ಚಿರು ಸರ್ಜಾ – ರಾಯನ್ ರಾಜ್‌ ಸರ್ಜಾ ಪ್ರೀತಿಯ ಕುಟ್ಟಿಮಾ : ನಟಿ ಮೇಘನಾ ರಾಜ್ ಕ್ರಿಸ್ಮಸ್ ಸ್ಪೆಶಲ್ ಸೆಲಿಬ್ರೇಶನ್

Meghana Raj Christmas Special : ಕ್ರಿಸ್ಮಸ್ ಸಂಭ್ರಮದಲ್ಲಿರೋ ಮೇಘನಾ ರಾಜ್ ತಮ್ಮ ಸ್ಪೆಶಲ್ ನೇಮ್ ಜೊತೆ ಮಗನ ಹೆಸರು ಸೇರಿಸಿ ಬೆಲೆಬಾಳುವ ಗಿಫ್ಟ್ ವೊಂದನ್ನು ಸಿದ್ಧಪಡಿಸಿಕೊಂಡಿದ್ದು, ಮೇಘನಾ ಈ ಡಿಫ್ರೆಂಟ್ ಗಿಫ್ಟ್ ನೋಡುಗರ ಗಮನ ಸೆಳೆದಿದೆ.

Meghana Raj Christmas Special : ಬದುಕಿನ ಸರ್ವಸ್ವವೂ ಆಗಿದ್ದ ಚಿರುವನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ಸರ್ಜಾ, ಸದ್ಯ ಚಿರು ಸರ್ಜಾ ಹಾಗೂ ತಮ್ಮ ಪ್ರೀತಿಯ ದ್ಯೋತಕವಾದ ಮಗ ರಾಯನ್ ರಾಜ್ ಸರ್ಜಾನಲ್ಲೇ ಬದುಕಿನ ಖುಷಿ ಕಾಣುತ್ತಿದ್ದಾರೆ. ಸದ್ಯ ಕ್ರಿಸ್ಮಸ್ ಸಂಭ್ರಮದಲ್ಲಿರೋ ಮೇಘನಾ ರಾಜ್ ತಮ್ಮ ಸ್ಪೆಶಲ್ ನೇಮ್ ಜೊತೆ ಮಗನ ಹೆಸರು ಸೇರಿಸಿ ಬೆಲೆಬಾಳುವ ಗಿಫ್ಟ್ ವೊಂದನ್ನು ಸಿದ್ಧಪಡಿಸಿಕೊಂಡಿದ್ದು, ಮೇಘನಾ ಈ ಡಿಫ್ರೆಂಟ್ ಗಿಫ್ಟ್ ನೋಡುಗರ ಗಮನ ಸೆಳೆದಿದೆ.

ಕುಟ್ಟಿಮಾ ಅನ್ನೋದು ನಟಿ ಮೇಘನಾ ರಾಜ್ ಪಾಲಿಗೆ ಒಂದು ವಿಶೇಷ ಶಬ್ದ. ಚಿರಂಜೀವಿ ಸರ್ಜಾ ಮೇಘನಾರನ್ನು ಪ್ರೀತಿಯಿಂದ ಕುಟ್ಟಿಮಾ ಎಂದು ಕರೆಯುತ್ತಿದ್ದರು. ‌ ಹಲವು ಸಂದರ್ಶನಗಳಲ್ಲಿ ಮೇಘನಾ ಚಿರು ತಮ್ಮನ್ನು ಸದಾ ಕುಟ್ಟಿಮಾ ಎಂದೇ ಕರೆಯುತ್ತಾರೆ. ಕುಟ್ಟಿಮಾ ಅನ್ನೋದು ತಮ್ಮ ಪಾಲಿಗೊಂದು ವಿಶೇಷ ಶಬ್ದ ಎಂದು ಹೇಳಿಕೊಂಡಿದ್ದರು.

Chiru Sarja - Rayan Raj Sarja Beloved Kuttima Actress Meghana Raj Christmas Special Celebration
Image Credit to Original Source

ಈಗ ಚಿರು ಇಲ್ಲವಾಗಿದ್ದರೂ ಚಿರುವಿನ ಪ್ರತಿರೂಪದಂತಹ ರಾಯನ್ ರಾಜ್ ಸರ್ಜಾ ಮೇಘನಾ ರಾಜ್ ಮನೆ -ಮನ ತುಂಬಿದ್ದಾನೆ. ಮಾತ್ರವಲ್ಲ ರಾಯನ್ ಕೂಡ ಮೇಘನಾ ರನ್ನು ಕುಟ್ಟಿಮಾ ಎಂದೇ ಕರೆಯುತ್ತಾನಂತೆ. ಹೀಗಾಗಿ ತಮ್ಮ ಪಾಲಿಗೆ ವಿಶೇಷ ಶಬ್ದ ವಾಗಿರುವ ಕುಟ್ಟಿಮಾ ಹೆಸರನ್ನು ಸ್ಪೆಶಲ್ ಬ್ರೆಸ್ಲೈಟ್ ನಲ್ಲಿ ನೇಮ್ ಪ್ಲೇಟ್ ರೀತಿಯಲ್ಲಿ ಹಾಕಿಸಿಕೊಳ್ಳುವ ಮೂಲಕ ಮಗನಿಗೆ ಕ್ರಿಸ್ಮಸ್ ಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಇದನ್ನೂ ಓದಿ : ನಟಿ ಧನ್ಯಾ ರಾಮ್ ಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ : ದೊಡ್ಮನೆ ಕುವರಿಗೆ ಸ್ಯಾಂಡಲ್ ವುಡ್ ಶುಭಹಾರೈಕೆ

24 ಕ್ಯಾರೆಟ್ ಗೋಲ್ಡ್ ಸುಂದರ ಬ್ರೆಸ್ಲೈಟ್ ಕಮ್ ಬಳೆ ಯಲ್ಲಿ ರಾಯನ್ಸ್ ಕುಟ್ಟಿಮಾ ಎಂದು ಮೇಘನಾ ಇಂಗ್ಲೀಷ್ ನಲ್ಲಿ ಬರೆಸಿಕೊಂಡಿದ್ದು, ಸ್ಪೆಷಲ್ ಬಳೆ ಧರಿಸಿ ಸಂಭ್ರಮಿಸುತ್ತಿರುವ ವಿಡಿಯೋವನ್ನು ಮೇಘನಾ ಸರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಈ ಸ್ಪೆಶಲ್ ವಿಡಿಯೋ ನೋಡಿದ ಮೇಘನಾ ಅಭಿಮಾನಿಗಳು ಹಾಗೂ ಸ್ನೇಹಿತೆಯರು ಮೆಚ್ಚಿಕೊಂಡಿದ್ದರು ಕಮೆಂಟ್ ಮಾಡಿ ಮೇಘನಾಗೆ ವಿಶ್ ಮಾಡ್ತಿದ್ದಾರೆ. ಮೇಘನಾ ಎಲ್ಲ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹಿಂದೂ ಧರ್ಮ ಹಾಗೂ ಕ್ರಿಶ್ಚಿಯನ್ ಎರಡೂ ಧರ್ಮದ ಹಬ್ಬಗಳನ್ನು ಮೇಘನಾ ಮನೆಯಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಝೀಬ್ರಾ : ಶೀಘ್ರದಲ್ಲೇ ತೆರೆಗೆ ಡಾಲಿ-ಸತ್ಯದೇವ್ ಕಾಂಬಿಷೇನ್‌ ಸಿನಿಮಾ

ಹೀಗಾಗಿ ಅದ್ದೂರಿ ಕ್ರಿಸ್ಮಸ್ ತಯಾರಿಯಲ್ಲಿರೋ ನಟಿ ಮೇಘನಾ ತಮ್ಮ ಸೆಲ್ಪ್ ಕೇರ್ ಹಾಗೂ ಮೇಕ್ ಓವರ್ ಗೂ ತುಂಬಾ ಇಂಪಾರ್ಟೆನ್ಸ್ ನೀಡಿದ್ದಾರೆ. ಹೀಗಾಗಿ ಮೆನಿಕ್ಯೂರ್,ಪೆಡಿಕ್ಯೂರ್ ಮಾಡಿಸಿಕೊಂಡು ನೇಲ್ ಆರ್ಟ್ ಮಾಡಿಸಿಕೊಂಡಿರೋ ಮೇಘನಾ ಈ ಎಲ್ಲ ವಿಡಿಯೋಗಳನ್ನು ತಮ್ಮ ಬ್ಲಾಗ್ ನಲ್ಲೂ ಹಂಚಿಕೊಂಡಿದ್ದಾರೆ.

Chiru Sarja - Rayan Raj Sarja Beloved Kuttima Actress Meghana Raj Christmas Special Celebration
Image Credit to Original Source

ಸದ್ಯ ತತ್ಸಮ ತದ್ಭವ ಗೆಲುವಿನ ಖುಷಿ ಯಲ್ಲಿ ಹೊಸ ಸಿನಿಮಾ ಅಮರ್ಥ್ಯ ಶೂಟಿಂಗ್ ನಲ್ಲಿ ತೊಡಗಿರೋ ಮೇಘನಾ ರಾಜ್ ಗೆ ತತ್ಸಮ್ ತದ್ಬವ ಯಶಸ್ಸಿನ ಬಳಿಕ ಮಹಿಳಾ‌ ಪ್ರಧಾನ ಪಾತ್ರಗಳ ಸಿನಿಮಾಗಳಿಗೆ ಸಖತ್ ಆರ್ಡರ್ ಬರ್ತಿದೆಯಂತೆ. ಆದರೆ ಮೇಘನಾ ತುಂಬಾ ಚ್ಯೂಸಿಯಾಗಿ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದು, ಶೂಟಿಂಗ್ ಮತ್ತು ಸಿನಿಮಾ ಮಧ್ಯೆ ತಮ್ಮ ಪುತ್ರನ ಪಾಲನೆಗೂ ಅವಕಾಶ ಸಿಗಬೇಕೆಂಬ ಕಾರಣಕ್ಕೆ ಸಿನಿಮಾ ಆಯ್ಕೆಯಲ್ಲಿ ಕೊಂಚ ಸಮಯ ತೆಗೆದುಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ : ಶ್ರೀನಗರ ಕಿಟ್ಟಿ ಜೊತೆ ಮೇಘನಾ ಸರ್ಜಾ: ಸೆಟ್ಟೇರಿದ ಹೊಸ ಸಿನಿಮಾ ಅಮರ್ಥ

ತಮ್ಮ ಪ್ರೀತಿಯ ದ್ಯೋತಕವಾಗಿದ್ದ ಚಿರುನನ್ನು ಕಳೆದುಕೊಂಡ ಮೇಲೆ ಬಹುತೇಕ ಖುಷಿದು ಹೋಗಿದ್ದ ಮೇಘನಾ ರಾಜ್ ರಾಯನ್ ಹುಟ್ಟಿದ ಬಳಿಕ ಬದುಕಿನಲ್ಲಿ ಚೈತನ್ಯತುಂಬಿಕೊಂಡು ಹೊಸತಾಗಿ,ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಸಿನಿಮಾ, ಜಾಹೀರಾತು, ರಿಯಾಲಿಟಿ ಶೋ ಹೀಗೆ ಸಾಕಷ್ಟು ಚಟುವಟಿಕೆಗಳ ಮೂಲಕ ಮೇಘನಾ ಮತ್ತೆ ಬಣ್ಣದ ಲೋಕಕ್ಕೂ ಕಮ್ ಬ್ಯಾಕ್ ಮಾಡಿದ್ದಾರೆ. ಈಗ ಕ್ರಿಸ್ಮಸ್ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಸಪ್ರೈಸ್ ನೀಡಿ ಅವರ ಖುಷಿಯನ್ನು ಹೆಚ್ಚಿಸಿದ್ದಾರೆ.

Chiru Sarja – Rayan Raj Sarja Beloved Kuttima Actress Meghana Raj Christmas Special Celebration

Comments are closed.