Karnataka Yellow Alert : ಕರ್ನಾಟಕದಲ್ಲಿಂದು ಬಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : (Karnataka Yellow Alert ) ರಾಜ್ಯದ ಹಲವೆಡೆ ಧಾರಾಕಾರ ಮಳೆಯಗುತ್ತಿದ್ದು, ಇಂದು ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ .ಹಾಸನ, ಕೊಡಗು , ಮೈಸೂರು, ಚಾಮರಾಜನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ʼಯೆಲ್ಲೋ ಅಲರ್ಟ್‌ʼ ಘೋಷಿಸಲಾಗಿದೆ.

ಕಳೆದ ಎರಡು ದಿನಗಳಿಂದಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾರೀ ಮಳೆ (Karnataka Yellow Alert )ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾನುವಾರ 4 ಸೆಂ.ಮೀ. ಮಳೆಯಾಗಿದ್ದು, ಬಳ್ಳಾರಿಯಲ್ಲಿ 6 ಸೆಂ. ಮೀ.,ಗದಗದ ಶಿರಾಲಿ, ರಾಯಚೂರಿನಲ್ಲಿ 5 ಸೆಂ.ಮೀ., ಗದಗದ ಶಿರಹಟ್ಟಿಯಲ್ಲಿ 10 ಸೆಂ.ಮೀ. ಮಳೆಯಾಗಿದ್ದು, ಎಲ್ಲೆಡೆ ವರುಣನ ಆರ್ಭಟ ಜೋರಾಗಿದೆ.

ಇದನ್ನೂ ಓದಿ : Chandan Shetty – Niveditha Gowda : ರೀಲ್ಸ್‌ ನಲ್ಲಿ ಲಿಪ್‌ ಲಾಕ್‌ ಮಾಡಿದ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಜೋಡಿ

ಇದನ್ನೂ ಓದಿ : Meghana Raj Sarja : ಮೊದಲು ಸ್ಕೂಲ್, ಆಮೇಲೆ‌ ನಟನೆ: ಮಗ ರಾಯನ್ ಸರ್ಜಾ ಬಗ್ಗೆ ತಮ್ಮ ಕನಸು ಹಂಚಿಕೊಂಡ ನಟಿ ಮೇಘನಾ ರಾಜ್ ಸರ್ಜಾ

ಇದನ್ನೂ ಓದಿ :Singer mangli : ಕನ್ನಡ ನನ್ನ ಎರಡನೇ ಮನೆ ಎಂದ ಗಾಯಕಿ ಮಂಗ್ಲಿ

ನೈರುತ್ಯ ಮಾನ್ಸೂನ್‌ ಮಾರುತಗಳ ಕುರಿತು ಚರ್ಚೆ ನಡೆಯುತ್ತಿದ್ದು, ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯತ್ತಿವೆ. ಭಾರತೀಯ ಹವಾಮಾನ ಇಲಾಖೆ ಹೊಸ ಮುನ್ಸೂಚನೆಯ ಪ್ರಕಾರ ದೇಶದ ಹಲವರು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ದೆಹಲಿಯಲ್ಲಿ ಇಂದಿನಿಂದ ಅಕ್ಟೋಬರ್‌ 8 ರ ವರೆಗೂ ಹವಮಾನದಲ್ಲಿ ಏರುಪೇರುಗಳು ಕಂಡುಬರುವ ಸಾಧ್ಯತೆಗಳಿವೆ. ಮುಂದಿನ ಮೂರು ದಿನಗಳ ಕಾಲ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಬಂಗಾಳ, ತಮಿಳುನಾಡು ಹಾಗೂ ಇನ್ನು ಕೆಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇಂದು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ನಾಡ ಜನತೆ ತತ್ತರಿಸಿ ಹೋಗಿದ್ದಾರೆ. ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಡ್ಯಾಮ್‌ ಗಳಲ್ಲಿ ನೀರಿನ ಒಳಹರಿವು ಜಾಸ್ತಿಯಾಗಿದ್ದು, ರೈತರು ಬೆಳೆದ ಬೆಳೆಗಳು ನಾಶವಾಗಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ . ಇನ್ನೂ ಕೆಲವೆಡೆ ನೀರಿನ ರಭಸಕ್ಕೆ ಹಲವರು ಜೀವ ಕಳೆದುಕೊಂಡಿದ್ದಾರೆ. ಕೆಲವೆಡೆ ಗುಡ್ಡಗಳು , ಮನೆಗಳು ನೆಲಕ್ಕುರುಳಿದ್ದು ಅನೇಕ ಜೀವ ಹಾನಿಯುಂಟಾಗಿದೆ.

Chance of rain again in Karnataka: Yellow alert announced

Comments are closed.