Vaccine Drive Bangalore No.1 : ಕೊರೊನಾ ಲಸಿಕೆ ನೀಡಿಕೆಯಲ್ಲಿ ಬೆಂಗಳೂರು ನಂ.1

ಬೆಂಗಳೂರು : ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಲಸಿಕೆ ಮೇಳ ನಡೆದಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರು ಇದೀಗ ಲಸಿಕೆ ನೀಡಿಕೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಶುಕ್ರವಾರ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯ ತನಕ ಬರೊಬ್ಬರಿ 4.79 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 8 ವಲಯಗಳಲ್ಲಿ 1886 ಸರ್ಕಾರಿ ಲಸಿಕಾ ಕೇಂದ್ರ ಮತ್ತು 3.1 ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ಒಂದೇ ದಿನ 4,08,259 ಮಂದಿಗೆ ಲಸಿಕೆ ಹಾಕಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 70,936 ಮಂದಿ ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆ ನೀಡಿಕೆಯಲ್ಲಿ ಇಡೀ ದೇಶಕ್ಕೆ ಬೆಂಗಳೂರು ನಂಬರ್ 1 ಅನ್ನಿಸಿಕೊಂಡಿದೆ.

ಅದ್ರಲ್ಲೂ ಬೆಂಗಳೂರು ದಕ್ಷಿಣ ವಲಯ ಸಿಲಿಕಾನ್‌ ಸಿಟಿಯಲ್ಲಿ ಅತೀ ಹೆಚ್ಚು ಲಸಿಕೆ ನೀಡಿದ ವಲಯ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಬಿಬಿಎಂಪಿಯ ದಕ್ಷಿಣ ವಲಯದಲ್ಲಿ 84,280 ಮಂದಿಗೆ ಲಸಿಕೆ ನೀಡಲಾಗಿದೆ. ಎರಡನೇ ಸ್ಥಾನದಲ್ಲಿರುವ ಪಶ್ಚಿಮ ವಲಯದಲ್ಲಿ 75874 ಮಂದಿಗೆ ಲಸಿಕೆ ನೀಡಲಾಗಿದೆ. ಅಲ್ಲದೇ ಯಲಹಂಕ ವಲಯ ಕೊನೆಯ ಸ್ಥಾನದಲ್ಲಿದ್ದುಇಲ್ಲಿ ಕೇವಲ 22,834 ಮಂದಿಗೆ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಪ್ರತೀ ವಾರವೂ ಲಸಿಕೆ ಅಭಿಯಾನ ನಡೆಯುತ್ತಿದ್ದು, ಜನರು ಉತ್ಸಾಹದಿಂದಲೇ ಬಂದು ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಒಂದೊಮ್ಮೆ ನೀವು ಲಸಿಕೆ ಪಡೆಯದೇ ಇದ್ದಿದ್ರೆ, ಕೂಡನೇ ಸರಕಾರಿ ಆಸ್ಪತ್ರೆಗಳಿಗೆ ತೆರಳಿ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : ಸಂಪೂರ್ಣ ಲಸಿಕೆ ಪಡೆದ ದೇಶದ ಮೊದಲ ಜಿಲ್ಲೆ ಯಾವುದು ಗೊತ್ತಾ ?

ಇದನ್ನೂ ಓದಿ : ದೇಶದಲ್ಲಿಂದು ಬೃಹತ್‌ ಲಸಿಕಾ ಮೇಳ : ಕೊರೊನಾ ಲಸಿಕೆ ಪಡೆದ್ರು 1 ಕೋಟಿ ಜನ

(Corona vaccine Drive Bangalore no.1 place in India)

Comments are closed.