AB de Villiers : ಐಪಿಎಲ್‌ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ : ಮೈದಾನದ ಹೊರಗೆ ಸಿಡಿದ ಸಿಕ್ಸರ್‌

ಯುಎಇ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL ) ಪುನರರಾಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವಲ್ಲೇ ತಂಡಗಳು ಅಭ್ಯಾಸ ಪಂದ್ಯವನ್ನಾಡುವಲ್ಲಿ ಬ್ಯುಸಿಯಾಗಿವೆ. ಇದೀಗ ಆರ್‌ಸಿಬಿ ಎ ಹಾಗೂ ಬಿ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ.

ಯುಎಇ ಅಂಗಳದಲ್ಲಿ ಐಪಿಲ್‌ ಕಾವು ಏರುತ್ತಿದೆ. ಅದ್ರಲ್ಲೂ ಆರ್‌ಸಿಬಿ ತಂಡ ಈ ಬಾರಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಹೀಗಾಗಿಯೇ ಆಟಗಾರರು ಕಠಿಣ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡಿಗ ದೇವದತ್ತ ಪಡಿಕ್ಕಲ್‌ ಹಾಗೂ ಹರ್ಷಲ್‌ ಪಟೇಲ್‌ ನೇತೃತ್ವದ ಆರ್‌ಸಿಬಿ ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆದಿದೆ.

ಆರ್‌ಸಿಬಿ ಎ ತಂಡದ ಪರವಾಗಿ ಕಣಕ್ಕೆ ಇಳಿದ ಎಬಿ ಡಿವಿಲಿಯರ್ಸ್‌ (ABD) ಬೌಲರ್‌ಗಳನ್ನು ಮನಬಂದಂತೆ ಬೆಂಡೆತ್ತಿದ್ದಾರೆ. ಎಬಿಡಿ 10 ಸಿಕ್ಸರ್‌ ಹಾಗೂ 7 ಬೌಂಡರಿ ನೆರವಿನಿಂದ ಕೇವಲ 46 ಎಸೆತಗಳಲ್ಲಿ 104 ರನ್‌ ಸಿಡಿಸುವ ಮೂಲಕ ತಂಡಕ್ಕೆ ನೆರೆವಾದ್ರು. ಎಬಿಡಿಗೆ ಸಾಥ್‌ ಕೊಟ್ಟ ಮೊಹಮ್ಮದ್‌ ಅಜರುದ್ದೀನ್‌ 43 ಎಸೆತಗಳಲ್ಲಿ66 ರನ್‌ ಬಾರಿಸಿದ್ದಾರೆ.

ನಂತರ ಬ್ಯಾಟಿಂಗ್‌ ನಡೆಸಿದ ದೇವದತ್ತ ಪಡಿಕ್ಕಲ್‌ ನೇತೃತ್ವದ ಆರ್‌ಸಿಬಿ ಬಿ ತಂಡ ಭರ್ಜರಿ ಆಟಕ್ಕೆ ಮನ ಮಾಡಿತ್ತು. ದೇವದತ್ತ ಪಡಿಕ್ಕಲ್‌ 21 ಎಸೆತಗಳಲ್ಲಿ 36 ರನ್‌ ಹಾಗೂ ಕೆ.ಎಸ್.ಭರತ್‌ 47 ಎಸೆತಗಳಲ್ಲಿ 95 ರನ್‌ ಬಾರಿಸುವ ಮೂಲಕ ಗೆಲುವನ್ನು ಕಂಡಿದೆ. ಆರ್‌ಸಿಬಿ ತಂಡದ ಆಟಗಾರರು ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದ್ದು, ಐಪಿಎಲ್‌ ಗೆಲ್ಲುವ ಫೇವರೇಟ್‌ ತಂಡ ಎನಿಸಿಕೊಂಡಿದೆ.

ಇದನ್ನೂ ಓದಿ : ಐಪಿಎಲ್‌ನಲ್ಲಿ ನೀಲಿ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ

ಇದನ್ನೂ ಓದಿ : ಯುಎಇ ಅಂಗಳದಲ್ಲಿ ಕನ್ನಡ ಕಂಪು : ಕುಂಬ್ಳೆ ಕನ್ನಡ ಹಾಡಿಗೆ ಮನಸೋತ ಪಂಜಾಬ್‌

ಇದನ್ನೂ ಓದಿ :  ಐಪಿಎಲ್‌ ಯುಎಇ ವೇಳಾಪಟ್ಟಿ ಪ್ರಕಟ : ನಿಮ್ಮ ನೆಚ್ಚಿನ ತಂಡದ ಪಂದ್ಯ ಯಾವಾಗ ಗೊತ್ತಾ ..?

( AB de Villiers slams a cracking century in Practicing match RCB )

Comments are closed.