ಮಂಗಳವಾರ, ಏಪ್ರಿಲ್ 29, 2025
HomeCinemaಸಿಹಿಸುದ್ದಿ ಕೊಟ್ಟ ನಟ: ನಂದಿತಾ ಮಹ್ತಾನಿ ಜೊತೆ ರಿಂಗ್ ಬದಲಾಯಿಸಿಕೊಂಡ ವಿದ್ಯುತ್

ಸಿಹಿಸುದ್ದಿ ಕೊಟ್ಟ ನಟ: ನಂದಿತಾ ಮಹ್ತಾನಿ ಜೊತೆ ರಿಂಗ್ ಬದಲಾಯಿಸಿಕೊಂಡ ವಿದ್ಯುತ್

- Advertisement -

ನಟ ವಿದ್ಯುತ್ ಜಮ್ವಾಲ್ ತಮ್ಮ ಬಹುಕಾಲದ ಗೆಳತಿ ನಂದಿತಾ ಮಹ್ತಾನಿ ಜೊತೆ ಕೊನೆಗೂ ಎಂಗೇಜ್ ಆಗಿದ್ದು, ಆಕಾಶದಲ್ಲಿ ಹಾರಾಡುತ್ತ ತಮ್ಮ ಸಂಬಂಧ ಎಂಗೇಜಮೆಂಟ್ ಮೂಲಕ ಅಧಿಕೃತವಾಗಿರುವುದನ್ನು ಪ್ರಕಟಿಸಿದ್ದಾರೆ.


ನಟ ವಿದ್ಯುತ್ ಜಮ್ವಾಲ್ ಹಾಗೂ ನಂದಿತಾ ಎರಡು ಪ್ರತ್ಯೇಕ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಈ ಸಂಗತಿ ಹಂಚಿಕೊಂಡಿದ್ದಾರೆ. ಕಮಾಂಡೋ ವೇದಲ್ಲಿ ಪ್ರಪೋಸ್ ಮಾಡುವ ಮೂಲಕ ಮನದಾಸೆಯನ್ನು ಹೇಳಿಕೊಂಡೇ ಎಂಬರ್ಥದಲ್ಲಿ ವಿದ್ಯುತ್ ಜಮ್ವಾಲ್ ಪೋಸ್ಟ್ ಹಾಕಿದ್ದರೇ, ತುಂಬಾ ಹೊತ್ತು ಕಾಯಿಸಲಾಗಲಿಲ್ಲ. ಹೀಗಾಗಿ ಒಪ್ಪಿಕೊಂಡೆ ಎಂಬರ್ಥದಲ್ಲಿ ನಂದಿತಾ ಮಹ್ತಾನಿ ಪೋಸ್ಟ್ ಹಾಕಿದ್ದಾರೆ.


ಕಳೆದ ತಿಂಗಳು ಈ ಜೋಡಿ ಪ್ರೇಮ ಸ್ಮಾರಕ ತಾಜ್ ಮಹಲ್ ಗೆ ಭೇಟಿ ನೀಡಿದ್ದಲ್ಲದೇ ಜೋಡಿಯಾಗಿ ಹಲವು ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಈಗ ತಮ್ಮ ಸಂಬಂಧಕ್ಕೊಂದು ಅಧಿಕೃತ ಮುದ್ರೆಯೊತ್ತಿದ್ದು, ಹೀಗಾಗಿ ಕಳೆದ ತಿಂಗಳ ಟ್ರಿಪ್ ವೇಳೆಯೇ ಸಾಹಸ ಚಟುವಟಿಕೆಯ ನಡುವೆಯೇ ಎಂಗೇಜಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.


ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್ ಗಳಲ್ಲೂ ಜನಪ್ರಿಯತೆ ಗಳಿಸಿರುವ ನಟ ವಿದ್ಯುತ್, ಇತ್ತೀಚಿಗಷ್ಟೇ ಆಕ್ಷ್ಯನ್ ಹೀರೋ ಫಿಲ್ಸ್ಮಂ ನ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ. ಅಲ್ಲದೇ ಸಂಕಲ್ಪ ರೆಡ್ಡಿ ಡೈರೈಕ್ಷನ್ ನಲ್ಲಿ ಆಯ್ ಬಿ 71 ಸಿನಿಮಾ ಘೋಷಿಸಿದ್ದಾರೆ.

Vidyut Jammwal, Nandita Mahtani officially confirm engagement

RELATED ARTICLES

Most Popular