ಮಂಗಳವಾರ, ಜೂನ್ 17, 2025
HomeCinemaShilpashetty:ಸಂಕಷ್ಟದ ಮೇಲೆ ಸಂಕಷ್ಟ….! ಡ್ಯಾನ್ಸ್ ರಿಯಾಲಿಟಿ ಶೋದಿಂದಲೂ ಹೊರಬಿದ್ದ ಶಿಲ್ಪಾ ಶೆಟ್ಟಿ…!!

Shilpashetty:ಸಂಕಷ್ಟದ ಮೇಲೆ ಸಂಕಷ್ಟ….! ಡ್ಯಾನ್ಸ್ ರಿಯಾಲಿಟಿ ಶೋದಿಂದಲೂ ಹೊರಬಿದ್ದ ಶಿಲ್ಪಾ ಶೆಟ್ಟಿ…!!

- Advertisement -

ಅಶ್ಲೀಲ ವಿಡಿಯೋ ತಯಾರಿಕೆ ಹಾಗೂ ಪ್ರಸಾರದ ಆರೋಪದ ಮೇಲೆ ಅತ್ತ ಪತಿ ರಾಜ್ ಕುಂದ್ರಾ ಜೈಲು ಸೇರಿದ್ದರೇ, ಇತ್ತ ಶಿಲ್ಪಾ  ಶೆಟ್ಟಿಗೂ ಸಂಕಷ್ಟ ಎದುರಾಗಿದ್ದು ಡ್ಯಾನ್ಸ್ ರಿಯಾಲಿಟಿ ಶೋದಿಂದ ಶಿಲ್ಪಾ ಶೆಟ್ಟಿ ಹೊರಬಂದಿದ್ದಾರೆ.

Shilpa Shetty1

ಜುಲೈ 19 ರಂದು ಅಶ್ಲೀಲ ವಿಡಿಯೋ ತಯಾರಿಕೆ ಹಾಗೂ ಪ್ರಸಾರದ ಆರೋಪದ ಮೇರೆಗೆ  ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಬಂಧಿಸಲಾಗಿತ್ತು. ಇದರಿಂದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತೀವ್ರ ಮುಜುಗರಕ್ಕೆ ತುತ್ತಾಗಿದ್ದಾರೆ.

Shilpa Shetty2

ಶಿಲ್ಪಾ ಹಿರಿ ತೆರೆಯಿಂದ ದೂರವಿದ್ದರೂ ಕಿರುತೆರೆಯೊಂದಿಗೆ ನಂಟು ಬಿಟ್ಟಿರಲಿಲ್ಲ. ಹೀಗಾಗಿ ಹಿಂದಿಯ ಫೇಮಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್-4 ರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಪತಿಯ ಬಂಧನವಾದಾಗಿನಿಂದ ಶಿಲ್ಪಾ ಶೆಟ್ಟಿ ಶೋಗೆ ಗೈರಾಗಿದ್ದಾರೆ.

Shilpa Shetty3

ಸತತ ಎರಡು ವಾರದಿಂದ ಶಿಲ್ಪಾ ಶೆಟ್ಟಿ ಗೈರಾಗುತ್ತಿದ್ದಾರೆ. ಮೊದಲ ವಾರ ಶಿಲ್ಪಾ ಶೆಟ್ಟಿ ಬದಲಿಗೆ ಕರಿಷ್ಮಾ ಕಪೂರ್ ಭಾಗವಹಿಸಿದ್ದರು. ಎರಡನೇ ವಾರ ಪ್ರೊಮೋ ಶೂಟ್ ನಲ್ಲೂ ಶಿಲ್ಪಾ ಶೆಟ್ಟಿ ಬದಲಿಗೆ  ರಿತೇಶ್ ದೇಶ ಮುಖ್ ಹಾಗೂ ಜೆನಿಲಿಯಾ ದಂಪತಿ ಕಾಣಿಸಿಕೊಂಡಿದ್ದಾರೆ.

Shilpa Shetty4

ಹೀಗಾಗಿ ಶಿಲ್ಪಾ ಶೆಟ್ಟಿ ಮುಜುಗರದಿಂದ ತಪ್ಪಿಸಿಕೊಳ್ಳಲು  ಶೋದಿಂದ ಹೊರಗುಳಿದಿದ್ದಾರೆ.ವಾಹಿನಿ ಕೂಡ ತಮಗೆ ಉಂಟಾಗುವ ಮುಜುಗರ ತಪ್ಪಿಸಿಕೊಳ್ಳಲು ಶಿಲ್ಪಾರನ್ನು ನಿರ್ಣಾಯಕ ಸ್ಥಾನದಿಂದ ಕೈಬಿಟ್ಟಿದೆ ಎನ್ನಲಾಗುತ್ತಿದೆ.

Shilpa Shetty3 1

ರಾಜ್ ಕುಂದ್ರಾ ಬಂಧನದಿಂದ ಕಿರುತೆರೆಯಲ್ಲಿ ಮಾತ್ರವಲ್ಲ ಹಿರಿತೆರೆಯಲ್ಲೂ  ಶಿಲ್ಪಾ ಶೆಟ್ಟಿಗೆ ತೀವ್ರ ಮುಜುಗರವಾಗಿದೆ. ಶಿಲ್ಪಾ ಶೆಟ್ಟಿ ಬಾಲಿವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ ಆರಂಭಿಸಿದ್ದ ಹಂಗಾಮಾ-2 ಸಿನಿಮಾ ಕೂಡ ರಿಲೀಸ್ ಆಗಿದೆ. ಆದರೆ ಶಿಲ್ಪಾ ಇದರ ಪ್ರಮೋಶನ್ ನಲ್ಲೂ ಶಿಲ್ಪಾ ಪಾಲ್ಗೊಂಡಿರಲಿಲ್ಲ.

RELATED ARTICLES

Most Popular