Meghana Raj Sarja : ಮೊದಲು ಸ್ಕೂಲ್, ಆಮೇಲೆ‌ ನಟನೆ: ಮಗ ರಾಯನ್ ಸರ್ಜಾ ಬಗ್ಗೆ ತಮ್ಮ ಕನಸು ಹಂಚಿಕೊಂಡ ನಟಿ ಮೇಘನಾ ರಾಜ್ ಸರ್ಜಾ

Meghana Raj Sarja Rayan Sarja : ಡಾಕ್ಟರ್‌ ಮಕ್ಕಳು ಡಾಕ್ಟರ್, ಪೊಲೀಸರ ಮಕ್ಕಳು ಪೊಲೀಸ್ ಹಾಗೂ ನಟರ ಮಕ್ಕಳು ನಟರಾಗೋದು ಕಾಮನ್. ಹೀಗಾಗಿ ಸಹಜವಾಗಿಯೇ ಸೆಲೆಬ್ರೆಟಿ ಸ್ಟಾರ್ ಗಳ ಮಕ್ಕಳು ಯಾವಾಗ ತೆರೆಗೆ ಬರ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಿಗಿರುತ್ತೆ. ಅದರಲ್ಲೂ ಹುಟ್ಟುತ್ತಲೇ ಸೆಲೆಬ್ರೆಟಿ ಗೆಸ್ಚರ್ ಪಡೆದುಕೊಂಡ ಮಾಸ್ಟರ್ ರಾಯನ್ ರಾಜ್ ಸರ್ಜಾ ಅಂತೂ ಮಾಧ್ಯಮಗಳ ಫೆವರಿಟ್ ಬಾಯ್. ಇನ್ನೂ ರಾಯನ್ ರಾಜ್ ಸರ್ಜಾ ಯಾವಾಗ ನಟನೆಗೆ ಬರ್ತಾರೆ ಅನ್ನೋ ಕುತೂಹಲಕ್ಕೆ ನಟಿ ಮೇಘನಾ ಸರ್ಜಾ ಉತ್ತರ ನೀಡಿದ್ದಾರೆ.

ಅಕ್ಟೋಬರ್ 2 ರಂದು ಸರ್ಜಾ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ್ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣುಮಗುವಾಗಿದೆ. ಈ ಸಂಭ್ರಮದಲ್ಲಿ ಮಾತಿಗೆ ಸಿಕ್ಕ ಮೇಘನಾ ರಾಜ್ ಸರ್ಜಾ (Meghana Raj Sarja)ಮಗನ ಬಗ್ಗೆ ತಮ್ಮ ಕನಸು ಬಿಚ್ಚಿಟ್ಟಿದ್ದಾರೆ. ಮೇಘನಾ ಮಗ ರಾಯನ್ ರಾಜ್ ಸರ್ಜಾ ನಟನೆಗೆ ಬರೋದು ಯಾವಾಗ ಎಂಬ ಪ್ರಶ್ನೆಗೆ ನಸುನಗುತ್ತ ಉತ್ತರ ನೀಡಿದ ಮೇಘನಾ ಸರ್ಜಾ ಅವನು ಮೊದಲು ಸ್ಕೂಲ್ ಗೆ ಎಂಟ್ರಿ ಕೊಡಲಿ ಆಮೇಲೆ ನಟನೆಗೆ ಎಂಟ್ರಿ ಕೊಡೋ ಬಗ್ಗೆ ಯೋಚ್ನೇ ಮಾಡೋಣ ಎಂದರು.

ಹಾಗೆ ಹೇಳಿದ ಮಾತ್ರಕ್ಕೆ ರಾಯನ್ ನಟನೆಗೆ ಬರೋದಿಲ್ಲ ಎಂದರ್ಥವಲ್ಲ. ಈ ಬಗ್ಗೆ ವಿವರಣೆ ನೀಡಿದ ಮೇಘನಾ ಸರ್ಜಾ, ರಾಯನ್ ನಟನೆಗೆ ಆಸಕ್ತಿ ತೋರಿದರೇ ನಮಗೂ ಖುಷಿ. ಆದರೆ ಅವನು‌ ನಟನೆಗೆ ಬರಬೇಕೆಂಬ ಒತ್ತಡವೇನೂ ಇಲ್ಲ. ಎಜ್ಯುಕೇಶನ್ ಮುಗಿಸಿದ ಮೇಲೆ ಅವನ ಇಷ್ಟದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ನಮ್ಮ ಎರಡು ಫ್ಯಾಮಿಲಿಯಲ್ಲಿ ನಟನೆಯೇ ಉಸಿರು. ಅದನ್ನು ಬಿಟ್ಟು ಬೇರೆನೂ ಗೊತ್ತಿಲ್ಲ. ಹೀಗಾಗಿ ಅವನ ರಕ್ತದಲ್ಲೂ ನಟನೆಯ ಅಂಶ ಮೈಗೂಡಿಕೊಂಡಿರುತ್ತೆ. ಆದರೆ ಅಂತಿಮ ಆಯ್ಕೆ ಅವನದೇ. ಯಾವುದೇ ಒತ್ತಡವಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Singer mangli : ಕನ್ನಡ ನನ್ನ ಎರಡನೇ ಮನೆ ಎಂದ ಗಾಯಕಿ ಮಂಗ್ಲಿ

ಇದನ್ನೂ ಓದಿ : Rachita Ram : ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಬರ್ತಡೆ : ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು

ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

ಸದ್ಯ ರಾಯನ್ ರಾಜ್ ಸರ್ಜಾ ಎರಡನೇ ವರ್ಷದ ಸನಿಹದಲ್ಲಿದ್ದು ಇದೇ ಬರುವ ಅಕ್ಟೋಬರ್ 2022 ಕ್ಕೆ ರಾಯನ್ ರಾಜ್ ಸರ್ಜಾಗೆ ಎರಡು ವರ್ಷ ತುಂಬಲಿದೆ. ಕಳೆದ ವರ್ಷ ಮೇಘನಾ ಕರೋನಾ ಕಾರಣಕ್ಕೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿರಲಿಲ್ಲ. ಆದರೆ ಈ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸೋ ಸಾಧ್ಯತೆ ಇದೆ. ಅದರಲ್ಲೂ ಇದೇ ತಿಂಗಳು ಸರ್ಜಾ ಕುಟುಂಬಕ್ಕೆ ಮತ್ತೊಂದು ಕುಡಿ ಸೇರ್ಪಡೆಗೊಂಡಿರುವುದು ಖುಷಿಯ ವಾತಾವರಣ ಸೃಷ್ಟಿಯಾಗಿದೆ.

First school, then acting: Actress Meghana Raj Sarja shares her dream about her son Rayan Sarja

Comments are closed.