Price History ‘ಪ್ರೈಸ್ ಹಿಸ್ಟರಿ’ ಎಂಬ ಆನ್‌ಲೈನ್ ಶಾಪಿಂಗ್ ಮಾರ್ಗದರ್ಶಿ

Pricehistory.in ಪ್ರಮುಖ ಆನ್‌ಲೈನ್ ಆಪ್‌ಗಳಲ್ಲಿನ ವಸ್ತುಗಳ ದರವನ್ನು ಅಂದಾಜಿಸುವ ವೆಬ್‌ಸೈಟ್ ಆಗಿದ್ದು, ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ದಿಕ್ಸೂಚಿಯಂತೆ ಸಹಾಯ ಮಾಡುತ್ತದೆ. (Price History)

ಬೇಡಿಕೆ ಮತ್ತು ಸರಬರಾಜಿನ ನಡುವಿನ ಅಂತರ ಹಾಗೂ ತೈಲ ಬೆಲೆ ಏರಿಕೆಯ ಪ್ರಭಾವದಿಂದ ದಿನನಿತ್ಯ ನಾವು ಉಪಯೋಗಿಸುವ ವಸ್ತುಗಳ ದರದಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತಿದೆ. ಅದರಲ್ಲೂ ಆನ್‌ಲೈನ್ ಶಾಪಿಂಗ್ ಮಾಡುವವರ ಸಮಸ್ಯೆಯಂತೂ ಹೇಳತೀರದು.

ಇಂದು ಇಷ್ಟವೆಂದು ಬಕೇಟ್ ಲಿಸ್ಟಿನಲ್ಲಿಟ್ಟ ವಸ್ತು ನಾಳೆ ಔಟ್ ಆಪ್ ಸ್ಟಾಕ್ ಆಗಬಹುದು ಅಥವಾ ಅದರ ಬೆಲೆಯಲ್ಲಿ ಬಹುದೊಡ್ಡಮಟ್ಟಿನ ವ್ಯತ್ಯಾಸವಾಗಬಹುದು. ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ದರಕ್ಕಿಂತ ಅಗ್ಗದಲ್ಲಿ ಆನ್‌ಲೈನ್‌ನಲ್ಲಿ ಸುಲಭವಾಗಿ ಶಾಪಿಂಗ್ ಮಾಡಬಹುದು ಆದರೆ ಇವತ್ತಿದ್ದ ಬೆಲೆ ನಾಳೆ ಇರಬಹುದೇ? ಅಥವಾ ಯಾವ ಸಮಯದಲ್ಲಿ ಬೆಲೆ ಕಡಿಮೆಯಾಗಬಹುದು? ಎನ್ನುವುದನ್ನು ಜನಸಾಮಾನ್ಯರಿಂದ ಊಹಿಸುವುದು ಕಷ್ಟಸಾಧ್ಯ. ನವ ಯುಗದ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳೇ ಸರಿ ಎಂಬAತೆ ಆನ್ಲೈನ್ ಶಾಪಿಂಗ್ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದೆ ಪ್ರೈಸ್‌ಹಿಸ್ಟರಿ. ಇನ್ (Pricehistory.in)

ಏನಿದು ಪ್ರೈಸ್ ಹಿಸ್ಟರಿ?

Pricehistory.in ಪ್ರಮುಖ ಆನ್‌ಲೈನ್ ಆಪ್‌ಗಳಲ್ಲಿನ ವಸ್ತುಗಳ ದರವನ್ನು ಅಂದಾಜಿಸುವ ವೆಬ್‌ಸೈಟ್ ಆಗಿದ್ದು, ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ದಿಕ್ಸೂಚಿಯಂತೆ ಸಹಾಯ ಮಾಡುತ್ತದೆ.

ಬಳಕೆ ಹೇಗೆ?

ಗೂಗಲ್‌ನಲ್ಲಿ ಪ್ರೈಸ್ ಹಿಸ್ಟರಿ. ಇನ್‌ಗೆ ಹೋಗಿ ನಮಗೆ ಬೇಕಾದ ವಸ್ತುಗಳ ಯುಆರ್‌ಎಲ್ (URL) ಲಿಂಕ್ ಕಾಪಿ ಮಾಡಿ ಈ ವೆಬ್‌ಸೈಟ್‌ನಲ್ಲಿ ಪೇಸ್ಟ್ ಮಾಡುವುದರ ಮೂಲಕ ಆ ವಸ್ತುವಿನ ಬೆಲೆಗೆ ಸಂಬಧಿಸಿದ ಚಾರ್ಟ್ಒಂದನ್ನು ಪಡೆಯಬಹುದು. ಅದರಲ್ಲಿ ನಿಗದಿತ ವಸ್ತುವಿನ ಬೆಲೆ ಯಾವ ಕಾಲದಲ್ಲಿ ಹೇಗೆ ಬದಲಾಗಬಹುದು ಅಂದರೆ ಕೆಲ ದಿನಗಳ ಹಿಂದೆ ಬೆಲೆ ಎಷ್ಟಿತ್ತು, ಈಗ ಎಷ್ಟಿದೆ ಮುಂದೆ ಎಷ್ಟಾಗಬಹುದು, ಯಾವ ಸಮಯದಲ್ಲಿ ಖರೀದಿಸಬಹುದು ಎಂಬುದರ ಸಂಪೂರ್ಣ ಚಿತ್ರಣ ದೊರಕುತ್ತದೆ. ಇದರಿಂದ ವಸ್ತುಗಳ ಬೆಲೆ ಕಡಿಮೆಯಿದ್ದಾಗ ಸುಲಭವಾಗಿ ಕೊಂಡುಕೊಳ್ಳಬಹುದು. ಅಲ್ಲದೆ ಪ್ರೈಸ್‌ಅಲರ್ಟ್ ಬಟನ್ ಒತ್ತುವುದರೊಂದಿಗೆ ಪದೇ ಪದೇ ಈ ವೆಬ್‌ಸೈಟ್‌ಗೆ ಭೇಟಿಕೊಡಬೇಕಾದ ಅವಶ್ಯಕತೆಯೂ ಇಲ್ಲ. ಬದಲಾಗಿ ಬೆಲೆಯಲ್ಲಿ ಇಳಿಕೆಯಾದಾಗ ನೋಟಿಫಿಕೇಶನ್ ಪಡೆಯಬಹುದಾಗಿದೆ.

೨೦೧೯ರಲ್ಲಿ ಆರಂಭಗೊAಡ ಈ ವೆಬ್‌ಸೈಟ್ ಅತ್ಯಂತ ವಿಶ್ವಾಸಾರ್ಹನೀಯವಾಗಿದ್ದು, ಆಪ್‌ಕೂಡ ಲಭ್ಯವಿದೆ. ಬಳಸಲು ಬಹು ಸುಲಭವಾಗಿರುವ ಪ್ರೈಸ್ ಹಿಸ್ಟರಿ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಸಧ್ಯದ ಮಟ್ಟಿಗೆ ಐದು ಲಕ್ಷಕ್ಕೂ ಅಧಿಕ ಮಂದಿ ಈ ಆಪ್‌ಡೌನ್ಲೋಡ್ ಮಾಡಿದ್ದು ೩.೯ರಷ್ಟು ರೇಟಿಂಗ್ ನೀಡಿದ್ದಾರೆ. ಒಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಗುಣಮಟ್ಟದ ವಸ್ತುಗಳನ್ನು ಯೋಗ್ಯದರದಲ್ಲಿ ಖರೀದಿಸಲು ಇಚ್ಛಿಸುವವರಿಗೆ ಪ್ರೈಸ್ ಹಿಸ್ಟರಿ ಉತ್ತಮ ಮಾರ್ಗದರ್ಶಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: OnePlus Nord 3: ಸದ್ಯದಲ್ಲೇ ಒನ್ ಪ್ಲಸ್ ನೋರ್ಡ್ 3 ಬಿಡುಗಡೆ; 150 ವಾಟ್ ವೇಗದ ಚಾರ್ಜಿಂಗ್ ಬೆಂಬಲ

ಇದನ್ನೂ ಓದಿ: Kondapalli Toys: ವಿದೇಶಗಳಲ್ಲೂ ಬಾರೀ ಬೇಡಿಕೆ ಕೊಂಡಪ್ಪಲ್ಲಿಯ ಮರದ ಆಟಿಕೆಗಳು

Price History: Online Shopping Guider

Comments are closed.