ಸೋಮವಾರ, ಏಪ್ರಿಲ್ 28, 2025
HomeCinemaBiggBoss OTT:ಬಿಗ್ ಬಾಸ್ ಒಟಿಟಿ ದಿವ್ಯಾ ಅಗರವಾಲ್ ಗೆ ವಿನ್ನರ್ ಪಟ್ಟ: ಸೆಕೆಂಡ್ ರನ್ನರ್ ಸ್ಥಾನಪಡೆದ...

BiggBoss OTT:ಬಿಗ್ ಬಾಸ್ ಒಟಿಟಿ ದಿವ್ಯಾ ಅಗರವಾಲ್ ಗೆ ವಿನ್ನರ್ ಪಟ್ಟ: ಸೆಕೆಂಡ್ ರನ್ನರ್ ಸ್ಥಾನಪಡೆದ ಶಮಿತಾ ಶೆಟ್ಟಿ

- Advertisement -

ಮೊದಲ ಪ್ರಯೋಗವಾಗಿ ಒಟಿಟಿಯಲ್ಲಿ ತೆರೆ ಕಂಡಿದ್ದ ಹಿಂದಿ ಬಿಗ್ ಬಾಸ್ ಶೋ ಮುಕ್ತಾಯಗೊಂಡಿದ್ದು, 6 ವಾರಗಳ ಕಾಲ ನಡೆದ ಶೋದಲ್ಲಿ ನಟಿ ಹಾಗೂ ಮಾಡೆಲ್ ದಿವ್ಯಾ ಅಗರವಾಲ್ ಮೊದಲ ಸ್ಥಾನ ಪಡೆದಿದ್ದಾರೆ. ಗೆಲ್ಲುವ ಭರವಸೆ ಮೂಡಿಸಿದ್ದ ಶಮಿತಾ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದ  ಈ ಬಿಗ್ ಬಾಸ್ ಶೋವನ್ನು ಸಲ್ಮಾನ್ ಖಾನ್ ಬದಲು ನಿರ್ದೇಶಕ ಕರಣ್ ಜೋಹರ್ ನಿರ್ವಹಿಸಿದ್ದರು. ಅತಿಯಾದ ಮುಕ್ತತೆಯಿಂದಲೇ ಸುದ್ದಿ ಮಾಡಿದ್ದ ಶೋದಲ್ಲಿ ಸನ್ನಿಲಿಯೋನ್ ಸಹ ಅತಿಥಿಯಾಗಿ ಪಾಲ್ಗೊಂಡಿದ್ದರು.

16 ಸ್ಪರ್ಧಿಗಳಿಂದ ಆರಂಭವಾದ ಶೋದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ, ಕೊರಿಯೋಗ್ರಾಫರ್ ನಿಶಾಂತ್ ಭಟ್, ದಿವ್ಯಾ ಅಗರವಾಲ್ ಸೇರಿದಂತೆ ಒಟ್ಟು ಐವರು ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದ್ದರು.

ಬಿಗ್ ಬಾಸ್ ಒಟಿಟಿ ವಿನ್ನರ್ ಆಗಿರೋ ದಿವ್ಯ ಅಗರವಾಲ್ ಗೆ 25 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಬಿಗ್ ಬಾಸ್ ಒಟಿಟಿ ಶೋನ ಮೊದಲ ಸೀಸನ್ ವಿನ್ನರ್ ಆಗಿರೋ ದಿವ್ಯ ಅಗರವಾಲ್ ಗೆ ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

ಇದನ್ನೂ ಓದಿ : ವರ್ಚುವಲ್ ಎಂಗೇಜಮೆಂಟ್ ಮೂಲಕ ಗಮನ ಸೆಳೆದ ಬಿಗ್ ಬಾಸ್ ಸೀಸನ್ 8 ಸ್ಪರ್ಧಿ

ಇದನ್ನೂ ಓದಿ : ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್

( Actress divya agarwal own bigg boss ott crown )

RELATED ARTICLES

Most Popular