ಐಎಂಡಿಬಿ ಅಚ್ಚರಿಯ ರೇಟಿಂಗ್ …! ಟಾಪ್ 10 ರಲ್ಲಿ ಎರಡು ಕನ್ನಡ ಸಿನಿಮಾಗಳು…! ಆರ್.ಆರ್.ಆರ್ ಗಿಲ್ಲ ಸ್ಥಾನ…!!!

ಭಾರತೀಯ ಸಿನಿಮಾಗಳಿಗೆ ರೇಟಿಂಗ್  ನೀಡುವ ಐಎಂಡಿಬಿ  ಟಾಪ್ 10 ಸಿನಿಮಾಗಳ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡ ಬಹುನೀರಿಕ್ಷೆಯ ಸಿನಿಮಾಗಳು  ಸ್ಥಾನ ಪಡೆದಿದೆ. ಆದರೆ ಆರ್.ಆರ್.ಆರ್. ಮಾತ್ರ 10 ರೊಳಗೆ ಸ್ಥಾನ ಪಡೆಯಲು ವಿಫಲವಾಗಿದ್ದು ರಾಜಮೌಳಿ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಐಎಂಡಿಬಿ ರೇಟಿಂಗ್  ನೀಡಿದ್ದು, ಇದರಲ್ಲಿ ಕೆಜಿಎಫ್ -2,ಆರ್.ಆರ್.ಆರ್  ಹಿಂದಿಕ್ಕಿದ ವಿಕ್ರಾಂತ್ ರೋಣ ಮೊದಲ ಸ್ಥಾನದಲ್ಲಿದೆ. ಆದರೆ ಟಾಪ್ 10 ರಲ್ಲಿ ಸ್ಥಾನ ಪಡೆಯುವಲ್ಲಿ ರಾಜಮೌಳಿಯ ಆರ್.ಆರ್.ಆರ್ ಸಿನಿಮಾ ಸ್ಥಾನ ಪಡೆದಿಲ್ಲ.

ವಿಕ್ರಾಂತ್ ರೋಣ ಮೊದಲ ಸ್ಥಾನದಲ್ಲಿದ್ದರೇ, ಕೆಜಿಎಫ್-2 ಎರಡನೇ ಸ್ಥಾನದಲ್ಲಿದೆ.  ಭಾರತೀಯ ಸಿನಿಮಾದಲ್ಲಿ ವಿಶಿಷ್ಟ ಗುರುತು ಮೂಡಿಸಿರುವ ಪುಷ್ಪ ಸಿನಿಮಾ ಐದನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ನವರಸ ಸಿನಿಮಾವಿದ್ದು, ನಾಲ್ಕನೇ ಸ್ಥಾನದಲ್ಲಿ ಶೇರ್ ಷಾ ನಿಂತಿದೆ.

ಇನ್ನು ಟಾಪ್ 10 ರಲ್ಲಿ ಸ್ಥಾನ ಪಡೆದ ಸಿನಿಮಾಗಳ್ಯಾವುದು ಎನ್ನೋದನ್ನು ಗಮನಿಸೋದಾದರೇ, ಆರನೇ ಸ್ಥಾನದಲ್ಲಿ ಭುಜ್ ದಿ ಪ್ರೈಡ್ ಆಫ್ ಇಂಡಿಯಾ, ಏಳನೇ ಸ್ಥಾನದಲ್ಲಿ  ತಿಮ್ಮರಸು ಎಂಟನೇ ಸ್ಥಾನದಲ್ಲಿ  ಆಲಿಯಾ ಭಟ್ ನಟನೆಯ ಗಂಗುಬಾಯಿ ಕಥಿಯಾವಾಡಿ ಒಂಬತ್ತನೇ ಸ್ಥಾನದಲ್ಲಿ  ಹಾಗೂ ರಾದೇ ಶ್ಯಾಮ್  ಮತ್ತು 10 ನೇ ಸ್ಥಾನದಲ್ಲಿದೆ.

ಆದರೆ ರಾಜಮೌಳಿಯ ಬಹುನೀರಿಕ್ಷಿತ ಚಿತ್ರ ಆರ್.ಆರ್.ಆರ್ ಸದ್ಯದ ಸೋಷಿಯಲ್ ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಆದರೆ ಐಎಂಡಿಬಿ ಗುರುತಿಸಿದ ಟಾಪ್ 10 ರ ಪಟ್ಟಿಯಲ್ಲಿ ಆರ್.ಆರ್.ಆರ್ ಸ್ಥಾನ ಪಡೆಯದಿರುವುದು ಫ್ಯಾನ್ಸ್ ಗೆ ಅಚ್ಚರಿ ತಂದಿದೆ.

Comments are closed.