ಮುಂಬೈ : Rakhi Sawant arrested : ಶೆರ್ಲಿನ್ ಚೋಪ್ರಾ ವಿರುದ್ಧ ರಾಖಿ ಸಾವಂತ್ ನೀಡಿರುವ ಹೇಳಿಕೆಯ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟಿ ರಾಖಿ ಸಾವಂತ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರಾಖಿ ಸಾವಂತ್ ವಿರುದ್ದ ಶರ್ಲಿನ್ ಚೋಪ್ರಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂಬೈ ಪೊಲೀಸರು ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಬಂಧಿಸಿದ್ದು, ಅವರನ್ನು ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನಟಿ ರಾಖಿ ಸಾವಂತ್ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಅವರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಖಿ ಸಾವಂತ್ ತನ್ನ ಪತಿ ಆದಿಲ್ ದುರಾನಿಯೊಂದಿಗೆ ಪಾಲುದಾರಿಕೆಯಲ್ಲಿ ನೃತ್ಯ ಅಕಾಡೆಮಿಯನ್ನು ಪ್ರಾರಂಭಿಸಬೇಕಿತ್ತು. ಆದರೆ ಇಂದು ರಾಖಿ ಸಾವಂತ್ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದರು.
ರಾಖಿ ಸಾವಂತ್ ಬಂಧನದ ಬೆನ್ನಲ್ಲೇ ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ. ಅಲ್ಲದೇ ತಮ್ಮ ಟ್ವೀಟ್ ನಲ್ಲಿಎಫ್ಐಆರ್ 883/2022 ಗೆ ಸಂಬಂಧಿಸಿದಂತೆ ಅಂಬೋಲಿ ಪೊಲೀಸರು ರಾಖಿ ಸಾವಂತ್ ಅವರನ್ನು ಬಂಧಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನು ರಾಖಿ ಸಾವಂತ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ ಕೋರ್ಟ್ ತಿರಸ್ಕರಿಸಿತ್ತು.
BREAKING NEWS!!!
— Sherlyn Chopra (शर्लिन चोपड़ा)🇮🇳 (@SherlynChopra) January 19, 2023
AMBOLI POLICE HAS ARRESTED RAKHI SAWANT IN RESPECT WITH FIR 883/2022
YESTERDAY, RAKHI SAWANT’S ABA 1870/2022 WAS REJECTED BY MUMBAI SESSIONS COURT
ಕಳೆದ ವರ್ಷ, #MeToo ಆರೋಪಿ ಸಾಜಿದ್ ಖಾನ್ ವಿರುದ್ಧ ನೀಡಿದ ಹೇಳಿಕೆಗಾಗಿ ರಾಖಿ ಸಾವಂತ್ ಶೆರ್ಲಿನ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಕ್ಟೋಬರ್ 29 ರಂದು ಸಾಜಿದ್ ಖಾನ್ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ಶೆರ್ಲಿನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅಲ್ಲದೇ ಸಲ್ಮಾನ್ ಖಾನ್ ಚಲನಚಿತ್ರ ನಿರ್ಮಾಪಕನನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಖಿ ಸಾವಂತ್ ಅವರು ಸಾಜಿದ್ ಅವರ ಹೇಳಿಕೆಗೆ ಶೆರ್ಲಿನ್ ಅವರನ್ನು ಖಂಡಿಸಿದರು ಎಂದು ಸಮರ್ಥಿಸಿ ಕೊಂಡಿದ್ದಾರೆ. ಪಾಪರಾಜಿಗಳೊಂದಿಗೆ ಮಾತನಾಡಿದ ರಾಖಿ, ಯಾವ ದೂರಿನಲ್ಲಿ ಅರ್ಹತೆ ಇದೆ ಮತ್ತು ಯಾವುದು ಇಲ್ಲ ಎಂಬುದು ಪೊಲೀಸರಿಗೆ ತಿಳಿದಿದೆ ಎಂದಿದ್ದಾರೆ. ಇದೀಗ ಶೆರ್ಲಿನ್ ರಾಖಿ ವಿರುದ್ಧ ಮಾನನಷ್ಟ ಆಪಾದನೆಗಾಗಿ ದೂರು ದಾಖಲಿಸಿದರು.
ಇದನ್ನೂ ಓದಿ : The Kashmir Files Movie : ಮತ್ತೆ ತೆರೆಗೆ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ
ಇದನ್ನೂ ಓದಿ: ಪಠಾಣ್ ಸಿನಿಮಾ ವಿವಾದ :”ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ” ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ
Breaking Bollywood Actress Rakhi Sawant arrested by Mumbai Police