ಸೆನ್ಸಾರ್ ಇಲ್ಲದೇ ಪ್ರಸಾರಗೊಳ್ಳುವ ಮೂಲಕ ಜನಪ್ರಿಯತೆ ಪಡೆದಿದ್ದ ಹಿಂದಿ ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋಗೆ ಇಂದು ತೆರೆ ಬೀಳಲಿದೆ. ಗ್ರ್ಯಾಂಡ್ ಫಿನಾಲೆಗೆ ಐವರು ಸ್ಪರ್ಧಿಗಳು ಎಂಟ್ರಿಪಡೆದಿದ್ದು, ಮತಗಳ ಆಧಾರದ ಮೇಲೆ ಶನಿವಾರ ಸಂಜೆ ವಿಜೇತರ ಘೋಷಣೆಯಾಗಲಿದೆ.

ಬಿಗ್ ಬಾಸ್ ಒಟಿಟಿ ಶೋದಲ್ಲಿ ಸದ್ಯ ಐವರು ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದು, ಈ ಪೈಕಿ ಒಬ್ಬರು ವಿಜೇತರಾಗಲಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದು, ಅವರೇ ಶೋ ಗೆಲ್ಲುವ ಭರವಸೆ ವ್ಯಕ್ತವಾಗಿದೆ.

ಇನ್ನುಳಿದಂತೆ ರಾಕೇಶ್, ಪ್ರತೀಕ್, ಸೆಹೆಜ್ ಪಾಲ್,ದಿವ್ಯಾ ಅಗರವಾಲ್, ನಿಶಾಂತ್ ಭಟ್ ಫಿನಾಲೆ ತಲುಪಿದ್ದಾರೆ. ಶನಿವಾರ ಸಂಜೆ ಕರಣ ಜೋಹರ್ ನಡೆಸಿಕೊಡುವ ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರ ಘೋಷಣೆಯಾಗಲಿದೆ.

ಈ ಮಧ್ಯೆ ಸಹೋದರಿ ಶಮಿತಾ ಶೆಟ್ಟಿ ಗ್ರ್ಯಾಂಡ್ ಫಿನಾಲೆ ತಲುಪಿರುವುದಕ್ಕೆ ನಟಿ ಶಿಲ್ಪಾ ಶೆಟ್ಟಿ ಖುಷಿ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಂಗಿಗೆ ಓಟ ಮಾಡಿ ಸಪೋರ್ಟ್ ಮಾಡಿ ಎಂದು ಮನವಿ ಮಾಡಿದ್ದಾರೆ.
ನನ್ನ ಪ್ರೀತಿಯ ಟುಂಕಿ ಟಾಪ್ ಫೈವ್ ಹಂತ ತಲುಪಿದ್ದಾಳೆ. ನನಗಂತೂ ಬಹಳ ಹೆಮ್ಮೆಯಾಗುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಪ್ರಾಮಾಣಿಕತೆ ಹಾಗೂ ಘನತೆಯಿಂದ ಶಮಿತಾ ನಡೆದುಕೊಂಡಿದ್ದನ್ನು ನೋಡಿ ನನಗೆ ತುಂಬಾ ಖುಷಿಯಾಗಿದೆ. ನನ್ನ ಪ್ರಕಾರ ನೀನು ಈಗಾಗಲೇ ವಿನ್ನರ್ ಆಗಿದ್ದೀಯಾ ಡಿಯರ್. ನೀವೆಲ್ಲರೂ ಸೇರಿ ಶಮಿತಾ ಶೆಟ್ಟಿಯನ್ನು ವಿನ್ನರ್ ಮಾಡ್ತೀರಾ ಎಂಬ ವಿಶ್ವಾಸ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.
bigg boss ott shamitha shetty becomes finalist.