೀನಾಮೆ : ವಿರಾಟ್‌ ಕೊಯ್ಲಿ ಅಧಿಕೃತ ಘೋಷಣೆ

( Give Rahul the responsibility instead of Rohit : Virat Kohli )

Comments are closed.