ಭಾನುವಾರ, ಏಪ್ರಿಲ್ 27, 2025
HomeCinemaKangana Ranaut: ಕೊನೆಗೂ ನ್ಯಾಯಾಲಯಕ್ಕೆ ಬಂದ ಕಂಗನಾ ರನಾವುತ್: ಕೇಸ್ ವರ್ಗಾವಣೆಗೆ ಮನವಿ

Kangana Ranaut: ಕೊನೆಗೂ ನ್ಯಾಯಾಲಯಕ್ಕೆ ಬಂದ ಕಂಗನಾ ರನಾವುತ್: ಕೇಸ್ ವರ್ಗಾವಣೆಗೆ ಮನವಿ

- Advertisement -

ಮುಂಬೈ: ಬಾಲಿವುಡ್ ನಟಿ  ಕಂಗನಾ ರನಾವುತ್ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ವಿಚಾರಣೆಗೆ ಖುದ್ದು ಹಾಜರಾಗುವ ಮೂಲಕ ವಾರೆಂಟ್ ಸಂಕಷ್ಟದಿಂದ ಬಚಾವಾಗಿದ್ದಾರೆ. ಗೀತ ರಚನೆಕಾದ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣ ವಿಚಾರಣೆಗೆ ಸತತವಾಗಿ ಗೈರಾದ ಹಿನ್ನೆಲೆಯಲ್ಲಿ ಸೆ.20 ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದ ನ್ಯಾಯಾಲಯ ಗೈರಾದಲ್ಲಿ ವಾರೆಂಟ್ ಜಾರಿಗೊಳಿಸುವುದಾಗಿ ಕಂಗನಾಗೆ ಎಚ್ಚರಿಕೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಗಳನ್ನು ಮೊಟಕುಗೊಳಿಸಿದ ನಟಿ ಕಂಗನಾ ರನಾವುತ್ ಅಂದೇರಿಯ ಮೆಟ್ರೋಫಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ಜಾವೇದ್ ಅಖ್ತರ್ ಹಾಗೂ ಕಂಗನಾ ಮುಖಾಮುಖಿಯಾಗಿದ್ದಾರೆ.

ಈ ಮಧ್ಯೆ ಜಾವೇದ್ ಅಖ್ತರ್ ವಿರುದ್ಧ  ತಮಗೆ ಬೆದರಿಕೆ ಹಾಕಿದ ಆರೋಪ ಮಾಡಿರುವ ಕಂಗನಾ ಅಂದೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಕಂಗನಾ ಪರ ವಕೀಲರು ಪ್ರಕರಣವನ್ನು ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.

ಕಂಗನಾ ಹಾಗೂ ಆಕೆಯ ಸಹೋದರಿ ರಂಗೋಲಿಗೆ ಜಾವೇದ್ ಅಖ್ತರ್ ಮನೆಗೆ ಕರೆಯಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪದಲ್ಲಿ ಹುರುಳಿಲ್ಲ. ಹಳೆಯ ವಿಚಾರವನ್ನು ಈಗ ಮತ್ತೆ ಕೆದಕಿ ಕಂಪ್ಲೆಂಟ್ ನೀಡಲಾಗುತ್ತಿದೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.

ಇನ್ನು ತಮಗೆ ಕೋವಿಡ್ -19 ಲಕ್ಷಣಗಳಿದ್ದು, ಆರೋಗ್ಯ ಸಮಸ್ಯೆ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗುವಂತೆ ಒತ್ತಡ ಹೇರಿದ ನ್ಯಾಯಾಧೀಶರ್ ಮೇಲೆ ತಾವು ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿರುವ ಕಂಗನಾ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕಂಗನಾ ಪರ ವಕೀಲ್ ರಿಜ್ವಾನ್ ಸಿದ್ಧಿಕಿ ಮನವಿ ಮಾಡಿದ್ದಾರೆ.

(bollywood actress kangana ranaut attended court in anderi)

RELATED ARTICLES

Most Popular