ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ ಮಂಗಳೂರು – ಬೆಂಗಳೂರು ರೈಲು

ಮಂಗಳೂರು : ಬೆಂಗಳೂರು- ಮಂಗಳೂರು ನಡುವೆ ರೈಲು ಸಂಚಾರ ಮತ್ತೆ ಪುನರಾರಂಭವಾಗಲಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಮಂಗಳೂರು – ಬೆಂಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜಧಾನಿ ಹಾಗೂ ಕರಾವಳಿ ನಡುವೆ ಸಂಚರಿಸುತ್ತಿದ್ದ ರೈಲು ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ನಂತರದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಪುನರಾರಂಭಿಸಲಾಯಿತಾದರೂ,  ವಿಶೇಷ ರೈಲು ಸೇವೆಯನ್ನು ಪ್ರಯಾಣಿಕರ ಕೊರತೆಯಿಂದ ಸೆಪ್ಟೆಂಬರ್ ಅಂತ್ಯದ ವೇಳೆಗೆ ರದ್ಧುಪಡಿಸಲಾಗಿತ್ತು.

ಇದೀಗ ವಿಶೇಷ ಎಕ್ಸ್ ಪ್ರೆಸ್ ಈ ರೈಲು ಬೆಂಗಳೂರು – ಮಂಗಳೂರು ಕೇಂದ್ರ ನಡುವೆ  ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಡಿ.8ರಿಂದ 24ರವರೆಗೆ ಸಂಚರಿಸಲಿವೆ. ಬೆಂಗಳೂರಿನಿಂದ ರಾತ್ರಿ 10-30 ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 8-35ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.