ಮಂಗಳವಾರ, ಏಪ್ರಿಲ್ 29, 2025
HomeCinemaSudeep Birthday Shiva Rajkumar : ಸುದೀಪ್ ಬರ್ತಡೇಗೆ ಕಲರ್ ಫುಲ್ ಕಾಮನ್ ಡಿಪಿ: ಪೋಟೋ...

Sudeep Birthday Shiva Rajkumar : ಸುದೀಪ್ ಬರ್ತಡೇಗೆ ಕಲರ್ ಫುಲ್ ಕಾಮನ್ ಡಿಪಿ: ಪೋಟೋ ಜೊತೆ ವೈರಲ್ ಆಯ್ತು ಶಿವಣ್ಣ ಸ್ಪೆಶಲ್ ವಿಶ್

- Advertisement -

Sudeep Birthday Shiva Rajkumar : ಸ್ಟಾರ್ ನಟರು ಅಂದ ಮೇಲೆ ಅವರ ಬರ್ತಡೇ ಸ್ಪೆಶಲ್ ಆಗಿರೋದು ಕಾಮನ್. ಅದರಲ್ಲೂ ಬಹುಭಾಷಾ ನಟ ಸುದೀಪ್ ಅಂದ ಮೇಲೆ ಈ ಸಂಭ್ರಮ ಕೊಂಚ ಹೆಚ್ಚು ಇರಲೇಬೇಕು. ಸದ್ಯದಲ್ಲೇ ಸ್ಯಾಂಡಲ್ ವುಡ್ ಬಾದಶಾ ಕಿಚ್ಚ ಸುದೀಪ್ ಹುಟ್ಟುಹಬ್ಬವಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಭಿಮಾನಿಗಳು ಹೆಬ್ಬುಲಿ ಸುದೀಪ್ ಗಾಗಿ ಕಾಮನ್ ಸ್ಪೆಶಲ್ ಡಿಪಿಯೊಂದನ್ನು ರಿಲೀಸ್ ಮಾಡಿದ್ದು, ಪೋಟೋ ಸಖತ್ ವೈರಲ್ ಆಗಿದೆ.

ಇಷ್ಟರಲ್ಲೇ ಸುದೀಪ್ ಹುಟ್ಟುಹಬ್ಬವಿದೆ. ಸದ್ಯ ವಿಕ್ರಾಂತ್ ರೋಣ ಗೆಲುವಿನ ಸಂಭ್ರಮದಲ್ಲಿರೋ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೂಡ ಸಖತ್ ಪ್ಲ್ಯಾನ್ ಮಾಡಿದ್ದಾರೆ. ಸುದೀಪ್ ಬರ್ತಡೇ ಸಂಭ್ರಮಿಸೋಕೆ ಸುಂದರವಾದ ಕಾಮನ್ ಡಿಪಿಯನ್ನು ಅಭಿಮಾನಿಗಳು ಸಿದ್ಧಪಡಿಸಿದ್ದಾರೆ. ಬಾದ್ ಶಾ ಎಂದು ಇಂಗ್ಲೀಷ್ ನಲ್ಲಿ ಬರೆದಿರೋ ಡಿಪಿಯಲ್ಲಿ ಸುದೀಪ್ ಸುಂದರವಾದ ಪೋಟೋವಿದೆ. ಅಲ್ಲದೇ ಈ ಪೋಟೋದಲ್ಲಿ ಸುತ್ತಲೂ ಅಭಿಮಾನಿಗಳು ನೆರೆದಿದ್ದಾರೆ.

ಈ ಕಾಮನ್ ಡಿಪಿಯಲ್ಲಿ ಇನ್ನೊಂದು ವಿಶೇಷವೆಂದರೇ ಸುದೀಪ್ ಬರ್ತಡೇ ಡಿಪಿಯನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ರಿಲೀಸ್ ಮಾಡಿದ್ದಾರೆ. ಸುದೀಪ್ ಬರ್ತಡೇಯ ಸ್ಪೆಶಲ್ ಡಿಪಿಯನ್ನು ರಿಲೀಸ್ ಮಾಡಿದ ಶಿವಣ್ಣ ಸೋಷಿಯಲ್ ಮೀಡಿಯಾದಲ್ಲಿ ಅದರ ಬಗ್ಗೆ ಪೋಸ್ಟ್ ಹಾಕಿದ್ದಾರೆ. ನನ್ನ ಗೆಳೆಯ, ಸಹೋದರನ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಶೇರ್ ಮಾಡಲು ಖುಷಿಯಾಗುತ್ತಿದೆ ಎಂದಿದ್ದಾರೆ.ಶಿವರಾಜ್ ಕುಮಾರ್ ಶೇರ್ ಮಾಡಿದ ಈ ಪೋಸ್ಟ್ ಗೆ ಭರ್ಜರಿ ಲೈಕ್ಸ್ ಹರಿದು ಬಂದಿದೆ.

ಸುದೀಪ್ ಬಗ್ಗೆ ಶಿವಣ್ಣ ಹಂಚಿಕೊಂಡ ಪೋಸ್ಟ್ ಗೆ ಈಗಾಗಲೇ 35 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದ್ದು, 225 ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಕಳೆದ‌ ಎರಡು ವರ್ಷಗಳಿಂದ ಸುದೀಪ್ ಕರೋನಾ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು.

ಈ ಭಾರಿ ಸುದೀಪ್ ವಿಕ್ರಾಂತ್ ರೋಣ ಗೆಲುವಿನ ಖುಷಿಯಲ್ಲಿದ್ದು, ಸಿನಿಮಾ 200 ಕೋಟಿ ಕ್ಲಬ್ ಸೇರಿದೆ. ಇದೇ ಖುಷಿಯಲ್ಲಿ ಸುದೀಪ್ ಬರ್ತಡೇ ಇನ್ನಷ್ಟು ಅದ್ದೂರಿಯಾಗಿ ನಡೆಯಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಈ ಸೆಲೆಬ್ರೆಶನ್ ಗೆ ಮತ್ತಷ್ಟು ಮೆರುಗು ಕೊಡಲು ಈಗಾಗಲೇ ಅಭಿಮಾನಿಗಳು ಕಾಮನ್ ಡಿಪಿ ರಿಲೀಸ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಹೊಸ ಅವತಾರ ಸಖತ್ ಸದ್ದು ಮಾಡ್ತಿದೆ.

ಇದನ್ನೂ ಓದಿ : Uday Surya evicted : ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ನಟ ಉದಯ್​ ಸೂರ್ಯ

ಇದನ್ನೂ ಓದಿ : Gangubai Kathiawadi : ಆಸ್ಕರ್​ಗೆ ಅಧಿಕೃತ ಆಯ್ಕೆ ಪಡೆದುಕೊಳ್ಳುತ್ತಾ ಬಾಲಿವುಡ್​ನ ಗಂಗೂಬಾಯಿ ಕಾಥಿಯಾವಾಡಿ

Colorful common DP for Sudeep Birthday : Shiva Rajkumar special wish with photo goes viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular