Salman Khan:”ಕೆಜಿಎಫ್”‌ ನಟ ಯಶ್‌ ಗೆಟಪ್‌ ಅನುಕರಣೆ ಮಾಡಿದ ಬಾಲಿವುಡ್‌ ಸ್ಟಾರ್ ಸಲ್ಮಾನ್‌ ಖಾನ್‌

ಭಾರತೀಯ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದ ಕನ್ನಡದ ಕೆಜಿಎಫ್.‌ ನಟ ಯಶ್‌ (Yash)ತಮ್ಮ ನಟನೆ, ಗೆಟಪ್‌ ಮೂಲಕ ವಿಶ್ವದ ಸಿನಿಪ್ರಿಯರ ಗಮನ ಸೆಳೆದಿದ್ದರು. (KGF)ಕೆಜಿಎಫ್‌ ಸಿನಿಮಾದಲ್ಲಿ ಯಶ್‌ ಅವರ ಗೆಟಪ್‌ ಅನ್ನು ಇಂದಿನ ಯುವ ಜನತೆ ಅನುಕರಣೆ ಮಾಡುತ್ತಿದ್ದಾರೆ. ಆದ್ರೀಗ ಯಶ್‌ ಹೇರ್‌ ಸ್ಟೈಲ್‌ ಹಾಗೂ ಗೆಟಪ್‌ ಅನ್ನು ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ (Salman Khan) ಅನುಸರಿಸಿದ್ದಾರೆ. (Salman Khan)ಸಲ್ಮಾನ್‌ ಖಾನ್‌ರವರ ಮುಂದಿನ ಸಿನಿಮಾ (Kisi ka bhai kisi ki jaan)“ಕಿಸಿ ಕ ಭಾಯ್‌ ಕಿಸಿ ಕಿ ಜಾನ್‌”ನಲ್ಲಿ ಯಶ್‌ ರೀತಿಯ ಹೇರ್‌ ಸ್ಟೈಲ್‌ನ್ನು ಫಾಲೋ ಮಾಡಿದ್ದಾರೆ. ಇದು ಬಿ ಟೌನ್‌ನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಭಾರತೀಯ ಸಿನಿಮಾರಂಗದಲ್ಲೇ ನಟ ಯಶ್ ರವರು ಹೊಸ ಟ್ರೆಂಡ್‌ ಸೆಟ್ಟರ್‌ ನನ್ನುಸೃಷ್ಟಿಸಿದ್ದಾರೆ. ಕೆಜಿಎಫ್‌ (KGF)ಚಿತ್ರರಂಗದಲ್ಲಿ ಸೂಪರ್‌ ಹಿಟ್‌ ಆದ ಮೇಲೆ ಉಳಿದ ನಟರು ಮತ್ತು ನಿರ್ಮಾಪಕರು ಕೂಡ ಇವರನ್ನು ಅನುಸರಿಸುವುದಕ್ಕೆ ಶುರು ಮಾಡಿದ್ದಾರೆ. ಧೈರ್ಯದಲ್ಲಿ ಹೈ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೀಗಾಗಿ ಯಶ್‌ ರೀತಿ ಗಡ್ಡ ಮತ್ತು ಉದ್ದ ಕೂದಲು ಬಿಟ್ಟುಕೊಳ್ಳುವುದನ್ನು ಅನೇಕ ಹೀರೊಗಳಲ್ಲಿ ಕಾಣಬಹುದಾಗಿದೆ. ಇದಕ್ಕೆ ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan)ಕೂಡ ಉದ್ದ ಕೂದಲಿಗೆ ಮನಸೋತಿದ್ದಾರೆ.

ಸಲ್ಮಾನ್‌ ಖಾನ್‌ ರವರು ನಟಿಸಿದ ಹೊಸ ಚಿತ್ರ “ಕಿಸಿ ಕ ಭಾಯ್‌ ಕಿಸಿ ಕಿ ಜಾನ್‌” (Kisi ka bhai kisi ki jaan)ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಅದರಲ್ಲಿ ಸಲ್ಮಾನ್‌ ಕಾನ್‌ ರವರ ಉದ್ದ ಕೂದಲಿನ ಗೆಟಪ್‌ ನೋಡಿದ ಹಲವು ಪ್ರೇಕ್ಷಕರು ಯಶ್‌ ಅವರನ್ನು ನೆನಪಿಸುತ್ತಿದ್ದಾರೆ. ಸಲ್ಮಾನ್‌ ಖಾನ್‌ ರವರ ಈ ಉದ್ದಕೂದಲಿನ ಗೆಟಪ್‌ ಗೆ ಯಶ್‌ (Yash) ರವರು ಸ್ಪೂರ್ತಿಯೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. “ಕಿಸಿ ಕ ಭಾಯ್‌ ಕಿಸಿ ಕಿ ಜಾನ್‌” (Kisi ka bhai kisi ki jaan) ಚಿತ್ರವು ಕೆಜಿಎಫ್‌ ತರಹ ಮೂಡಿಬಂದರೆ ನೋಡಲು ಚೆನ್ನಾಗಿ ಇರುತ್ತದೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ಇದನ್ನೂ ಓದಿ: ವೈರಲ್‌ ಆಯ್ತು ನಟ ಮಹೇಶ್‌ ಬಾಬು ಹೊಸ ಲುಕ್‌

ಇದನ್ನೂ ಓದಿ: ಮಣಿರತ್ನಂ (Maniratham) ಚಿತ್ರದ ಆಫರ್‌ ರಿಜೆಕ್ಟ್‌ ಮಾಡಿದ್ದೇಕೆ “ಹೆಬ್ಬುಲಿ” ನಟಿ ಅಮಲಾ ಪೌಲ್‌

ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ 160 ಕೋಟಿ ಕಲೆಕ್ಷನ್ ಬಾಚಿದ ಬ್ರಹ್ಮಾಸ್ತ್ರ

“ಕಿಸಿ ಕ ಭಾಯ್‌ ಕಿಸಿ ಕಿ ಜಾನ್‌”(Kisi ka bhai kisi ki jaan) ಸಿನಿಮಾದ ಮೇಕಿಂಗ್‌ ಕೂಡ ಕೆಜಿಎಫ್‌ (KGF) ಸಿನಿಮಾವನ್ನು ಹೋಲುತ್ತಿದೆ. ನಮ್ಮ ಕನ್ನಡ ಪ್ರತಿಭೆ ರವಿ ಬಸ್ರೂರುರವರು ಈ ಹಿಂದಿ ಸಿನಿಮಾಕ್ಕೆ ಹಿನ್ನಲೆ ಸಂಗೀತ ನೀಡುತ್ತೀರುವುದು ವಿಶೇಷವಾಗಿದೆ. ಚಿತ್ರದ ಟೀಸರ್‌ನಲ್ಲಿ ಹಿನ್ನಲೆ ಸಂಗೀತವನ್ನು ಕೇಳಿದ ಪ್ರೇಕ್ಷಕರು ಸಂತೋಷಪಟ್ಟಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ರವರ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಈ ಸಿನಿಮಾವು ದೊಡ್ಡಮಟ್ಟದ ಬಜೆಟ್ ಸಿನಿಮಾವಾಗಿ ಮೂಡಿಬಂದಿದೆ. ಈಗಾಗಲೇ ಸಲ್ಮಾನ್‌ ಖಾನ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿರುವ ಟೀಸರ್‌ ಸಖತ್‌ ವೈರಲ್‌ ಆಗಿದೆ.

Comments are closed.