Chandan Shetty Niveditha Gowda Divorce: ಕಿರುತೆರೆಯ ಖ್ಯಾತ ನಟಿ ನಿವೇದಿತಾ ಗೌಡ (Niveditha gowda) ಹಾಗೂ ಸ್ಯಾಂಡಲ್‌ವುಡ್‌ನ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ(Chandan Shetty) ಅವರು ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾಗಿದ್ದು, ಯುವ ಸೆಲೆಬ್ರಿಟಿ ಜೋಡಿಯ ಬ್ರೇಕಪ್‌ಗೆ ಕಾರಣವೇನು ಅನ್ನೋದು ಬಯಲಾಗಿದೆ.
ಕನ್ನಡದ ಬಿಗ್‌ಬಾಸ್ ಸೀಸನ್ ೫ ರಿಯಾಲಿಟಿ ಶೋ ಮೂಲಕ ಪ್ರಖ್ಯಾತಿ ಪಡೆದುಕೊಂಡಿರುವ ನಟಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಬಿಗ್‌ಬಾಸ್ ಶೋನಲ್ಲಿಯೇ ಇಬ್ಬರ ಬಗ್ಗೆಯೂ ಗುಸುಗುಸು ಕೇಳಿಬಂದಿತ್ತು. ಬಿಗ್‌ಬಾಸ್ ಬೆನ್ನಲ್ಲೇ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರೀತಿ ನಿವೇದನೆ ಮಾಡಿದ್ದರು.
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ನಂತರದಲ್ಲಿ ಇಬ್ಬರೂ ವಿವಾಹ ಮಾಡಿಕೊಂಡಿದ್ದರು. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ೪ ವರ್ಷ ಕಳೆದ ಬೆನ್ನಲ್ಲೇ ಈ ಜೋಡಿ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ಬೆಂಗಳೂರಿನ ಶಾಂತಿನಗರದ ನ್ಯಾಯಾಲಯದಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ
ಮದುವೆಯ ನಂತರ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಜೋಡಿ ಯಾವ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದೆ ಅನ್ನೋದು ಇನ್ನೂ ಕ್ಲೀಯರ್ ಆಗಿಲ್ಲ. ಆದರೆ ತಮ್ಮ ಕೆರಿಯರ್ ದೃಷ್ಟಿಯಿಂದ ವಿಚ್ಚೇಧನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ವಿಚ್ಚೇಧನದ ಕುರಿತು ನಿವೇದಿತಾ ಗೌಡ ಅಥವಾ ಚಂದನ್ ಶೆಟ್ಟಿ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಸದ್ಯ ನ್ಯಾಯಾಲಯಕ್ಕೆ ಈ ಜೋಡಿ ಅರ್ಜಿ ಸಲ್ಲಿಸಿದ್ದು, ಇನ್ನಷ್ಟೇ ನ್ಯಾಯಾಲಯ ತೀರ್ಪು ನೀಡಬೇಕಾಗಿದೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ಇದೀಗ ದೂರವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : Mothers Day 2024 : ಕನ್ನಡ ಸಿನಿಮಾ ನಟ, ನಟಿಯರ ಮದರ್ಸ್ ಡೇ ? ಇಲ್ಲಿದೆ ಅಪರೂಪದ ಅಲ್ಬಂ
Chandan Shetty Niveditha gowda Divorce: Did you say goodbye to married life for this reason ?