ಸೆಲ್ಪಿ ಮಮ್ಮಿಯಾದ ಚಿರು ಪತ್ನಿ….!! ತಿಂಗಳಾಂತ್ಯಕ್ಕೆ ತೆರೆಗೆ ಬರ್ತಿದ್ದಾರೆ ಮೇಘನಾ ರಾಜ್…!!

ಸದ್ಯ ಪತಿಯ ಅಗಲಿಕೆಯ ನೋವು ಹಾಗೂ ಜ್ಯೂನಿಯರ್ ಚಿರು ಆಗಮನದ ಖುಷಿ ನಡುವೆ ದಿನ ಕಳೆಯುತ್ತಿರುವ ಮೇಘನಾಗೆ ತಿಂಗಳಾಂತ್ಯಕ್ಕೆ ಸಿಹಿಗಳಿಗೆಯೊಂದು ಕಾದಿದೆ. ಸೃಜನ್ ಲೊಕೇಶ್ ಜೊತೆ ಸೆಲ್ಪಿ ಮಮ್ಮಿಯಾಗಿ ಮೇಘನಾ ತೆರೆಗೆ ಬರಲಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗಾಗಲೇ ಮೇಘನಾ ರಾಜ್ ಅಭಿಯನದ ಕನ್ನಡ ಚಿತ್ರ ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ತೆರೆಗೆ ಬರ ಬೇಕಿತ್ತು. ಆದರೆ ಕೊರೋನಾ ಥಿಯೇಟರ್ ಬಾಗಿಲು ಮುಚ್ಚಿಸಿದ ಪರಿಣಾಮ ಚಿತ್ರ ಬಿಡುಗಡೆಯಾಗಲಿಲ್ಲ.

ಇನ್ನೇನು ಕೊರೋನಾ ಸಂಕಷ್ಟ ಮುಗಿದ ಮೇಲೆ ಚಿತ್ರಬಿಡುಗಡೆ ಮಾಡೋಣ ಎನ್ನುವಷ್ಟರಲ್ಲಿ ಚಿರು ಇನ್ನಿಲ್ಲವಾದರು. ಹೀಗಾಗಿ ಚಿತ್ರ ಬಿಡುಗಡೆಗೆ ಇನ್ನು ಮುಹೂರ್ತ ಕೂಡಿ ಬಂದಿರಲಿಲ್ಲ. ಇದೀಗ ಮೇಘನಾ ಸೆಲ್ಪಿ ಮಮ್ಮಿ ಅವತಾರದಲ್ಲಿ ತೆರೆಗೆ ಬರೋಕೆ ಕಾಲ ಸನ್ನಿಹಿತ ವಾಗಿದೆ.

ಇದೇ ತಿಂಗಳಾಂತ್ಯಕ್ಕೆ ಅಂದ್ರೇ ಡಿಸೆಂಬರ್ ೨೮ ರಂದು ಈ ಚಿತ್ರ ರಾಜ್ಯದಾದ್ಯಂತ ತೆರೆಗೆ ಬರಲಿದೆ. ಸಂಪೂರ್ಣ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾ ರಿಲೀಸ್ ಸ್ಥಗಿತಗೊಂಡಿದ್ದರಿಂದ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ.
ಮೊಬೈಲ್ ಮಾಯಾಜಾಲದ ಸೈಡ್ ಎಫೆಕ್ಟ್ ಹೇಳೋ ಈ ಸಿನಿಮಾದಲ್ಲಿ ಸೃಜನ್ ಲೊಕೇಶ್ ಗೂಗಲ್ ಡ್ಯಾಡಿ ಪಾತ್ರದಲ್ಲಿದ್ದರೇ ಮೇಘನಾ ಸೆಲ್ಪಿಮಮ್ಮಿ ಪಾತ್ರದಲ್ಲಿ ಮಿಂಚಿದ್ದಾರೆ.

ಅಚ್ಯುತ್ ರಾವ್, ಸುಂದರ್ ರಾಜ್, ಸುಧಾ ಬರಗೂರು, ಗಿರಿಜಾ ಲೊಕೇಶ್, ದತ್ತಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾಗ್ಯಶ್ರೀ ಮತ್ತು ಮಾಸ್ಟರ್ ಆಲಾಪ್ ಮಕ್ಕಳ ಪಾತ್ರದಲ್ಲಿ ನಟಿಸಿದ್ದಾರೆ.

ಮಧುಚಂದ್ರ ಆರ್. ನಿರ್ದೇಶಿಸಿರುವ ಈ ಸಿನಿಮಾವನ್ನು ಬುತ್ತಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಕಾಶ್ ನಿರ್ಮಿಸಿದ್ದು, ಸಮಂತ್ ನಾಗ್ ಸಂಗೀತವಿದೆ.

Comments are closed.