‘ಚಾಂದಿನಿ ಬಾರ್’ ಪೋಸ್ಟರ್ ತೆರೆದ ಸಿದ್ಧರಾಮಯ್ಯ !

0

‘ಚಾಂದಿನಿ ಬಾರ್’ ಟೈಟಲ್ ಮೂಲಕವೇ ಕುತೂಹಲ ಹುಟ್ಟಿಸುತ್ತಿರೋ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ. ಕ್ಯಾಮರಾ ಮೂವಿಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರೋ ಚಾಂದಿನಿ ಬಾರ್ ಗೆ ಮೊದಲ ಬಾರಿಗೆ ರಾಘವೇಂದ್ರ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಮಾತ್ರವಲ್ಲ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ.

ಚಾಂದಿನಿ ಬಾರ್ ಹೆಸರಿನ ಜೊತೆಗೆ ಸಿನಿಮಾ “ಸರ್ವೇ ಜನೋ ಸುಖಿನೋ ಭವಂತು” ಅನ್ನೋ ಸಬ್ ಟೈಟಲ್ ಹೊಂದಿದೆ. ಬಾರ್ ನಲ್ಲಿ ಕೆಲಸ ಮಾಡೋ ಹುಡುಗನ ಕಥೆಯನ್ನೇ ಇಟ್ಟುಕೊಂಡು ಕಮರ್ಷಿಯಲ್ ಟಚ್ ಕೊಟ್ಟು ತೆರೆಯ ಮೇಲೆ ತರೋ ಪ್ರಯತ್ನ ನಡೆಸಲಾಗಿದೆ ಅನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೊ ಚಾಂದಿನಿ ಬಾರ್ ತಂಡ, ಚಂದನವನದಲ್ಲಿ ಚಿತ್ರದ ಪ್ರಚಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ. ಪ್ರೇಮಿಗಳ ದಿನದಂದೇ ಸಿದ್ದರಾಮಯ್ಯ ಚಿತ್ರದ ಆಫೀಶಿಯಲ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮದ್ವೆಗೆಟಪ್ ನಲ್ಲಿರುವ ಪೋಸ್ಟರ್ ತುಂಬಾನೇ ಪ್ರಾಮಿಸಿಂಗ್ ಆಗಿದ್ದು, ನಾಯಕಿಯಾಗಿ ಸುಕೃತಿ ಪ್ರಭಾಕರ್ ಬಣ್ಣ ಹಚ್ಚಿದ್ದಾರೆ. ಪ್ರಮುಖ ಪಾತ್ರದಲ್ಲಿ ರಶ್ಮಿ, ಸಿದ್ದೇಶ್ ಬದನವಾಳು, ಮಣಿಕಂಠ (ಕಾಮುದರಿ), ಸಂಪತ್ ಕುಮಾರ್( ಕೆಜಿಫ್), ಸೂರ್ಯ ಶೇಖರ್, ರಾಜರಥದ ಶ್ರೀವತ್ಸ, ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಭಾರತ್ ಕುಮಾರ್ ಸಿನಿಮಾದ ಕಾರ್ಯಕಾರಿ ನಿಮಾಪಕರ ಹೊಣೆ ಹೊತ್ತಿದ್ದರೆ, ಚೇತನ್ ಶರ್ಮನಿ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ. ಇನ್ನು ಬಿ.ಎಸ್.ಕೆಂಪರಾಜ್ ಸಂಕಲ ಮಾಡಿದ್ರೆ, ರಾಮಕ್ರಿಶ್ ಸಂಗೀತದ ಜೊತೆಗೆ ವಿಶಾಖ್ ನಾಗಲಾಪುರ ಮತ್ತು ಕಾರ್ತಿಕ್ ನಾಗಲಾಪುರ ಅವರ ಸಾಹಿತ್ಯ ರಾಗ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಕಿವಿಗಿಂಪು ನೀಡುತ್ತಿದೆ. ಒಟ್ಟಿನಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ಹೊಸಬರ ಹೊಸ ಚಿತ್ರ ಚಾಂದಿನಿ ಬಾರ್ ಹಲವು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅನ್ನೋ ಭರವಸೆಯಲ್ಲಿದೆ ಚಿತ್ರತಂಡ.

Leave A Reply

Your email address will not be published.