Young actor Dhanush : ಸ್ಯಾಂಡಲ್‌ವುಡ್‌ ಯುವ ನಟ ಧನುಷ್‌ ವಿಧಿವಶ

ಸ್ಯಾಂಡಲ್‌ವುಡ್‌ನ ಸಂಪಿಗೆ ಹಳ್ಳಿ ಕೊಟ್ಲಲ್ಲಪ್ಪೋ ಕೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಯುವ ನಟ ಧನುಷ್‌ (Young actor Dhanush)ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಯುವ ನಟನ ನಿಧನಕ್ಕೆ ಸಿನಿಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

ಶೂಟಿಂಗ್‌ಗಾಗಿ ಲಡಾಖ್‌ಗೆ ತೆರಳಿದ್ದ ಯುವ ನಟ ಧನುಷ್‌ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಬೆಂಗಳೂರಿಗೆ ಕೆರೆತಂದು ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಜನವರಿ 18)ರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದ ಶ್ರೀ ಮುತ್ತುರಾಜ್‌, ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್‌ ಎಂದು ಬದಲಾಯಿಸಿಕೊಂಡಿದ್ದರು.

ಇದನ್ನೂ ಓದಿ : ಪಠಾಣ್ ಸಿನಿಮಾ ವಿವಾದ :”ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ” ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ

ಇದನ್ನೂ ಓದಿ : KLRahul – Athiya Shetty Marriage : ದಕ್ಷಿಣ ಭಾರತ ಸಂಪ್ರದಾಯದಲ್ಲಿ ನಡೆಯಲಿದೆ ರಾಹುಲ್-ಆತಿಯಾ ಶೆಟ್ಟಿ ಮದುವೆ

ಇದನ್ನೂ ಓದಿ : ಮರಳಿ ಮನಸ್ಸಾಗಿದೆ ಮುಕ್ತಾಯ : ಮತ್ತೆ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ನಟ ಚಂದನ್

ಪ್ಯಾರ್‌ ಕಾ ಗೋಲ್ಗುಂಬಜ, ಸ್ನೇಹಿತ, ಶಿವರಾಜ್‌ ಕುಮಾರ್‌ ನಟನೆಯ ಲೀಡರ್‌ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಷ್ಟೇ ಅಲ್ಲದೇ, ಇತರ ಸ್ಟಾರ್‌ ನಟರ ಜೊತೆ ಸಹಕಲಾವಿದರಾಗಿ ಕೂಡ ನಟಿಸಿದ್ದಾರೆ. ನಟ ಧನುಷ್‌ ಅವರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದ್ದು, ಇಂದು ಹುಟ್ಟೂರಿನಲ್ಲೇ ಅಂತ್ಯ ಸಂಸ್ಕಾರವನ್ನು ನಡೆಸಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಗಲಿದ ನಟನಿಗೆ ಸಿನಿಮಾ ತಂಡಗಳು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ಸ್ಯಾಂಡಲ್‌ವುಡ್‌ಗೆ ಶಾಕ್‌ ಮೇಲೆ ಶಾಕ್‌ ಎದುರಾಗುತ್ತಿದೆ. ಹಲವಾರು ನಟರು ಅನಾರೋಗ, ಹೃದಯಾಘಾತ ಸೇರಿದಂತೆ ಹಲವಾರು ಕಾರಣಗಳಿಂದ ಸಾವಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಕನ್ನಡ ಸಿನಿರಂಗಕ್ಕೆ ಬರಸಿಡಿಲಿನಂತೆ ಬಂದು ಎರಗಿದಂತೆ ಆಗಿದೆ.

ಇದನ್ನೂ ಓದಿ : The Kashmir Files Movie : ಮತ್ತೆ ತೆರೆಗೆ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಅಭಿಮಾನಿ ನಿಧನ : ಸಂತಾಪ ಸೂಚಿಸಿದ ನಟ ದರ್ಶನ್

Sandalwood young actor Dhanush passed away

Comments are closed.