ಸೋಮವಾರ, ಏಪ್ರಿಲ್ 28, 2025
HomeCinemaSonu Sood : ಸೋನು ಸೂದ್ ಗೆ ಐಟಿ ಶಾಕ್: ನಟನಿಗೆ ಸೇರಿದ 6 ಕಡೆ...

Sonu Sood : ಸೋನು ಸೂದ್ ಗೆ ಐಟಿ ಶಾಕ್: ನಟನಿಗೆ ಸೇರಿದ 6 ಕಡೆ ದಾಳಿ

- Advertisement -

ಮುಂಬೈ : ಕೊರೋನಾ ಸಂಕಷ್ಟ ದ ಹೊತ್ತಿನಲ್ಲಿ ಜನರಿಗೆ ಅಗತ್ಯ ಸಹಾಯ ಮಾಡುವ ಮೂಲಕ ಕೊಡುಗೈ ದಾನಿ ಎನ್ನಿಸಿದ್ದ ಬಾಲಿವುಡ್‌ ನಟ ಸೋನು ಸೂದ್ ಗೆ ಐಟಿ ಶಾಕ್ ನೀಡಿದೆ. ಸೋನು ಸೂದ್ ನಿವಾಸ ಸೇರಿದಂತೆ ಒಟ್ಟು 6 ಜಾಗಗಳ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಬಾಲಿವುಡ್‌ ನಟ ಸೋನು ಸೂದ್‌ ಅವರ ನಿವಾಸ, ಕಚೇರಿ, ಆಪ್ತರ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆದಿದ್ದು ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ದೆಹಲಿ ಸರ್ಕಾರದ ಮೆಂಟರ್ ಶಿಪ್ ಫಾರ್ ಸ್ಕೂಲ್ ಸ್ಟುಡೆಂಟ್ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡೆರ್ ಆಗಿ ಆಯ್ಕೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರೋದು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗಷ್ಟೇ ಸೋನು ಸೂದ್ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿದ್ದರು. ಅಲ್ಲದೇ ಸೋನು ಸೂದ್ ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ರೂಮರ್ ಗೆ ಉತ್ತರಿಸಲು ಸೋನು ಸೂದ್ ನಿರಾಕರಿಸಿದ್ದರು.

ಇದನ್ನೂ ಓದಿ :‌ ರಿಯಲ್ ಹಿರೋಗೆ ವಿಶೇಷ ಗೌರವ…! ವಿಮಾನದ‌‌ ಮೇಲೆ‌ ರಾರಾಜಿಸಿತು ಸೋನು ಸೂದ್ ಪೋಟೋ…!!

ಇದನ್ನೂ ಓದಿ : ಸೋನುಸೂದ್ ಟ್ರಸ್ಟ್ ಹೆಸರಿನಲ್ಲೂ ವಂಚನೆ…! ಸೋಷಿಯಲ್ ಮೀಡಿಯಾದಲ್ಲಿ ವಂಚಕರಿದ್ದಾರೆ ಎಚ್ಚರ…..!!

ಇದನ್ನೂ ಓದಿ : ಮಾನನಷ್ಟ ಪ್ರಕರಣದಲ್ಲಿ ಕಂಗನಾಗೆ ಎದುರಾಯ್ತು ಸಂಕಷ್ಟ: ಖುದ್ದು ಹಾಜರಾಗದಿದ್ದರೇ ಜಾರಿಯಾಗಲಿದೆ ವಾರಂಟ್

(Bollywood Actor Sonu Sood’s Mumbai office surveyed by Income Tax department)

RELATED ARTICLES

Most Popular