Mothers Day 2024 : ಕನ್ನಡ ಸಿನಿಮಾ ನಟ, ನಟಿಯರ ಮದರ್ಸ್ ಡೇ ? ಇಲ್ಲಿದೆ ಅಪರೂಪದ ಅಲ್ಬಂ

Mothers Day 2024 : ನವಮಾಸ ಗರ್ಭದಲ್ಲಿ ಹೊತ್ತು, ನೋವಿನ ಜೊತೆ ಹೆತ್ತು ಜೀವವೊಂದನ್ನು ಭೂಮಿಗೆ ತರೋ ತಾಯಂದಿರ ತ್ಯಾಗಕ್ಕೆ ಬೆಲೆ ಕಟ್ಟೋಕಾಗಲ್ಲ. ಒಂದು ದಿನದಲ್ಲಿ ತಾಯಿ ಪದವನ್ನು ಕಟ್ಟಿಡೋದು ಸಾಧ್ಯವಿಲ್ಲ.

Mothers Day 2024 : ನವಮಾಸ ಗರ್ಭದಲ್ಲಿ ಹೊತ್ತು, ನೋವಿನ ಜೊತೆ ಹೆತ್ತು ಜೀವವೊಂದನ್ನು ಭೂಮಿಗೆ ತರೋ ತಾಯಂದಿರ ತ್ಯಾಗಕ್ಕೆ ಬೆಲೆ ಕಟ್ಟೋಕಾಗಲ್ಲ. ಒಂದು ದಿನದಲ್ಲಿ ತಾಯಿ ಪದವನ್ನು ಕಟ್ಟಿಡೋದು ಸಾಧ್ಯವಿಲ್ಲ. ಆದರೂ ತಾಯಂದಿರ ದಿನವನ್ನು ಎಲ್ಲರೂ ತಮ್ಮ ತಮ್ಮ ತಾಯಿಯ ತ್ಯಾಗ, ಸಾಧನೆ, ಪ್ರೇರಣೆಯ ಜೊತೆಗೆ ಆಚರಿಸಿಕೊಂಡು ಸಂಭ್ರಮಿಸ್ತಾರೆ. ಅದರಲ್ಲಿ ಸ್ಟಾರ್ ಗಳು ಹೊರತಲ್ಲ. ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಮಾಲಿವುಡ್ (Mollywood),ಬಾಲಿವುಡ್ (Bollywood) ತನಕ ತಾರೆಯರ ತನಕ ಎಲ್ಲರೂ ತಾಯಂದಿರ ದಿನಾಚರಣೆಗೆ (Celebrities Mothers Day 2024) ಹೇಗೆಲ್ಲ ಅಮ್ಮನಿಗೆ ಶುಭಕೋರಿದ್ದಾರೆ ಇಲ್ಲಿದೆ ಡಿಟೆಲ್ಸ್.

Mothers Day 2024 of Kannada film actors and actresses Here is a rare album Priyanka Upendra
Image Credit to Original Source

ಸ್ಯಾಂಡಲ್ ವುಡ್ ನಿಂದ ಕೆರಿಯರ್ ಆರಂಭಿಸಿ ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿರೋ ನಟಿ ರಶ್ಮಿಕಾ‌ ಮಂದಣ್ಣ ತಾಯಿಯೊಂದಿಗೆ ಸ್ನೇಹಿತೆಯಂತೆ ಇದ್ದಾರೆ. ಅಷ್ಟೇ ಪ್ರೀತಿಯಿಂದ ರಶ್ಮಿಕಾ ತಾಯಿ ಜೊತೆಗಿನ ಪೋಟೋ ಶೇರ್ ಮಾಡಿ ಶುಭಕೋರಿದ್ದಾರೆ. ಮಗನಿಗೆ ಎಷ್ಟೇ ವಯಸ್ಸಾದರೂ ತಾಯಿ ಮೇಲಿನ ಪ್ರೀತಿ ಎಂದಿಗೂ ಹಾಗೇ ಇರುತ್ತೆ ಅನ್ನೋದಿಕ್ಕೆ ಎಂಬಂತೆ ಸ್ವತಃ ಮೊಮ್ಮಕ್ಕಳನ್ನು ಕಂಡಿರೋ ನಟ ಜಗ್ಗೇಶ್ ಕೂಡ ತಾಯಿ ಜೊತೆಗಿನ ಪೋಟೋ ಶೇರ್ ಮಾಡಿನ ಅಮ್ಮನ ನೆನಪುಗಳನ್ನು ಹಸಿರಾಗಿಸಿಕೊಂಡಿದ್ದಾರೆ.

ಸ್ವತಃ ಸಿನಿಮಾಗಳಲ್ಲಿ ತಾಯಿ‌ಪಾತ್ರದಲ್ಲಿ ಮಿಂಚೋ‌ ನಟಿ ತಾರಾ ತಮ್ಮ ತಾಯಿಯ ಪೋಟೋದ ಜೊತೆ ತ್ಯಾಗದಲ್ಲಿ ಕೋಟಿ ನಮನ. ನಿನಗೆ ಪುಟ್ಟ ದೇವತೆ ಎಂಬ ಕವನವನ್ನು ಹಂಚಿಕೊಂಡು ತಾಯಿಗೆ ಶುಭಹಾರೈಸಿದ್ದಾರೆ. ನಟಿಯಾಗೋ‌ ಮುನ್ನವೇ ತಮ್ಮ ಡೈ ಟು ಡೇ ಪೋಟೋ ಶೂಟ್ ಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ದುನಿಯಾ ವಿಜಯ್ ಮೊದಲ‌ ಪುತ್ರಿ ಮೋನಿಕಾ ಕೂಡ ತಮ್ಮ ತಾಯಿ ನಾಗರತ್ನಾ ಪೋಟೋ ಶೇರ್ ಮಾಡಿ ತಾಯಿಯ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

Mothers Day 2024 of Kannada film actors and actresses Here is a rare album Jaggesh and Mother
Image Credit to Original Source

ಇದನ್ನೂ ಓದಿ : Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು ! ಇಲ್ಲಿದೆ Exclusive ಸ್ಟೋರಿ

ಬಾಲ್ಯದಲ್ಲಿ ತಾಯಿಯ ಜೊತೆ ಇದ್ದ ಪೋಟೋ ಶೇರ್ ಮಾಡಿರೋ ನಟ ಶರಣ, ವಿಶ್ವದ ಎಲ್ಲ‌ತಾಯಂದಿರನ್ನೂ ಸ್ಮರಿಸಿ ಶುಭಕೋರಲು ಮರೆತಿಲ್ಲ. ನಟಿ ಹಾಗೂ ಸಂಸದೆ ಸುಮಲತಾ ತಾಯಿ ಹಾಗೂ ಅತ್ತೆ ಪಾತ್ರದಲ್ಲಿದ್ದರೂ ತಮ್ಮ ತಾಯಿಯ ಜೊತೆಗಿನ ಪೋಟೋ ಹಂಚಿ ಕೊಂಡಿದ್ದಾರೆ. ಅಷ್ಟೇ ಅಲ್ಲ ನಾನು ಇವತ್ತು ಏನಾಗಿದ್ದರೂ ಅದಕ್ಕೆ ನನ್ನ ತಾಯಿ‌‌ ನೀಡಿದ ಪ್ರೇರಣೆಯೇ ಕಾರಣ ಎಂದು ಸ್ಮರಿಸಿದ್ದಾರೆ.

ಸುಮಲತಾ ಸೊಸೆ ಹಾಗೂ ನಟ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪಾ ಕೂಡ ತಾಯಿ ಹಾಗೂ ಅತ್ತೆ ಸುಮಲತಾ ಪೋಟೋ ಜೊತೆ ಮದರ್ಸ್ ಡೇ ವಿಶ್ ಶೇರ್ ಮಾಡಿದ್ದಾರೆ. ವಿಶ್ವಸುಂದರಿಯಾಗಿದ್ದೂ, ಸಿಂಗಲ್ ಪೇರೆಂಟಿಂಗ್ ಅಯ್ಕೆ ಮಾಡಿಕೊಂಡ ನಟಿ ಸುಶ್ಮಿತಾ ಸೇನ್ ತಮ್ಮ ದತ್ತು ಮಕ್ಕಳೊಂದಿಗಿನ ಪೋಟೋ ಶೇರ್ ಮಾಡಿದ್ದು, ತಾಯಾಗುವ ಅವಕಾಶ ಕೊಟ್ಟ ಮಕ್ಕಳನ್ನು ಅಭಿನಂದಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್

ಸದ್ಯ ಸ್ತ್ರೀ ಪ್ರಧಾನ ಪಾತ್ರದಲ್ಲೇ ಮಿಂಚ್ತಿರೋ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ತಾಯಿ‌ ಮತ್ತು ಅತ್ತೆ ಪೋಟೋದ ಜೊತೆ ಮದರ್ಸ್ ಡೇ ಸೆಲಿಬ್ರೇಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳು ದರ್ಶನ್, ಯಶ್, ಸುದೀಪ್, ರಾಧಿಕಾ ಪಂಡಿತ್ ಹೀಗೆ ಹಲವು ಸ್ಟಾರ್ ಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಾತೃಪ್ರೇಮದ ಝಲಕ್ ತೋರಿದ್ದು ಫ್ಯಾನ್ ತಾಯಿಪ್ರೀತಿ ಕಂಡ ಅಭಿಮಾನಿ ಗಳು ಕೂಡ ತಾಯಂದಿರ ಪೋಟೋದ ಜೊತೆ ಮದರ್ಸ್ ಡೇ ಸೆಲಿಬ್ರೇಟ್ ಮಾಡ್ತಿದ್ದಾರೆ.

ಇದನ್ನೂ ಓದಿ : ಹಳ್ಳಿಹುಡುಗಿಯಾಗಿ ದಿಲ್ ಪಸಂದ ಬೆಡಗಿ: ಮೇಘಾ ಶೆಟ್ಟಿ ಹೊಸ ಅವತಾರ ಕ್ಕೆ ಮನಸೋತ ಅಭಿಮಾನಿಗಳು

ತಾಯಿ ಜನ್ಮ ಕೊಟ್ಟವಳು ಮಾತ್ರವಲ್ಲ ನಮ್ಮನ್ನು ಹೊತ್ತವಳು, ಪೊರೆದವಳು ಹಾಗೂ ದೈವವಾಗಿ ನಿಂತು ಕಾಯುವವಳು.‌ಹೀಗಾಗಿ ತಾಯಿಮನಸ್ಸಿನ ಎಲ್ಲರಿಗೂ ತಾಯಂದಿರ ದಿನದ ಶುಭಾಶಯ ಕೋರುತ್ತಿದೆ ನಿಮ್ಮ ನ್ಯೂಸ್ ನೆಕ್ಸ್ಟ್ ಕನ್ನಡ.

Mother’s Day 2024 of Kannada film actors and actresses ? Here is a rare album

Comments are closed.