boycott laal singh chaddha : ಬಾಲಿವುಡ್ ನಟ ಆಮೀರ್ ಖಾನ್ ಸಧ್ಯ ತಮ್ಮ ಮುಂಬರುವ ಸಿನಿಮಾ ಲಾಲ್ ಸಿಂಗ್ ಚಡ್ಡಾ ರಿಲೀಸ್ನ ತಯಾರಿಯಲ್ಲಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಲಕ್ಷಗಟ್ಟಲೇ ವೀವ್ಸ್ ಸಂಪಾದಿಸಿದೆ. ಲಾಲ್ ಸಿಂಗ್ ಚಡ್ಡಾ ಇದೇ ಬರುವ ಆಗಸ್ಟ್ 11ರಂದು ತೆರೆಗಪ್ಪಳಿಸಲಿದೆ. ಆದರೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತಲೇ ಸಾಕಷ್ಟು ಅಪಸ್ವರಗಳು ಕೇಳಿ ಬರುತ್ತಿದೆ.ಸೋಶಿಯಲ್ ಮೀಡಿಯಾದಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಹಿಷ್ಕಾರ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕರೀನಾ ಕಪೂರ್ ಹಾಗೂ ಆಮೀರ್ ಖಾನ್ ಈ ಹಿಂದೆ ನೀಡಿರುವ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ವಿವಾದ ಸೃಷ್ಟಿಯಾಗಲು ಕಾರಣವಾಗಿದೆ. ಇದರಿಂದ ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದೇ ಎಂಬ ಅನುಮಾನ ಕೂಡ ಮೂಡಿದೆ.
When the so called book launcher and heroine doesn’t want us to watch her movie why should we ?? Go feed poor kids , spend time with your grandparents, read a book but stop watching their movies and stop destroying the nation
— Heli🥰😍🤩🦋🥳💫🔱 (@HeliPandya8) May 30, 2022
NCB Challenge RC Bail In SC#BoycottLaalSinghChaddha pic.twitter.com/uO9gJHY3fs
ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆಯೇ ಕರೀನಾ ಕಪೂರ್ ಹಾಗೂ ಆಮೀರ್ ಖಾನ್ ಈ ಹಿಂದೆ ನೀಡಿರುವ ವಿವಾದಾತ್ಮಕ ಹೇಳಿಕೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹೇಳಿಕೆಗಳನ್ನೇ ಆಧಾರವಾಗಿಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂಬ ಕೂಗು ಕೇಳಿ ಬರುತ್ತಿದೆ.
ಬಾಲಿವುಡ್ ನಟಿ ಕರೀನಾ ಕಪೂರ್ ಈ ಹಿಂದೆ ನೀವು ನಮ್ಮ ಸಿನಿಮಾಗಳನ್ನು ನೋಡಲೇಬೇಡಿ. ನಾವು ಯಾರಿಗೂ ಒತ್ತಡ ಹೇರುವುದಿಲ್ಲ ಎಂದು ಹೇಳಿದ್ದರು. ಆಮೀರ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಎಂದು ಹೇಳಿದ್ದು ಮಾತ್ರವಲ್ಲದೇ ಶಿವಲಿಂಗಕ್ಕೆ ಹಾಲನ್ನು ಎರೆಯುವುದು ವ್ಯರ್ಥ. ಅದರ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಎಲ್ಲಾ ಹೇಳಿಕೆಗಳು ಮುನ್ನೆಲೆಗೆ ಬಂದಿದ್ದು ಈ ಸಿನಿಮಾದ ನಾಯಕಿಗೆ ಪ್ರೇಕ್ಷಕರು ಸಿನಿಮಾ ನೋಡೋದೇ ಬೇಕಿಲ್ಲ. ಈ ಸಿನಿಮಾಗೆ ಹಣ ವ್ಯರ್ಥ ಮಾಡುವ ಬದಲು ಅದೇ ಸಮಯವನ್ನು ನಿಮ್ಮ ತಾತ- ಅಜ್ಜಿಯಂದಿರ ಜೊತೆ ಕಳೆಯಿರಿ. ಪುಸ್ತಕಗಳನ್ನು ಓದಿ ಎಂದು ನೆಟ್ಟಿಗರು ಹೇಳಿದ್ದಾರೆ .
ಚಂದನ್ ಅದ್ವೈತ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಹಾಲಿವುಡ್ನ ಫಾರೆಸ್ಟ್ ಗಂಪ್ ಸಿನಿಮಾದ ಕತೆಯನ್ನೇ ಆಧರಿಸಿದೆ. ಫಾರೆಸ್ಟ್ ಗಂಪ್ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.
ಇದನ್ನು ಓದಿ : Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್ ಮಾಡುವುದು ಹೇಗೆ?
ಇದನ್ನೂ ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!
boycott laal singh chaddha trends on social media due to aamir khan old controversial statements