upsc result 2021 : ಯುಪಿಎಸ್​ಸಿ ಪರೀಕ್ಷೆಯಲ್ಲಿ ರ್ಯಾಂಕ್​ ಪಡೆದ ಗಂಗಾವತಿ ಮೂಲದ ವೈದ್ಯೆ

ಗಂಗಾವತಿ : upsc result 2021 : 2020-21ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು ಈ ಬಾರಿ 685 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ರ್ಯಾಂಕ್​ ಪಡೆದಿದ್ದಾರೆ. ಇದರಲ್ಲಿ ಜೆಎನ್​ಯುನ ಮಾಜಿ ವಿದ್ಯಾರ್ಥಿನಿ ಶ್ರತಿ ಶರ್ಮಾ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಒಟ್ಟು ನಾಲ್ಕು ಸ್ಥಾನಗಳು ಮಹಿಳೆಯರ ಪಾಲಾಗಿದೆ.


ಈ ಪರೀಕ್ಷೆಯಲ್ಲಿ ಗಂಗಾವತಿಯ ದಂತ ವೈಸ್ಯೆ ಅಪೂರ್ವ ಬಾಸೂರು ಎಂಬ ಯುವತಿ 191ನೇ ರ್ಯಾಂಕ್​ ಗಳಿಸಿದ್ದಾರೆ .


ಅಪೂರ್ವ ಬಾಸೂರು ಗಂಗಾವತಿಯ ಸೇಂಟ್​ ಫಾಲ್ಸ್​​ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದಾರೆ. ಮಂಗಳೂರಿಯಲ್ಲಿ ಪಿಯು ಶಿಕ್ಷಣ ಪೂರೈಸಿ ದಂತ ವೈದ್ಯೆಯಾಗಿರುವ ಅಪೂರ್ವ ಬಾಸೂರು ತಾನೂ ಐಎಎಸ್​ ಅಧಿಕಾರಿಯಾಗಬೇಕೆಂಬ ಕನಸನ್ನು ಬಾಲ್ಯದಿಂದಲೇ ಕಂಡಿದ್ದರು. ಅಪೂರ್ವ ತಂದೆ ಶ್ರೀಕಾಂತ್​ ಬಾಸೂರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.


ಅಪೂರ್ವ ಸಹೋದರ ಸಿವಿಲ್​ ಇಂಜಿನಿಯರಿಂಗ್​ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅಪೂರ್ವ ಎರಡನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸಾಗುವಲ್ಲಿ ಅಪೂರ್ವ ವಿಫಲರಾಗಿದ್ದರು. ಆದರೆ ಎದೆಗುಂದದ ಅಪೂರ್ವ ಕಠಿಣ ಶ್ರಮದಿಂದ ಎರಡು ವರ್ಷಗಳ ಕಾಲ ದೆಹಲಿಯಲ್ಲಿ ತರಬೇತಿಯನ್ನು ಪಡೆದು ನಾಗರಿಕ ಸೇವಾ ಪರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

UPSC Civil Service final result : ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ ಪ್ರಕಟ : ಶ್ರುತಿ ಶರ್ಮಾ ಪ್ರಥಮ

ಯುಪಿಎಸ್​ಸಿ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಶ್ರುತಿ ಶರ್ಮಾ ಅಗ್ರಸ್ಥಾನವನ್ನು ಪಡೆದಿದ್ದಾರೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ 685 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.


ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಶ್ರುತಿ ಶರ್ಮಾ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿನಿಯಾಗಿದ್ದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.


ಅಂದಹಾಗೆ ಶ್ರುತಿ ಶರ್ಮಾ ಈ ಪರೀಕ್ಷೆಯಲ್ಲಿ ಟಾಪರ್​ ಆಗಿ ಹೊರಹೊಮ್ಮಿದ್ದರೆ ಅಂಕಿತಾ ಅಗರ್ವಾಲ್​ ಹಾಗೂ ಗಾಮಿನಿ ಸಿಂಗ್ಲಾ ಕ್ರಮವಾಗಿ ಎರಡು ಹಾಗೂ ಮೂರನೇ ಅಂಕವನ್ನು ಸಂಪಾದಿಸಿದ್ದಾರೆ. ನಾಲ್ಕನೇ ಸ್ಥಾನವನ್ನು ಐಶ್ವರ್ಯಾ ವರ್ಮಾ ಎಂಬವರು ಪಡೆದುಕೊಂಡಿದ್ದಾರೆ. ಈ ಮೂಲಕ 2021ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯ ಮೊದಲ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಂತಾಗಿದೆ.


UPSC CSE ಪೂರ್ವಭಾವಿ ಪರೀಕ್ಷೆಯನ್ನು ಅಕ್ಟೋಬರ್ 10, 2021 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಅಕ್ಟೋಬರ್ 29 ರಂದು ಬಿಡುಗಡೆ ಮಾಡಲಾಯಿತು. ಮುಖ್ಯ ಪರೀಕ್ಷೆಯನ್ನು ಜನವರಿ 7 ರಿಂದ 16, 2022 ರವರೆಗೆ ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಮಾರ್ಚ್ 17, 2022 ರಂದು ಘೋಷಿಸಲಾಯಿತು. ಸಂದರ್ಶನವು ಕೊನೆಯ ಸುತ್ತಿನ ಪರೀಕ್ಷೆಯಾಗಿದ್ದು, ಏಪ್ರಿಲ್ 5 ರಂದು ಪ್ರಾರಂಭವಾಯಿತು ಮತ್ತು ಮೇ 26 ರಂದು ಮುಕ್ತಾಯವಾಯಿತು.ಅಭ್ಯರ್ಥಿಗಳು upsc.gov.inನಲ್ಲಿ ತಮ್ಮ ಫಲಿತಾಂಶ ವೀಕ್ಷಿಸಬಹುದಾಗಿದೆ.

ಇದನ್ನು ಓದಿ : Punjabi Singer Sidhu Moosewala : ಪಂಜಾಬಿನ ಗಾಯಕ ಸಿಧು ಮೂಸೆವಾಲಾಗೆ ಗುಂಡಿಕ್ಕಿ ಹತ್ಯೆ!

ಇದನ್ನೂ ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

upsc result 2021 apoorva basur got 191 rank in upsc

Comments are closed.