NEET 2021 paper leak : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ವಿದ್ಯಾರ್ಥಿನಿ ಸೇರಿ 6 ಜನರ ಬಂಧನ

ಜೈಪುರ : ನೀಟ್ ಪರೀಕ್ಷೆಯಲ್ಲಿ ವಂಚಿಸಿದ ಆರೋಪದ ಮೇಲೆ 18 ವರ್ಷದ ವಿದ್ಯಾರ್ಥಿನಿ ಸೇರಿದಂತೆ ಒಟ್ಟು 6 ಜನರನ್ನು ಪೊಲೀಸರು ಬಂಧಿಸಿದ್ದು, ಪರೀಕ್ಷಾ ಕೊಠಡಿ ಮೇಲ್ವಿಚಾರಕ ನಿಗೆ ನೀಡಲು ತರಲಾಗಿದ್ದ 10 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಭಾನುವಾರ ನಡೆದ ಪರೀಕ್ಷೆ ವೇಳೆ ದಾನೇಶ್ವರಿ ಕುಮಾರಿ ಎಂಬ ವಿದ್ಯಾರ್ಥಿನಿಗೆ ಸಹಾಯ ಮಾಡುವುದಕ್ಕಾಗಿ ಕೊಠಡಿ ಮೇಲ್ವಿಚಾರಕ ಹಾಗೂ ಇತರರು ಪ್ಲ್ಯಾನ್ ಮಾಡಿದ್ದಾರೆ. ರಾಮಸಿಂಗ್ ಎಂಬ ಮೇಲ್ವಿಚಾರಕ ಪರೀಕ್ಷೆ ಆರಂಭವಾಗುತ್ತಿದ್ದಂತೆ ಕ್ವಶ್ಚನ್ ಪೇಪರ್ ಪೋಟೋ ತೆಗೆದು ವಾಟ್ಸಪ್ ನಲ್ಲಿ ಕಳುಹಿಸಿದ್ದಾರೆ.

ವಿದ್ಯಾರ್ಥಿನಿಗೆ ಸಹಾಯ ಮಾಡಲು ಮೊದಲೇ ಸಿದ್ಧವಾಗಿದ್ದ ವ್ಯಕ್ತಿ ಈ ಕ್ವಶ್ಚನ್ ಪೇಪರ್ ಪಡೆದು ಕೀ ಆನ್ಸರ್ ಗಳನ್ನು ಗುರುತಿಸಿ ಮತ್ತೆ ಕೊಠಡಿ ಮೇಲ್ವಿಚಾರಕನಿಗೆ ಕಳುಹಿಸಿದ್ದಾನೆ. ಬಳಿಕ ರಾಮ್ ಸಿಂಗ್ ಉತ್ತರದೊಂದಿಗೆ ದಾನೇಶ್ವರಿಗೆ ನೆರವಾಗಿದ್ದ ಎನ್ನಲಾಗಿದೆ.

ಈ ಮಧ್ಯೆ ಪರೀಕ್ಷಾ ಕೇಂದ್ರದ ಹೊರಗೆ ದಾನೇಶ್ವರಿ ಚಿಕ್ಕಪ್ಪ 10 ಲಕ್ಷ ರೂಪಾಯಿ ಹಣದೊಂದಿಗೆ ಸಿದ್ಧವಾಗಿದ್ದು, ದಾನೇಶ್ವರಿಗೆ ಪರೀಕ್ಷೆಗೆ ನೆರವಾದ ರಾಮಸಿಂಗ್ ಹಾಗೂ ಮುಖೇಶ್ ಗೆ ನೀಡಲು ತರಲಾಗಿತ್ತು ಎನ್ನಲಾಗಿದೆ.

ಒಟ್ಟು 30 ಲಕ್ಷ ರೂಪಾಯಿಗೆ ನೀಟ್ ಪರೀಕ್ಷೆ ಪೇಪರ್ ಪಡೆದು ಉತ್ತರ ಬರೆದುಕೊಡುವ ಈ ಡೀಲ್ ಮಾಡಲಾಗಿದ್ದು, ಪರೀಕ್ಷೆ ಪೂರ್ಣಗೊಂಡ ಬಳಿಕ 10 ಲಕ್ಷ ರೂಪಾಯಿ ನೀಡಬೇಕೆಂಬ ಒಪ್ಪಂದವಾಗಿತ್ತು. ಈ ಕೇಸ್ ನಲ್ಲಿ ಕೊಠಡಿ ವೀಕ್ಷಕ ಸೇರಿದಂತೆ ಉತ್ತರ ಬರೆದುಕೊಡಲು ನೆರವಾದ ಸ್ಥಳೀಯ ಕೋಚಿಂಗ್ ಸೆಂಟರ್ ಮಾಲೀಕನನ್ನು ಬಂಧಿಸಲಾಗಿದೆ. ಭಾನುವಾರ ಪರೀಕ್ಷೆ ನಡೆದ ಬಳಿಕ ಸೋಮವಾರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದಿತ್ತು. ದೂರಿನ ತನಿಖೆ ವೇಖೆ ಈ ಸಂಗತಿ ಬಯಲಾಗಿದೆ.

ಇದನ್ನೂ ಓದಿ : ಶಿಕ್ಷಕರ ರಜೆಗೆ ಬೀಳುತ್ತೆ ಕತ್ತರಿ : ಪ್ರಾಥಮಿಕ ಶಾಲಾರಂಭದ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದೇನು ?

ಇದನ್ನೂ ಓದಿ : ಶಾಲಾ ಮಕ್ಕಳಿಗೆ ದಸರಾ, ಬೇಸಿಗೆ ರಜೆ ಘೋಷಣೆ : ಸರಕಾರದ ಆದೇಶ

( NEET Questions Paper Leak Case : Jaipura The arrest of 6 people, including a student)

Comments are closed.