Shah Rukh Kahn : ಆರ್ಯನ್‌ ಖಾನ್‌ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟಿಸಿರುವ ಜಾಹೀರಾತು ನಿಲ್ಲಿಸಿದ BYJU’s

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ನಡೆದ ಡ್ರಗ್ ಪ್ರಕರಣದಲ್ಲಿ ಸಿಲಿಕಿರುವ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್ ಖಾನ್ ತನಿಖೆಯ ವೇಳೆ ಚರಸ್ ಸೇವನೆ ಮಾಡಿರುವುದು ದೃಢವಾಗಿದೆ. ಮಗ ಡ್ರಗ್ಸ್‌ ದಾಸನಾಗಿರೋದು ತಂದೆ ಶಾರೂಖ್‌ ಖಾನ್‌ಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಎನ್‌ಸಿಬಿ ಆರ್ಯನ್‌ ಮಾದಕ ವಸ್ತು ಸೇವನೆಯ ಕುರಿತು ಮಾಹಿತಿ ನೀಡುತ್ತಲೇ ಇತ್ತ ಜಾಹೀರಾತು ಕಂಪೆನಿಗಳು ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಜಾಹೀರಾತುಗಳಿಗೆ ಕತ್ತರಿ ಹಾಕಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ ಹಲವು ವರ್ಷಗಳಿಂದಲೂ ನಟಿಸುತ್ತಿರುವ ಎಲ್ಲಾ ಜಾಹೀರಾತುಗಳನ್ನು ಎಜು-ಟೆಕ್ ಮೇಜರ್ BYJU’s ಸ್ಥಗಿತಗೊಳಿಸಿದೆ. ವರದಿಯ ಪ್ರಕಾರ, BYJU’s ಕಳೆದ ಕೆಲವು ದಿನಗಳಿಂದ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಿದೆ. ಡ್ರಗ್ಸ್‌ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶಾರೂಖ್‌ ಖಾನ್‌ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಅಲಲ್ದೇ ಬೈಜೂಸ್‌ ಕಂಪೆನಿಯ ವಿರುದ್ದವೂ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಇದೇ ಕಾರಣದಿಂದಲೇ ಕಂಪೆನಿ ಜಾಹೀರಾತು ಪ್ರಸಾರವನ್ನೇ ಸ್ಥಗಿತಗೊಳಿಸಿದೆ.

ಇದನ್ನೂ ಓದಿ: Aryana Khan : ಬಾಲಿವುಡ್ ನಟ ಶಾರೂಕ್ ಖಾನ್ ಗೆ ಬಿಗ್ ಶಾಕ್ : ಪುತ್ರ ಆರ್ಯನ್‌ ಖಾನ್ ಚರಸ್ ಸೇವನೆ ಮಾಡಿರುವುದು ದೃಢ

ಶಾರುಖ್ ಖಾನ್ ಗೆ BYJU’s ಅವರ ಅತಿದೊಡ್ಡ ಪ್ರಾಯೋಜಕತ್ವ ಒಪ್ಪಂದಗಳಲ್ಲಿ ಒಂದಾಗಿದ್ದ ಮೆಗಾಸ್ಟಾರ್ ಹುಂಡೈ, ಎಲ್ ಜಿ, ದುಬೈ ಟೂರಿಸಂ ಮತ್ತು ರಿಲಾಯನ್ಸ್ ಜಿಯೋ ದಂತಹ ಹಲವಾರು ಕಂಪನಿಗಳಿಗೆ ಬ್ರಾಂಡ್ ಫೇಸ್ ಆಗಿದ್ದಾರೆ. ಬ್ರಾಂಡ್ ಅನ್ನು ಅನುಮೋದಿಸಲು BYJU’s ಶಾರುಖ್ ಖಾನ್ ಗೆ ವಾರ್ಷಿಕವಾಗಿ 3- 4 ಕೋಟಿ ರೂ.ಗಳನ್ನು ಪಾವತಿಸುತ್ತದೆ ಎಂದು ಇಟಿ ವರದಿ ಮಾಡಿದೆ. ಕಳೆದ 2017 ರಿಂದಲೂ ಶಾರೂಖ್‌ ಖಾನ್‌ ಈ ಬ್ರಾಂಡ್ ನ ಬ್ರಾಂಡ್ ರಾಯಭಾರಿಯಾಗಿದ್ದರು.

ಭಾರತದ ಅತಿದೊಡ್ಡ ಸ್ಟಾರ್ಟ್ ಅಪ್ BYJU’s ಅತ್ಯಂತ ಕಡಿಮೆ ಅವಧಿಯಲ್ಲಿಯೇ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಅದ್ರಲ್ಲೂ ಆಕಾಶ್ ಇನ್ಸ್ಟಿಟ್ಯೂಟ್ ಸೇರಿದಂತೆ ಹಲವು ಕಂಪೆನಿಗಳನ್ನು ತನ್ನ ಸ್ವಾಧೀನಕ್ಕೆ ಪಡೆದಿರುವ ಬೈಜೂಸ್ ಕಂಪನಿ ಉನ್ನತ ಸ್ಥಾನ ಗಳಿಸಿದೆ. ಖಾನ್ ಅವರ ಮಗನ ಸುತ್ತಲಿನ ವಿವಾದವನ್ನು ಗಮನಿಸಿದರೆ ಕಂಪನಿಯು ನಟನೊಂದಿಗೆ ಸಂಬಂಧ ಹೊಂದಲು ಇಷ್ಟಪಡದ ಕಾರಣ BYJU’s ಎಸ್ ಆರ್ ಕೆ ಜಾಹೀರಾತುಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿ ಹೇಳಿದೆ. ಆದಾಗ್ಯೂ, ಕಂಪನಿಯು ನಟನನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಸಂಪೂರ್ಣವಾಗಿ ಕೈಬಿಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ.‌

ಇದನ್ನೂ ಓದಿ: Aryan Khan : ಆರ್ಯನ್‌ ಖಾನ್‌ಗೆ ಇಲ್ಲ ಬಿಡುಗಡೆ ಭಾಗ್ಯ : ಅ.9 ರ ವರೆಗೆ ಎನ್‌ಸಿಬಿ ಕಸ್ಟಡಿ

(Shah Rukh Khan’s ad stops BYJU’s)

Comments are closed.