ಭಾನುವಾರ, ಜೂನ್ 15, 2025
HomeCinemaChandan Shetty - Niveditha Gowda : ರೀಲ್ಸ್‌ ನಲ್ಲಿ ಲಿಪ್‌ ಲಾಕ್‌ ಮಾಡಿದ ಚಂದನ್‌...

Chandan Shetty – Niveditha Gowda : ರೀಲ್ಸ್‌ ನಲ್ಲಿ ಲಿಪ್‌ ಲಾಕ್‌ ಮಾಡಿದ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಜೋಡಿ

- Advertisement -

ಬಿಗ್‌ ಬಾಸ್‌ ಸೀಸನ್‌ 5ರಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾದ ಜೋಡಿ ಚಂದನ್‌ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ(Niveditha Gowda) ಜೋಡಿ ಸದ್ಯ ಲಿಪ್‌ ಲಾಕ್ ಮೂಲಕ ಸುದ್ದಿಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ಚಂದನ್‌ ಹಾಗೂ ನಿವೇದಿತಾ ಯಾವುದೇ ಟ್ರೆಂಡಿಂಗ್‌ ವೀಡಿಯೋ ಬಂದರೆ ಸಾಕು ಆ ಹಾಡಿಗೆ ರೀಲ್ಸ್‌ ಮಾಡುತ್ತಿರುತ್ತಾರೆ. ಆದರೆ ಇದೀಗ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಮಾಡಿದ ಒಂದು ರೀಲ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು, ಚಂದನ್‌ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ(Niveditha Gowda) ರಾಣಾ ಚಿತ್ರದ ಗಲ್ಲಿ ಬಾಯ್‌ ಹಾಡಿಗೆ ರೀಲ್ಸ್‌  ಮಾಡಿದ್ದಾರೆ. ಹಾಡಿಗೆ ರೀಲ್ಸ್ ಮಾಡುವ ವೇಳೆಯಲ್ಲಿ ಲಿಪ್‌ ಲಾಕ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಮೊನ್ನೆಯಷ್ಟೇ ರಿಲೀಸ್‌ ಆದ ಶ್ರೇಯಸ್‌ ಕೆ ಮಂಜು ಅಭಿನಯದ ರಾಣಾ ಚಿತ್ರದ ಗಲ್ಲಿ ಬಾಯ್‌ ಹಾಡನ್ನು ನಿರ್ದೇಶಕ ಜೋಗಿ ಪ್ರೇಮ್‌ ರಿಲೀಸ್‌ ಮಾಡಿದ್ದರು. ನಂದ ಕಿಶೋರ್‌ ನಿರ್ದೇಶನದ ಚಿತ್ರದ ಹಾಡಿಗೆ ಚಂದನ್‌ ಶೆಟ್ಟಿ(Chandan Shetty) ಸಂಗೀತ ಹಾಗೂ ಸಾಹಿತ್ಯ ಬರೆದಿದ್ದು ಅನಿರುದ್ಧ್‌ ಶಾಸ್ತ್ರೀ ಧ್ವನಿಯಲ್ಲಿ ಹಾಡು ಅದ್ಬುತವಾಗಿ ಮೂಡಿಬಂದಿದೆ. ಇನ್ನೂ ಈ ಹಾಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡಿದ್ದ ಚಂದನ್‌ ನಿವೇದಿತಾ ಜೋಡಿ ಡ್ಯಾನ್ಸ್‌ ಮಾಡಿದ್ದು, ಹಾಡಿನಲ್ಲಿ “ನೋ ಅನ್ನದೇ ಎಸ್‌ ಎಂದರೆ ಅಫಿಷಿಯಲ್‌ ಆಗಿ ಪಪ್ಪಿ ಕೊಡುವೆ” ಎಂಬ ಸಾಹಿತ್ಯಕ್ಕೆ ಚಂದನ್‌ ಹಾಗೂ ನಿವೇದಿತಾ ಗೌಡ ಲಿಪ್ ಲಾಕ್ ಮಾಡಿದ್ದಾರೆ.

ಇದನ್ನೂ ಓದಿ : Actor Prabhas : ಪ್ರಭಾಸ್‌ “ಆದಿಪುರುಷ” ಟೀಸರ್‌ ರಿಲೀಸ್‌ ರಿಲೀಸ್‌ : ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ

ಇದನ್ನೂ ಓದಿ : Singer mangli : ಕನ್ನಡ ನನ್ನ ಎರಡನೇ ಮನೆ ಎಂದ ಗಾಯಕಿ ಮಂಗ್ಲಿ

ಇದನ್ನೂ ಓದಿ :Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಬರ್ತಡೆ : ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಇನ್ಸ್ಟಾಗ್ರಾಂ ನಲ್ಲಿ ಸದಾ ಆಕ್ಟೀವ್‌ ಆಗಿರುವ ಈ ಜೋಡಿಯ ಲಿಪ್‌ ಲಾಕ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಬಿಗ್ ಬಾಸ್ ಶೋ ಮೂಲಕ ಖ್ಯಾತಿ ಪಡೆದಿರುವ ಚಂದನ್ ಶೆಟ್ಟಿ ಈಗಾಗಲೇ ರಾಪರ್ ಸಾಂಗ್ ಗಳ ಮೂಲಕ ಖ್ಯಾತಿಗಳಿಸಿದ್ದಾರೆ. ಜೊತೆ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ನಿವೇದಿತಾ ಗೌಡ ಕೂಡ ರಿಯಾಲಿಟಿ ಶೋಗಳ ಮೂಲಕ ಖ್ಯಾತಿಗಳಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು, ಆಗಾಗ ರೀಲ್ಸ್ ಮೂಲಕ ಟ್ರೆಂಡಿಂಗ್ ಆಗುತ್ತಿದ್ದಾರೆ

Chandan Shetty Nivedita Gowda pair lip locked in reels.

RELATED ARTICLES

Most Popular