IPL 2021 : ಇಂದಿನಿಂದ ಐಪಿಎಲ್‌ ಹಬ್ಬ : ಚೆನ್ನೈ VS ಮುಂಬೈ, ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2021) 14ನೇ ಆವೃತ್ತಿಯ ದ್ವಿತೀಯಾರ್ಧ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ ತಂಡ ಸೆಣೆಸಾಡಲಿದ್ದು, ಮೊದಲ ಪಂದ್ಯವೇ ಹೈಓಲ್ಟೇಜ್‌ ಪಂದ್ಯವಾಗುವುದರಲ್ಲಿ ಅನುಮಾನವೇ ಇಲ್ಲ.

ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಗಳು ಅರ್ಧಕ್ಕೆ ಸ್ಥಗಿತವಾಗಿತ್ತು. ಆದ್ರೆ ಅರಬ್‌ನಾಡಿಗೆ ಪಂದ್ಯಾವಳಿಯನ್ನು ಶಿಫ್ಟ್‌ ಮಾಡಲಾಗಿತ್ತು. ಎಲ್ಲಾ ತಂಡಗಳು ಕಠಿಣ ಅಭ್ಯಾಸವನ್ನು ನಡೆಸಿದ್ದು, ಇಂದಿನಿಂದ ಐಪಿಎಲ್‌ ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಎರಡು ವರ್ಷಗಳ ಬಳಿಕ ಮೈದಾನಕ್ಕೆ ಬರಲು ಪ್ರೇಕ್ಷಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಮೊದಲ ಪಂದ್ಯ ದುಬೈ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಂಜೆ 7.30ಕ್ಕೆ (ಭಾರತೀಯ ಕಾಲಮಾನ) ಪಂದ್ಯಾವಳಿ ಆರಂಭಗೊಳ್ಳಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians) ತಂಡಗಳು ಬಲಿಷ್ಠ ತಂಡಗಳಾಗಿವೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕೆ ಇಳಿಯುತ್ತಾರೆ. ಪಿಚ್‌ ರಿಪೋರ್ಟ್‌ ಏನ್‌ ಹೇಳುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಐಪಿಎಲ್‌ ಪಂದ್ಯಾವಳಿಯಲ್ಲಿ ಒಟ್ಟು ಚೆನ್ನ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಪರಸ್ಪರ 32 ಬಾರಿ ಮುಖಾಮುಖಿ ಆಗಿವೆ. ಈ ಪೈಕಿ 19 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಜಯಸಿದ್ರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ, ಸುರೇಶ್‌ ರೈನಾ, ಡ್ವೇನ್‌ ಬ್ರಾವೋ, ಅಂಬಟಿ ರಾಯಡು, ಮೊಯಿನ್‌ ಆಲಿ, ರವೀಂದ್ರ ಜಡೇಜಾ, ದೀಪಕ್‌ ಚಹರ್ ಅವರಂತಹ ಬಲಿಷ್ಠ ಆಟಗಾರರಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್‌ ಐದು ಬಾರಿ ಚಾಂಪಿಯನ್ಸ್‌ ಆಗಿ ಹೊರಹೊಮ್ಮಿದೆ. ನಾಯಕ ರೋಹಿತ್‌ ಶರ್ಮಾ ತಂಡದ ಟ್ರಂಪ್‌ ಕಾರ್ಡ್‌, ಕ್ಲಿಂಟನ್‌ ಡಿಕಾಕ್‌, ಸೂರ್ಯಕುಮಾರ್‌ ಯಾದವ್‌, ಕಿರೋನ್‌ ಪೊಲಾರ್ಡ್‌, ಜಸ್ಪ್ರೀಪ್‌ ಬೂಮ್ರಾ, ಕೃನಾಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ,ರಂತಹ ಆಟಗಾರರಿದ್ದಾರೆ.

ಏನ್‌ ಹೇಳುತ್ತೆ ಪಿಚ್ ರಿಪೋರ್ಟ್‌ :

ದುಬೈನ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿದೆ. ಹೀಗಾಗಿ ಬ್ಯಾಟ್ಸಮನ್‌ಗಳು ರನ್‌ ಗಳಿಸಲು ಪರದಾಟ ನಡೆಸಬೇಕಾಗುವ ಸಾಧ್ಯತೆಯಿದೆ. ಒಟ್ಟು93 ಟಿ20 ಪಂದ್ಯಾವಳಿಗಳು ನಡೆದಿದ್ದು, ಮೊದಲು ಬ್ಯಾಟಿಂಗ್‌ ನಡೆಸಿದ ತಂಡ 38 ಬಾರಿ ಹಾಗೂ ದ್ವಿತೀಯ ಬ್ಯಾಟಿಂಗ್‌ ನಡೆಸಿದ ತಂಡಗಳು 54 ಬಾರಿ ಗೆಲುವು ಕಂಡಿವೆ. ಇಷ್ಟೇ ಅಲ್ಲಾ ಕ್ರೀಡಾಂಗಣದಲ್ಲಿ ಇದುವರೆಗೆ 219/2 ಅತೀ ಹೆಚ್ಚು ರನ್‌ ಆಗಿದ್ರೆ, 59 ಕನಿಷ್ಟ ರನ್‌ ಆಗಿದೆ. ಅಲ್ಲದೇ ದ್ವಿತೀಯ ಬ್ಯಾಟಿಂಗ್‌ ನಡೆಸಿದ್ದ ತಂಡ 203 ರನ್‌ ಚೇಸ್‌ ಮಾಡಿದ್ದು ದಾಖಲೆಯಾಗಿದೆ.

ಸಂಭಾವ್ಯ ಪ್ಲೇಯಿಂಗ್ XI:

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್, ಮಾರ್ಕೊ ಜಾನ್ಸನ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಫಾಫ್ ಡು ಪ್ಲೆಸಿಸ್ / ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಸುರೇಶ್ ರೈನಾ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್‌), ಮೊಯೀನ್ ಅಲಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹೇಜಲ್‌ವುಡ್.

ನೇರಪ್ರಸಾರ: ಪಂದ್ಯಾವಳಿಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ನೇರ ಪ್ರಸಾರವಾಗಲಿದ್ದು, ಆನ್​ಲೈನ್ ಲೈವ್ ಸ್ಟ್ರೀಮಿಂಗ್: ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿಯೂ ಪ್ರಸಾರವಾಗಲಿದೆ.

ಇದನ್ನೂ ಓದಿ : IPL 2021 : ಐಪಿಎಲ್‌ ಯುಎಇ ವೇಳಾಪಟ್ಟಿ : ನಿಮ್ಮ ನೆಚ್ಚಿನ ತಂಡದ ಪಂದ್ಯ ಯಾವಾಗ ಗೊತ್ತಾ ..?

ಇದನ್ನೂ ಓದಿ :‌ AB de Villiers : ಐಪಿಎಲ್‌ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ : ಮೈದಾನದ ಹೊರಗೆ ಸಿಡಿದ ಸಿಕ್ಸರ್‌

ಇದನ್ನೂ ಓದಿ : ಕೊರೋನಾ ಭೀತಿಯಲ್ಲೂ ಕಿಚ್ಚನ ಕ್ರಿಕೆಟ್ ಪ್ರೀತಿ: ಐಪಿಎಲ್ ಗಾಗಿ ದುಬೈಗೆ ಹಾರುತ್ತಿದ್ದಾರೆ ಸುದೀಪ್

(IPL 2021 Start Today, CSK vs MI : Forecast, Playing XI Pitch Report And Venue Records ).

Comments are closed.