ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು ಮೊದಲ ಸಿನಿಮಾದಲ್ಲೇ ಕನ್ನಡ ಕಲಿತು ಕನ್ನಡಿಗರ ಮನಗೆದ್ದ ವಿಕ್ರಾಂತ್ ರೋಣದ ಐಟಂ ಸಾಂಗ್ ಸುಂದರಿ, ರಕ್ಕಮ್ಮನಿಗೆ ಇಡಿ ಶಾಕ್ ನೀಡಿದ್ದು,ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ನಟಿ ಜಾಕ್ವಲಿನ್ ಫರ್ನಾಂಡಿಸ್ ಇಡಿ ಕೆಂಗಣ್ಣಿಗೆ ಗುರಿಯಾಗಿದ್ದು, ಈಗಾಗಲೇ ಒಮ್ಮೆ ವಿಚಾರಣೆಗೆ ಹಾಜರಾದ ಜಾಕ್ವಲಿನ್ ಗೆ ಇಡಿ ಮತ್ತೊಮ್ಮೆ ಸಮನ್ಸ್ ನೀಡಿದೆ.

ಅಗಸ್ಟ್ 30 ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಎದುರು ಹಾಜರಾಗಿದ್ದ ಜಾಕ್ವಲಿನ್ ವಿಚಾರಣೆ ಎದುರಿಸಿದ್ದರು. ಈಗ ಮತ್ತೊಮ್ಮೆ ಜಾಕ್ವಲಿನ್ ಸೆ.26 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ.

ಶ್ರೀಲಂಕಾ ಸುಂದರಿ ಜಾಕ್ ಮಂಜು ನಿರ್ಮಾಣದ ಬಿಗ್ ಬಜೆಟ್ ಕನ್ನಡ ಚಿತ್ರ ವಿಕ್ರಾಂತ್ ರೋಣ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟಿದ್ದು, ಐಟಂ ಸಾಂಗ್ ಜೊತೆ ಸ್ಪೆಶಲ್ ಪಾತ್ರವೊಂದರಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ ಐಟಂ ಸಾಂಗ್ ನ ಹಾಟ್ ಪೋಟೋ ಮೂಲಕವೇ ಚಿತ್ರರಸಿಕರು ವಿಕ್ರಾಂತ್ ರೋಣ ಸಿನಿಮಾ ನೋಡೋಕೆ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ.
Bollywood actor Jacqueline Fernandez summoned by ED