ನಿಮಗಿನ್ನೂ ಗೃಹಲಕ್ಷ್ಮೀ ಹಣ ಬಂದಿಲ್ವಾ: ಸಮಸ್ಯೆ ಆಗ್ತಿದ್ಯಾ ? ಚಿಂತೆ ಬೇಡ ಸರ್ಕಾರವೇ ಬರ್ತಿದೆ ನಿಮ್ಮ ಗ್ರಾಮಕ್ಕೆ

Gruha Lakshmi scheme : ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಮಹಿಳೆಯರಿಗೆ ಹಣ ಬಾರದೇ ಇರೋದಿಕ್ಕೆ ಕಾರಣಗಳೇನು ಅನ್ನೋದನ್ನು ಸ್ವತಃ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದ್ದಾರೆ.

Gruha Lakshmi scheme  : ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮೀಯ ಭಾಗ್ಯದಿಂದ ವಂಚಿತರಾಗಿರೋದು ಸುಳ್ಳಲ್ಲ. ಆದರೆ ಮಹಿಳೆಯರಿಗೆ ಹಣ ಬಾರದೇ ಇರೋದಿಕ್ಕೆ ಕಾರಣಗಳೇನು ಅನ್ನೋದನ್ನು ಸ್ವತಃ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಯಿಂದ ಮಹಿಳೆಯರು ವಂಚಿರಾಗ್ತಿರೋದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಇದೊಂದು ದೊಡ್ಡ ಯೋಜನೆ. ಬಹುತೇಕ ಯಶಸ್ವಿಯಾಗಿದೆ. ಈ ಯೋಜನೆ ವಂಚಿತರಿಗಿಂತ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ.

Gruha Lakshmi scheme Govt Organised Gruhalakshmi Camp for technical issues Solving
Image Credit to Original Source

ಇತ್ತೀಚಿಗೆ ಸಿಕ್ಕಿರೋ ಅಂಕಿಅಂಶದ ಪ್ರಕಾರ ರಾಜ್ಯದ 1 ಕೋಟಿ‌17 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಇನ್ನೂ ಅಂದಾಜು ಒಂದೂವರೆ ಲಕ್ಷ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಅದರಲ್ಲೂ ಮಹಿಳೆಯರು ಹಣದಿಂದ ವಂಚಿತರಾಗಿರೋದು ಯೋಜನೆಯ ವೈಫಲ್ಯದಿಂದ ಅಲ್ಲ. ಬದಲಾಗಿ ರೇಶನ್ ಕಾರ್ಡ್, ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದ ತಾಂತ್ರಿಕ. ಸಮಸ್ಯೆಯಿಂದ.

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಈಗಾಗಲೇ ನವೆಂಬರ್ ತಿಂಗಳಿನ ಹಣ ಜಮೆಯಾಗಿದ್ದು, ಡಿಸೆಂಬರ್ ತಿಂಗಳಿನ ಹಣ ಜನವರಿ 5 ರ ಒಳಗೆ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಬೀಳಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಇನ್ನು ಈಗಾಗಲೇ ತಾಂತ್ರಿಕ ಸಮಸ್ಯೆಯಿಂದ ಯೋಜನೆಯ ಲಾಭ ಪಡೆಯಲಾಗದೇ ಪರದಾಡುತ್ತಿರುವ ಮಹಿಳೆಯರ ಸಹಾಯಕ್ಕೆ ಸರ್ಕಾರ ಮುಂದಾಗಿದೆ.

ಗೃಹಲಕ್ಷ್ಮೀ ಯೋಜನೆಯ ಗೊಂದಲ ನಿವಾರಿಸಲು ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಿಸಲು ಸರಕಾರ ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಕ್ಯಾಂಪ್ ನಡೆಯಲಿದ್ದು, ಪಿಡಿಓ ಗಳ‌ ನೇತೃತ್ವದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಇಲಾಖೆ ಸೂಚಿಸಿದೆ. ಡಿಸೆಂಬರ್ 27 ರಿಂದ 29 ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕ್ಯಾಂಪ್ ನಡೆಯಲಿದೆ.

Gruha Lakshmi scheme Govt Organised Gruhalakshmi Camp for technical issues Solving
Image Credit to Original Source

ಈ ಕ್ಯಾಂಪ್ ನಲ್ಲಿ ಸ್ಥಳೀಯ ಸೇವಾಕೇಂದ್ರಗಳ ಸಿಬ್ಬಂದಿ,ಕಂಪ್ಯೂಟರ್ ಆಫರೇಟರ್ಸ್, ಅಂಗನವಾಡಿ ಕಾರ್ಯಕರ್ತರು, Electronic Delivery Of Citizen Services ತಂಡಗಳು ಸಹ ಕ್ಯಾಂಪ್ ನಲ್ಲಿ ಭಾಗವಹಿಸಲು ಸರ್ಕಾರ ಸೂಚಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಸಿಬ್ಬಂದಿ, ಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಬೇಕು.

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ಅಲ್ಲದೇ ಸ್ಥಳದಲ್ಲೇ ಮಹಿಳೆಯರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವುದು ಮತ್ತು ಆಧಾರ ಜೋಡಣೆ ಮಾಡುವುದು , ಗೃಹಲಕ್ಷ್ಮೀಯ ಅರ್ಜಿ ಸ್ಥಿತಿ ಪರಿಶೀಲಿಸುವುದು ಹಾಗೂ ಗೃಹಲಕ್ಷ್ಮೀ ಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಬಗೆಹರಿಸಲೇಬೇಕೆಂದು ಸರ್ಕಾರ ಆದೇಶಿಸಿದೆ. ಅಲ್ಲದೇ ಪ್ರತಿಯೊಂದು ಗ್ರಾಮದಲ್ಲಿ ಮಹಿಳೆಯರಿಗೆ ಈ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿ ಅವರನ್ನು ಕ್ಯಾಂಪ್ ಕರೆತರುವ ಜವಾಬ್ದಾರಿಯನ್ನು ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದೆ.

ಅಲ್ಲದೇ ಸ್ಥಳೀಯ ಪೇಪರ್ ಹಾಗೂ ಮಾಧ್ಯಮಗಳಲ್ಲಿ ಈ ಬಗ್ಗೆ ಸೂಕ್ತ ಪ್ರಚಾರ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಆ ಮೂಲಕ ಕೆಲವರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಸಿಗುತ್ತಿದೆ.‌ ನಮಗೆ ಸೌಲಭ್ಯ ಸಿಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದ ಮಹಿಳೆಯರಿಗೆ ಈ ಸುದ್ದಿ ಭರವಸೆ ತಂದಿದೆ. ಸ್ವತಃ ಅಧಿಕಾರಿ ಗಳು ಹಾಗೂ ಇತರ ಇಲಾಖೆಯ ಸಿಬ್ಬಂದಿ ಬ್ಯಾಂಕ್ ಸಿಬ್ಬಂದಿ ಸಮ್ಮುಖದಲ್ಲೇ ಕ್ಯಾಂಪ್ ನಡೆಯೋದರಿಂದ ಹೆಣ್ಮಕ್ಕಳನ್ನ ದಾಖಲೆಗಳ ಹೆಸರಿನಲ್ಲಿ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಾಡಿಸೋದು ತಪ್ಪಲಿದೆ ಎಂಬುದು ಮಹಿಳೆಯ ಅಳಲು.

Gruha Lakshmi scheme Govt Organised Gruhalakshmi Camp for technical issues Solving

Comments are closed.