Cannes 2022 ರಲ್ಲಿ ನಾವೆಲ್ಲರೂ ಕಾಯುತ್ತಿದ್ದ ಈ ವರ್ಷದ ದೀಪಿಕಾ ಪಡುಕೋಣೆ (Deepika Padukone) ಯವರ ರೆಡ್ ಕಾರ್ಪೆಟ್ ನೋಟ ವಿಶೇಷವಾಗಿದೆ. ಏಕೆಂದರೆ ವರ್ಷ ಅವರು ತೀರ್ಪುಗಾರರ ಕರ್ತವ್ಯದಲ್ಲಿದ್ದಾರೆ (Jury Duty). ಸಬ್ಯಸಾಚಿ(Sabyasachi) ವಿನ್ಯಾಸಗೊಳಿಸಿದ ಕಪ್ಪು ಮತ್ತು ಚಿನ್ನದ ಸೀರೆಯನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ಮೊದಲು ಕಾಣಿಸಿಕೊಂಡಿದ್ದು ಹೀಗೆ. ಕೂದಲನ್ನು ಒಂದು ಬನ್‌ನಲ್ಲಿ ಕಟ್ಟಿ ಅದನ್ನು ಗೋಲ್ಡ್ ಹೇರ್‌ಬ್ಯಾಂಡ್‌ನೊಂದಿಗೆ ಜೋಡಿಸಿದ್ದರು. ಕೋಲ್–ರಿಮ್ಡ್ ಕಣ್ಣುಗಳು, ನ್ಯೂಡ್ ಲಿಪ್ಸ್ ,ಪರಿಪೂರ್ಣವಾದ ಕೆನ್ನೆಯ ರೇಖೆಗಳು ಸರಳವಾಗಿ ಹೇಳುವುದಾದರೆ ಪರಿಪೂರ್ಣತೆಯಿಂದ ಕೂಡಿದ ನೋಟದಲ್ಲಿ ಮಿಂಚಿದ್ದಾರೆ ದೇಸಿ ಗರ್ಲ್ ದೀಪಿಕಾ ಪಡುಕೋಣೆ.


ಹಿಂದಿನ ದಿನದ ಉದ್ಘಾಟನಾ ಸಮಾರಂಭಕ್ಕೆ ದೀಪಿಕಾ ಸಬ್ಯಸಾಚಿ ಅವರು ಎಸೆಂಬಲ್ ಮಾಡಿದ ಪಚ್ಚೆ ಹಸಿರು ಪ್ಯಾಂಟ್‌ನೊಂದಿಗೆ ಪ್ರಿಂಟೆಂಡ್ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದರು.
ದೀಪಿಕಾ ಪಡುಕೋಣೆ ಕಳೆದ ಕೆಲವು ವರ್ಷಗಳಿಂದ ಕೇನ್ಸ್‌ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಅಷ್ಟೇ ಅಲ್ಲದೇ ಅವರು ಚಲನಚಿತ್ರೋತ್ಸವದಲ್ಲಿ ಮೇಕಪ್ ಉತ್ಪನ್ನಗಳ ದೈತ್ಯ ಕಂಪನಿ ಲೋರಿಯಲ್ ನ ಪ್ರತಿನಿಧಿಯೂ ಹೌದು. ಕ್ಯಾನ್ಸ್ ನಲ್ಲಿ ಕಳೆದ ಮೂರು ಬಾರಿಯೂ ಅತ್ಯುತ್ತಮ ಉಡುಗೆಗಳ ಪಟ್ಟಿಯಲ್ಲಿ ದೀಪಿಕಾ ಮಿಂಚಿದ್ದಾರೆ. ಪ್ರಬಲ್ ಗುರುಂಗ್, ಮಾರ್ಚೆಸಾ, ಪೀಟರ್ ಡುಂಡಾಸ್, ಗಿಯಾಂಬಟ್ಟಿಸ್ಟಾ ವಲ್ಲಿ ಮತ್ತು ಆಶಿ ಸ್ಟುಡಿಯೋದಂತಹ ವಿನ್ಯಾಸಕರು ವಿನ್ಯಾಸಗೊಳಿಸಿದ ಉಡುಗೆಗಳಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ : Aishwarya Rai : ಕೇನ್ಸ್ ಚಲನಚಿತ್ರೋತ್ಸವಕ್ಕೆ ಹೊರಟ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್, ಆರಾಧ್ಯ ಬಚ್ಚನ್ : Video Viral
ಇದನ್ನೂ ಓದಿ : Anita Bhat : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು
(cannes 2022 red carpet deepika padukone wore sabyasachi designed retro saree in red carpet)