Pooja Hegde: ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಸಿನಿಮಾಗಳ ಜೊತೆ ಜೊತೆಗೆ ಅವಾರ್ಡ್ ಫಂಕ್ಷನ್ ನಲ್ಲೂ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಮಾಡಿದ ಕೆಲಸಕ್ಕೆ ಅವಾರ್ಡ್ ಸಂದಿದೆ ಎಂದು ಸಂಭ್ರಮಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಕೇಸರಿಬಣ್ಣದ ಪ್ರಿಲ್ ಸ್ಯಾರಿ ಹಾಗೂ ಗೋಲ್ಡನ್ ಎಂಬ್ರಾಯ್ಡರಿ ಬ್ಲೌಸ್ ನಲ್ಲಿ ಪ್ರೇಕ್ಷಕರ ಮನಗೆದ್ದ ಪೂಜಾ ಹೆಗ್ಡೆ ವೇದಿಕೆ ಯಲ್ಲೂ ಸಖತ್ ಮಿಂಚಿದ್ದಾರೆ.

ಅಲಾ ವೈಕುಂಟಪುರಮಾಲೋ ಸಿನಿಮಾಗಾಗಿ ಅವಾರ್ಡ್ ಪಡೆದ ಪೂಜಾ ಹೆಗಡೆ ಅವಾರ್ಡ್ ಟ್ರೋಫಿ ಜೊತೆಗೂ ಹಾಟ್ ಹಾಟ್ ಪೋಸ್ ನೀಡಿದ್ದಾರೆ. ಅವಾರ್ಡ್ ಟ್ರೋಫಿ ಜೊತೆ ಬೆಡ್ ಮೇಲೆ ಮಲಗಿರೋ ಪೋಟೋ ಶೇರ್ ಮಾಡಿರೋ ಪೂಜಾ ಹೆಗ್ಡೆ ಪ್ರಶಸ್ತಿ ಸಂಭ್ರಮವನ್ನು ವಿಭಿನ್ನವಾಗಿ ಹಂಚಿಕೊಂಡಿದ್ದಾರೆ.

ಬೆಳಗಿನ ಜಾವ ನಾಲ್ಕು ಗಂಟೆಗೆ ನೀವು ಎದ್ದು ಮಾಡಿದ ಕೆಲಸ ಪ್ರಶಸ್ತಿಯೊಂದಿಗೆ ಕೊನೆಯಾಗಿದೆ. ಸಾಕ್ಷಿಅವಾರ್ಡ್. ಈಗ ನನ್ನ ನಿದ್ದೆಯ ಸಮಯ. ಗುಡ್ ನೈಟ್ ಎಂದು ಪೂಜಾ ಹೆಗಡೆ ಫನ್ನಿ ಪೋಸ್ಟ್ ಹಾಕಿದ್ದಾರೆ.ಸೋಷಿಯಲ್ ಮೀಡಿಯಾದಲ್ಲೂ ಸಖತ್ ಅಭಿಮಾನಿಗಳನ್ನು ಗಳಿಸಿರೋ ಪೂಜಾ ಹೆಗ್ಡೆ ಇತ್ತೀಚಿಗಷ್ಟೇ ನ್ಯಾಶನಲ್ ಕ್ರಶ್ ರಶ್ಮಿಕಾರನ್ನು ಇನ್ ಸ್ಟಾಗ್ರಾಂನಲ್ಲಿ ಹಿಂದಿಕ್ಕಿ ಸಾಧನೆ ಮಾಡಿದ್ದರು.

ಇದನ್ನೂ ಓದಿ : BiggBoss OTT:ಬಿಗ್ ಬಾಸ್ ಒಟಿಟಿ ದಿವ್ಯಾ ಅಗರವಾಲ್ ಗೆ ವಿನ್ನರ್ ಪಟ್ಟ: ಸೆಕೆಂಡ್ ರನ್ನರ್ ಸ್ಥಾನಪಡೆದ ಶಮಿತಾ ಶೆಟ್ಟಿ

ಇದನ್ನೂ ಓದಿ : ವರ್ಚುವಲ್ ಎಂಗೇಜಮೆಂಟ್ ಮೂಲಕ ಗಮನ ಸೆಳೆದ ಬಿಗ್ ಬಾಸ್ ಸೀಸನ್ 8 ಸ್ಪರ್ಧಿ

( actress pooja hegde own shakshi award)

Comments are closed.